Advertisement

ಮೀನುಗಾರಿಕೆ ವೇಳೆ ಪಲ್ಗುಣಿ ನದಿಯಲ್ಲಿ ಮಗುಚಿದ ದೋಣಿ- ಓರ್ವ ಸಾವು, ಮತ್ತೊಬ್ಬ ನೀರುಪಾಲು

[ad_1]

Mangaluru : ಫಲ್ಗುಣಿ ನದಿಯಲ್ಲಿ ಮೀನುಗಾರಿಕಾ ಬೋಟ್ ಮಗುಚಿ ಇಬ್ಬರು ಯುವಕರು ನೀರುಪಾಲಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅವರಲ್ಲೊಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನೊಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. 

ಮೃತರಾದವರನ್ನು ಕುಂಜತ್‌ಬೈಲ್ ನಿವಾಸಿ 28 ವರ್ಷದ ಗಣೇಶ್ ಎಂದು ಗುರುತಿಸಲಾಗಿದೆ ಹಾಗೂ ನೀರು ಪಾಲಾದ ಮತ್ತೊಬ್ಬ ಯುವಕನನ್ನು 24 ವರ್ಷದ ರಾಯಲ್ ಎಂದು ಗುರುತಿಸಲಾಗಿದೆ. ರಾಯಲ್‌ಗಾಗಿ ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಒಟ್ಟು ಮೂರು ಜನ ಮೀನು ಹಿಡಿಯುವುದಕ್ಕೆ ಹೋಗಿದ್ದರು ಅವರಲ್ಲಿ 29 ವರ್ಷದ ನಿತೇಶ್ ಅವರು ಸುರಕ್ಷಿತವಾಗಿ ಈಜಿ ದಡ ಸೇರಿದ್ದಾರೆ. ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗಣೇಶ್, ರಾಯಲ್ ಮತ್ತು ನಿತೇಶ್ ಎಂಬ ಮೂವರು ಯುವಕರ ತಂಡ ಬುಧವಾರ ಮುಂಜಾನೆ ಸುಮಾರು 1:30 ರ ಸುಮಾರಿಗೆ ಸಣ್ಣ ನಾಡದೋಣಿಯಲ್ಲಿ ಮೀನುಗಾರಿಕೆಗಾಗಿ ನದಿಗೆ ತೆರಳಿದ್ದರು. ನದಿಯ ಮಧ್ಯಭಾಗ ತಲುಪಿದಾಗ ದೋಣಿ ಹಠಾತ್ತನೆ ಮಗುಚಿ ಬಿದ್ದು ಮೂವರೂ ನೀರಿಗೆ ಬಿದ್ದಿದ್ದಾರೆ. ಈ ಪೈಕಿ ನಿತೇಶ್ ಅವರು ಈಜಿ ದಡ ಸೇರಿದ್ದಾರೆ. ಗಣೇಶ್ ಮತ್ತು ರಾಯಲ್ ಅವರಿಗೆ ಈಜಲು ಬಾರದೆ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ ಎಂದು ವರದಿಯಾಗಿದೆ.



[ad_2]

Source link

Leave a Reply

Your email address will not be published. Required fields are marked *