Advertisement

ಯುದ್ಧದಿಂದ ಔಷಧಿಗಳ ದರ ಏರಿಕೆಯಾದರೆ ನಾವು ಏನೂ ಮಾಡಲು ಆಗಲ್ಲ: ದಿನೇಶ್‌ ಗುಂಡೂರಾವ್‌

[ad_1]

Dinesh Gundurao 1

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ (Middle East War) ಔಷಧಿಗಳ ದರ ಏರಿಕೆಯಾದರೆ ನಾವು ಏನೂ ಮಾಡಲು ಆಗುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ (Dinesh Gundu Rao) ಹೇಳಿದ್ದಾರೆ.

ಔಷಧಿಗಳ ದರ ಏರಿಕೆ(Medicine Price Hike) ವಿಚಾರ ಸಂಬಂಧ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನೀತಿಯ ಮೇಲೆ ನಿಂತಿದೆ. ದರ ಏರಿಕೆ ಮಾಡುವುದು ನಮ್ಮ ಕೈಯಲ್ಲಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಾರ್ಮುಜ್‌ ಸಮುದ್ರ ಬಾಂಬ್‌ಗಳಿಂದ ತಪ್ಪಿಸಿ ಬದಲಿ ಮಾರ್ಗ ಬಳಸಿ ಭಾರತಕ್ಕೆ ಹಡಗು ಬಂದಿದ್ದೇಗೆ?

ಇಲ್ಲಿರುವ ರೋಗಿಗಳಿಗೆ ಔಷಧಿ ಕಡಿಮೆಯಾಗಬಾರದು. ಆ ರೀತಿ ನಾವು ನೋಡಿಕೊಳ್ಳುತ್ತೇವೆ. ಸರ್ಕಾರದಿಂದ ಯಾವ ಔಷಧಿ ಕೊಡಬೇಕೋ ಅದನ್ನು ಕೊಡುತ್ತೇವೆ. ಹೆಚ್ಚಿನ ದರವಾದರೆ ಅದೇ ದರದಲ್ಲಿ ಖರೀದಿ ಮಾಡುತ್ತೇವೆ. ನಮಗೆ ರೋಗಿಗಳ ಹಿತದೃಷ್ಟಿ ಮುಖ್ಯ ಎಂದಿದ್ದಾರೆ.

[ad_2]

Source link publictv.in

Leave a Reply

Your email address will not be published. Required fields are marked *