[ad_1]
ಹಾವೇರಿ: ರಾಷ್ಟ್ರೀಯ ಸ್ವಯಂ ಸೇವಕ (RSS) ಸಂಘದ ಬಾಲಕರ ಶಾಖೆ ನಡೆಯುತ್ತಿದ್ದ ವೇಳೆ ಅನ್ಯಕೋಮಿನ ಬಾಲಕ ಚಾಕು ಹಿಡಿದುಕೊಂಡು ಬಂದು ಆತಂಕ ಮೂಡಿಸಿದ ಘಟನೆ ಹಾವೇರಿ (Haveri) ನಗರದಲ್ಲಿ ನಡೆದಿದೆ.
ಹಾವೇರಿ ನಗರದ 2ನೇ ನಂಬರ್ ಸರ್ಕಾರಿ ಶಾಲೆಯ (School) ಆವರಣಕ್ಕೆ ಚಾಕು ಹಿಡಿದು ಬಂದು ಅನ್ಯಕೋಮಿನ ಬಾಲಕ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಧಮ್ಕಿ ಹಾಕಿದ್ದಾನೆ. ಮಂಗಳವಾರವೂ ಶಾಖೆ ನಡೆಯುತ್ತಿದ್ದ ವೇಳೆ ಬಂದು ಇಬ್ಬರು ಬಾಲಕರು ಬಂದು ಧಮ್ಕಿ ಹಾಕಿ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದು ಸಂಜೆ(ಏ.1) ಶಾಖೆಯಲ್ಲಿ ಬಾಲಕರಿಗೆ ಯೋಗ, ಪ್ರಾಣಾಯಾಮ ಮತ್ತು ಪ್ರಾರ್ಥನೆಯನ್ನು ಹೇಳಿ ಕೊಡಲಾಗುತ್ತಿತ್ತು. ಅದರೆ ಏಕಾಏಕಿ ಬಂದ ಬಾಲಕ ಚಾಕು ಪ್ರದರ್ಶನ ಮಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾಕೆ ಚಾಕು ಹಿಡಿದು ಬಂದೆ ಎಂದು ಪ್ರಶ್ನೆ ಕೇಳುತ್ತಿದ್ದಂತೆ ಚಾಕು ಬಿಟ್ಟು ಬಾಲಕ ಓಡಿ ಹೋಗಿದ್ದಾನೆ. ಹಾವೇರಿ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಹಾವೇರಿ ನಗರ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ಆರ್‌ಎಸ್‌ಎಸ್ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವಂತೆ ಆಗ್ರಹಿಸಿದ್ದಾರೆ.
[ad_2]
Source link publictv.in

















Leave a Reply