Advertisement

ಅಂದು ರಾಹುಲ್‌, ಇಂದು ಪಂಥ್‌ – ಸೋಲಿನ ಬೆನ್ನಲ್ಲೇ ಗೋಯೆಂಕಾ ಭಾರೀ ಚರ್ಚೆ

[ad_1]

IPL 2026 DC vs LSG Sanjiv Goenka–Rishabh Pant exchange goes viral after lucknow loss sparks fresh IPL storm

ಲಕ್ನೋ: ಡೆಲ್ಲಿ ಕ್ಯಾಪಿಟಲ್ಸ್‌ (DC) ವಿರುದ್ಧ ಸೋತ ಬಳಿಕ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಮಾಲೀಕ ಸಂಜೀವ್ ಗೋಯೆಂಕಾ(Sanjiv Goenka) ಅವರು ನಾಯಕ ರಿಷಭ್ ಪಂತ್(Rishabh Pant) ಅವರೊಂದಿಗೆ ಚರ್ಚಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸೋಲಿನ ನಂತರ ಗಂಭೀರ ಚರ್ಚೆ ನಡೆಸಿದ ಬಳಿಕ ಪಂತ್ ಅವರ ಹೆಗಲ ಮೇಲೆ ಕೈಹಾಕಿ ಗೋಯೆಂಕಾ ಪ್ರೋತ್ಸಾಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಜೀವ್ ಗೋಯೆಂಕಾ, ರಿಷಭ್ ಪಂತ್ ಅವರ ನಾಯಕತ್ವದ ಮೇಲೆ ತಮಗೆ ಪೂರ್ಣ ವಿಶ್ವಾಸವಿದೆ. ಏಕಾನಾದ ಮೈದಾನದಲ್ಲಿ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದಗಳು. ನಾವು ಬಲವಾಗಿ ಹಿಂತಿರುಗುತ್ತೇವೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.  ಇದನ್ನೂ ಓದಿ: 26 ರನ್‌ಗಳಿಗೆ 4 ವಿಕೆಟ್‌ ಉರುಳಿದ್ರೂ 119 ರನ್‌ ಜೊತೆಯಾಟ – ಡೆಲ್ಲಿಗೆ ಭರ್ಜರಿ ಜಯ

ಸಾಮಾಜಿಕ ಜಾಲತಾಣದಲ್ಲಿ ಸಂಜೀವ್ ಗೋಯೆಂಕಾ ಅವರ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಹುಲ್‌ಗೆ ಈ ಹಿಂದೆ ಕ್ಲಾಸ್‌ ಮಾಡಿದಂತೆ ಈಗ ಪಂಥ್‌ಗೂ ಕ್ಲಾಸ್‌ ತೆಗೆದುಕೊಳ್ಳುತ್ತಿದ್ದಾರೆ ಎಂದು ಕೆಲವು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಗೋಯೆಂಕಾ ತಂಡದ ಮಾಲೀಕರು ನಾಯಕನನ್ನು ಪ್ರಶ್ನಿಸುವ ಅಧಿಕಾರವಿದೆ ಎಂದು ಕಮೆಂಟ್‌ ಮಾಡಿದ್ದಾರೆ.

2024 ರಲ್ಲಿ ಏನಾಗಿತ್ತು?
ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ ಹೀನಾಯವಾಗಿ ಸೋತ ನಂತರ ಸಂಜೀವ್ ಗೋಯೆಂಕಾ (Sanjiv Goenka) ಅವರು ಅಂದು ನಾಯಕರಾಗಿದ್ದ ಕೆಎಲ್‌ ರಾಹುಲ್‌ (KL Rahul) ಅವರಿಗೆ ಮೈದಾನದಲ್ಲೇ ಫುಲ್‌ ಕ್ಲಾಸ್‌ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಪಂದ್ಯ ಸೋತ ನಂತರ ಡಗೌಟ್‌ಗೆ ಬಂದ ಸಂಜೀವ್‌ ಗೋಯೆಂಕಾ ಕೆಎಲ್‌ ರಾಹುಲ್‌ ಅವರಿಗೆ ಫುಲ್‌ ಕ್ಲಾಸ್‌ ಮಾಡಿದ್ದಾರೆ. ತಂಡದ ಕಳಪೆ ಸಾಧನೆ ಗೋಯೆಂಕಾ ತರಾಟೆಗೆ ತೆಗೆದುಕೊಳ್ಳುತ್ತಿದ್ದರೆ ಇನ್ನೊಂದು ಕಡೆ ಕೆಎಲ್‌ ರಾಹುಲ್ ಮಲೀಕರಿಗೆ ಸ್ಪಷ್ಟನೆ ನೀಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು.

2021ರಲ್ಲಿ ಸಂಜೀವ್‌ ಗೋಯೆಂಕಾ ನೇತೃತ್ವದ ಆರ್‌ಪಿಎಸ್‌ಜಿ ಗ್ರೂಪ್‌ 7,090 ಕೋಟಿ ರೂ. ಬಿಡ್‌ ಮಾಡಿ ಲಕ್ನೋ ತಂಡವನ್ನು ಖರೀದಿಸಿತ್ತು. 2022 ಮತ್ತು 2023ರಲ್ಲಿ ಲಕ್ನೋ ತಂಡ ಪ್ಲೇ ಆಫ್‌ ಪ್ರವೇಶಿಸಿತ್ತು.

ಐಪಿಎಲ್ 2026 ಆರಂಭಕ್ಕೂ ಮುನ್ನ ಸಂಜೀವ್ ಗೋಯೆಂಕಾ ಮತ್ತು ರಿಷಭ್ ಪಂತ್ ಒಟ್ಟಾಗಿ ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.



[ad_2]

Source link publictv.in

Leave a Reply

Your email address will not be published. Required fields are marked *