Advertisement

ಮತ್ತೆ ಪೆಟ್ರೋಲ್ ದರ 7 ರೂ, ಡೀಸೆಲ್ ಬೆಲೆ 25 ರೂ. ಹೆಚ್ಚಳ!!

[ad_1]

Petrol- Diesel : ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ನಿರ್ಮಾಣವಾಗಿರುವ ಯುದ್ಧದ ವಾತಾವರಣದಿಂದ ಹಾಗೂ ಹಾರ್ಮುಝ್ ಜಲಸಂಧಿಯ ಮೂಲಕ ತೈಲ ಸಾಗಣೆ ಸಮಸ್ಯೆ  ಹಿನ್ನೆಲೆ ಹಲವು ದೇಶಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅನಿಲ ಬೆಲೆಗಳನ್ನು (Gas Cylinder) ಹೆಚ್ಚುತ್ತಿದೆ. ಇದೀಗ ಭಾರತದಲ್ಲಿಯೂ ಶೆಲ್ ಪೆಟ್ರೋಲ್ ಬಂಕ್ ಇಂಧನ ಬೆಲೆಯನ್ನು ಏರಿಕೆ ಮಾಡಿ ಜನಸಾಮಾನ್ಯರಿಗೆ ಶಾಕ್ ನೀಡಿದೆ.

ಕಳೆದ 15 ದಿನಗಳಲ್ಲಿ ಮೂರು ಬಾರಿ ದರ ಏರಿಕೆ ಮಾಡಿದ್ದ ಶೆಲ್ ಇದೀಗ ಮತ್ತೆ ಪೆಟ್ರೋಲ್, ಡೀಸೆಲ್ ದರ (Petrol – Diesel Price) ಏರಿಕೆ ಮಾಡಿದೆ. ಸಾಮಾನ್ಯ ಪೆಟ್ರೋಲ್ ದರ ಮೊದಲು 106 ರೂ.ನಿಂದ 108.50 ರೂ. ಆಗಿತ್ತು. ನಾಲ್ಕು ದಿನದ ಹಿಂದೆ 112 ರೂ.ಗೆ ಏರಿಕೆ ಆಗಿತ್ತು. ಈಗ 119.8 ರೂ.ಗೆ ಏರಿಕೆಯಾಗಿದೆ. ಸಾಮಾನ್ಯ ಪೆಟ್ರೋಲ್ ದರ ಲೀಟರ್‌ಗೆ 7 ರೂ.ನಷ್ಟು ಹೆಚ್ಚಳವಾಗಿದೆ. ಪ್ರೀಮಿಯಂ ಪೆಟ್ರೋಲ್ ದರ ಲೀಟರ್‌ಗೆ 122.42 ರೂ.ನಿಂದ 129.8ಕ್ಕೆ ಏರಿಕೆಯಾಗಿದೆ. 

ಸಾಮಾನ್ಯ ಡೀಸೆಲ್ 91 ರೂ.ನಿಂದ 93.50 ರೂ.ಗೆ ಏರಿಕೆ ಆಗಿತ್ತು. ನಾಲ್ಕು ದಿನದ ಹಿಂದೆ ಲೀಟರ್ ಡಿಸೇಲ್ 98 ರೂ. ಆಗಿತ್ತು. ಇಂದು 123ಕ್ಕೆ ಏರಿಕೆಯಾಗಿದೆ. ಡೀಸೆಲ್ ದರ 25 ರೂ. ಹೆಚ್ಚಳವಾಗಿದೆ. ಪ್ರೀಮಿಯಂ ಡೀಸೆಲ್ ಪ್ರತಿ ಲೀಟರ್‌ಗೆ 108.50 ರಿಂದ 133ಕ್ಕೆ ಏರಿಕೆಯಾಗಿದೆ. 

ಬೆಂಗಳೂರು ಸೇರಿದಂತೆ ದೇಶದಾದ್ಯಂತ ಶೆಲ್​ ಪೆಟ್ರೋಲ್ ಬಂಕ್​ಗಳು ಕಾರ್ಯ ನಿರ್ವಹಿಸುತ್ತಿದೆ. ಶೆಲ್​ ಅಂದ್ರೆ ಪೆಟ್ರೋಲ್​​-ಡೀಸೆಲ್​ ದುಬಾರಿ ಅನ್ನೋ ಮಾತಿದೆ. ಇತರೆ ಬಂಕ್​​ಗಳಿಗೆ ಹೋಲಿಸಿದ್ರೆ ಶೆಲ್​​ನಲ್ಲಿ ಪೆಟ್ರೋಲ್​-ಡೀಸೆಲ್​ ಬೆಲೆ ಹೆಚ್ಚಾಗಿಯೇ ಇರುತ್ತೆ. ಇದೀಗ ಇಂದು ಕೂಡ ಮತ್ತೆ ಪೆಟ್ರೋಲ್, ಡಿಸೇಲ್ ದರದಲ್ಲಿ ಭಾರೀ ಏರಿಕೆ ಆಗಿರೋದರಿಂದ ಜನಸಾಮಾನ್ಯರ ಬೇಸರ ವ್ಯಕ್ತಪಡಿಸಿದ್ದಾರೆ.

banner

ದಿಢೀರ್ ಏರಿಕೆ ಬಗ್ಗೆ ತಿಳಿಯದೆ ಬಂಕ್​​ಗಳಿಗೆ ಬಂದ ವಾಹನ ಸವಾರರು ಬೆಲೆ ಕೇಳಿ ಬಳಿಕ ಪೆಟ್ರೋಲ್ -ಡೀಸೆಲ್ ಹಾಕಿಸದೇ ವಾಪಸ್ ಆಗ್ತಿದ್ದಾರೆ. ರೇಟ್ ಜಾಸ್ತಿ ಆಯಿತು, ಇಷ್ಟು ದುಡ್ಡು ಕೊಡೋಕೆ ಆಗಲ್ಲ. ಬೇರೆ ಪೆಟ್ರೋಲ್ ಬಂಕ್ ಗಳಲ್ಲಿ ಹಾಕಿಸ್ತೀವಿ ಎಂದು ಬೈಕ್​ ಸವಾರರು ಗೊಣಗುತ್ತಾ ಹೊರಟಿದ್ದಾರೆ.

ಜಾಗತಿಕ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ ಸುಮಾರು 120 ಡಾಲರ್​​ಗೆ ಏರಿದ್ದರೂ ಭಾರತದಲ್ಲಿ (India), ಇಲ್ಲಿಯವರೆಗೆ ಸರ್ಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿಲ್ಲ.



[ad_2]

Source link

Leave a Reply

Your email address will not be published. Required fields are marked *