Advertisement

ಗ್ಯಾಸ್‌ ಅಭಾವದ ಲಾಭ ಪಡೆದ ಸೈಬರ್‌ ವಂಚಕರು – KYC ಅಪ್ಡೇಟ್‌ ಹೆಸರಲ್ಲಿ ಲಕ್ಷ ಲಕ್ಷ ವಂಚನೆ

[ad_1]

HARIRAM SHANKAR

ಉಡುಪಿ: ಗ್ಯಾಸ್‌ (LPG) ಅಭಾವದ ಲಾಭ ಪಡೆದ ಸೈಬರ್‌ ವಂಚಕರು ಉಡುಪಿಯಲ್ಲಿ ಇಬ್ಬರಿಗೆ ಲಕ್ಷ ಲಕ್ಷ ರೂ. ಹಣ ವಂಚಿಸಿರುವ ಪ್ರಕರಣ ನಡೆದಿದೆ. ಈ ಬಗ್ಗೆ ಉಡುಪಿ (Udupi) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.

ಸೈಬರ್ ಕ್ರಿಮಿನಲ್‌ಗಳು ಗ್ಯಾಸ್ ಸಿಲಿಂಡರ್‌ಗಾಗಿ ಕೆವೈಸಿ ಅಪ್ಡೇಟ್ ಮಾಡಿ ಎಂದು ಏಜೆನ್ಸಿ ಹೆಸರಲ್ಲಿ ಅಪರಿಚಿತ ನಂಬರ್‌ನಿಂದ ಕರೆ ಮಾಡುತ್ತಾರೆ. ಬಳಿಕ ವಾಟ್ಸಪ್‌ಗೆ ಎಪಿಕೆ ಫೈಲ್ ಕಳಿಸುತ್ತಾರೆ. ಫೈಲ್ ಡೌನ್ಲೋಡ್ ಮಾಡಿದರೆ ಫೋನ್‌ ಹ್ಯಾಕ್‌ ಆಗಲಿದೆ. ಇದರಿಂದ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಪಡೆದು ವಂಚನೆ ಮಾಡುತ್ತಾರೆ. ಇದೇ ರೀತಿಯ ಎರಡು ಪ್ರಕರಣ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸೈಬರ್‌ ವಂಚಕರ ಖೆಡ್ಡಾಕ್ಕೆ ಬಿದ್ದು ಕೋಟಿ ರೂಪಾಯಿ ಕಳೆದುಕೊಂಡ ಭೂಪ!

 ಒಂದು ಪ್ರಕರಣದಲ್ಲಿ 1.5 ಲಕ್ಷ ರೂ. ವಂಚನೆಯಾಗಿದೆ. ಇನ್ನೊಂದು ಪ್ರಕರಣದಲ್ಲಿ 6 ಲಕ್ಷ ರೂ. ಗೂ ಹೆಚ್ಚು ಹಣ ವಂಚನೆಯಾಗಿದೆ. ಬ್ಯಾಂಕ್ ಖಾತೆಯಿಂದ ಹಣ ಹೋಗಿದೆ. ಬೇಗ ಸಿಲಿಂಡರ್ ಕೊಡುತ್ತೇವೆ, ಹಳೆಯ ರೇಟಿನಲ್ಲಿ ಸಿಲಿಂಡರ್ ಕೊಡ್ತೇವೆ ಎಂದು ಫೇಕ್ ವೆಬ್‌ಸೈಟ್ ಮೂಲಕ ವಂಚಿಸುತ್ತಾರೆ. ಕೆವೈಸಿ ಬಗ್ಗೆ ಯಾವುದೇ ತರಾತುರಿ ಬೇಡ. ಸರ್ಕಾರ ಹೊಸ ಆದೇಶ ಮಾಡಿಲ್ಲ. ಈ ಹಿಂದೆ ಮಾಡಿರುವ ಆದೇಶ ಜಾರಿಯಲ್ಲಿದೆ. ಎಪಿಕೆ ಫೈಲ್‌ಗಳು ಅಪಾಯಕಾರಿ ಎಂದು ಮಾಹಿತಿ ನೀಡಿದ್ದಾರೆ.

ಸಿಲಿಂಡರ್ ಸಿಗೋದಿಲ್ಲ ಎಂಬ ಜನರ ಆತಂಕವನ್ನು ಲಾಭ ಮಾಡಿಕೊಳ್ಳಲು ವಂಚಕರು ಹೊರಟಿದ್ದಾರೆ. ಜನರು ಪ್ಯಾನಿಕ್ ಆಗಿರುವುದೇ ಇವರಿಗೆ ಹಣ ಮಾಡುವ ಮಾರ್ಗವಾಗಿದೆ. ಜನ ಎಚ್ಚರಿಕೆಯಿಂದ ಇರಬೇಕು. ಯಾವುದೇ ಕಾರಣಕ್ಕೂ ಎಪಿಕೆ ಫೈಲ್‌ ಡೌನ್ಲೋಡ್ ಮಾಡಬಾರದು. ಇಂತಹ ಕರೆ ಬಂದರೆ, ವಂಚನೆಯಾದರೆ 1930 ನಂಬರ್‌ಗೆ ಕರೆ ಮಾಡಿ ಅಥವಾ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿ. ಒಂದು ಗಂಟೆ ಒಳಗೆ ಗೋಲ್ಡನ್ ಪಿರಿಯಡ್‌ನಲ್ಲಿ ಹೇಳಿದರೆ ಕ್ರಮ ಕೈಗೊಳ್ಳಬಹುದು. ಸೈಬರ್ ಕ್ರೈಂ ಟ್ರೇಸ್ ಮಾಡುವುದು ಸವಾಲಾಗಿದೆ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ನಕಲಿ ಬ್ಯಾಂಕ್‌ ಖಾತೆ ತೆರೆದು ಸೈಬರ್‌ ವಂಚಕರಿಗೆ ಸಹಾಯ – ಎಂಜಿನಿಯರಿಂಗ್ ವಿದ್ಯಾರ್ಥಿ ಸೇರಿ ಇಬ್ಬರು ಅರೆಸ್ಟ್‌

[ad_2]

Source link publictv.in

Leave a Reply

Your email address will not be published. Required fields are marked *