[ad_1]
1
London : ಮಹಿಳೆ ಒಬ್ಬಳು ಅವಳಿ ಸಹೋದರರೊಂದಿಗೆ ಹಾಸಿಗೆ ಹಂಚಿಕೊಂಡಿದ್ದು ಇದೀಗ ಗರ್ಭಿಣಿಯಾಗಿದ್ದಾಳೆ. ಆದರೆ ಇದೀಗ ಮಗುವಿನ ತಂದೆ ಯಾರೆಂಬ ಗೊಂದಲ ಹುಟ್ಟಿಕೊಂಡಿದ್ದು, ಈ ಪ್ರಕರಣ ಕೋರ್ಟ್ ಮೆಟ್ಟಿಲನ್ನು ಏರಿದೆ. ಈ ಸಂದರ್ಭದಲ್ಲಿ ಡಿಎನ್ಎ ಟೆಸ್ಟ್ ಕೂಡ ಕೈಕೊಟ್ಟಿದೆ.

ಯಸ್ , ಲಂಡನ್ ನಿವಾಸಿಯಾಗಿರುವ ಮಹಿಳೆ ನಾಲ್ಕು ದಿನ ಅಂತರದಲ್ಲಿ ಇಬ್ಬರ ಜೊತೆ ಸಂಬಂಧ ಬೆಳೆಸಿದ್ದಾರೆ. ನಾಲ್ಕು ದಿನ ಇಬ್ಬರ ಜೊತೆ ಬೆಡ್ ಹಂಚಿಕೊಂಡಿದ್ದಾಳೆ. ಅವಳು ಹಾಸಿಗೆ ಹಂಚಿಕೊಂಡಿದ್ದು ಇಬ್ಬರು ಅವಳಿ ಸಹೋದರರ ಜೊತೆ. ಹೀಗೆ ಎಲ್ಲವೂ ಖುಷಿಯಾಗಿರುವ ಸಂದರ್ಭ ಕೆಲ ತಿಂಗಳಲ್ಲಿ ಈಕೆ ಗರ್ಭಿಣಿಯಾಗಿದ್ದಾಳೆ. ಆದರೆ ಮಗುವಿನ ತಂದೆ ಯಾರು ಅನ್ನೋದು ಗೊತ್ತಾಗುತ್ತಿಲ್ಲ. ಇದರಲ್ಲಿ ಯಾರಿಂದ ಗರ್ಭಿಣಿಯಾಗಿದ್ದಾಳೆ ಅನ್ನೋದೇ ಗೊತ್ತಾಗುತ್ತಿಲ್ಲ. ಗೊಂದಲದ ವಿಚಾರವೇನೆಂದರೆ ಇಬ್ಬರು ಸಹೋದರರು ಮಗುವಿನ ತಂದೆ ನಾನು ಇಂದು ವಾದ ಹೂಡಿದ್ದಾರೆ. ಹೀಗಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.
ಸಾಮಾನ್ಯವಾಗಿ ತಂದೆ ಯಾರು ಎಂಬ ಗೊಂದಲ ಬಂದಾಗ ಡಿಎನ್‌ಎ ಟೆಸ್ಟ್ ಮಾಡಲಾಗುತ್ತದೆ. ಆದರೆ ಇಲ್ಲಿ ಅವಳಿ ಸಹೋದರರಾಗಿರುವ ಕಾರಣ ಇವರ ಡಿಎನ್‌ಎ ರಚನೆ ಒಂದೇ ರೀತಿ ಇರುತ್ತೆ. ಹೀಗಾಗಿ ಡಿಎನ್‌ಎ ಮೂಲಕ ತಂದೆ ಯಾರು ಅನ್ನೋದು ಪತ್ತೆ ಹಚ್ಚುವುದು ಅಸಾಧ್ಯವಾಗಿದೆ. ಸದ್ಯ ಇರುವ ತಂತ್ರಜ್ಞಾನ ಪರೀಕ್ಷೆಗಳ ಮೂಲಕ ತಂದೆ ಯಾರು ಎಂದು ಹೇಳುವುದು ಅಸಾಧ್ಯವಾಗಿದೆ.
[ad_2]
Source link

















Leave a Reply