Advertisement

12 ವರ್ಷಗಳ ಬಳಿಕ ಒಂದೇ ದಿನ ಡಾಲರ್‌ ಮುಂದೆ ಅತಿದೊಡ್ಡ ಏರಿಕೆ ದಾಖಲಿಸಿದ ರೂಪಾಯಿ

[ad_1]

Rupee Value dollar down

ಮುಂಬೈ: ಭಾರತೀಯ ರೂಪಾಯಿ(Rupee) 12 ವರ್ಷಗಳ ಬಳಿಕ ಒಂದೇ ದಿನ ಡಾಲರ್‌ (Dollar) ವಿರುದ್ಧ ಅತಿದೊಡ್ಡ ಏರಿಕೆಯನ್ನು ದಾಖಲಿಸಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೂಪಾಯಿ ಮೌಲ್ಯದ ಮೇಲೆ ನಡೆಯುವ ಊಹಾಪೋಹದ ವಹಿವಾಟುಗಳಿಗೆ (Speculation) ಕಡಿವಾಣ ಹಾಕಿದೆ. ಈ ಕ್ರಮವನ್ನು ಕೈಗೊಂಡ ಬಳಿಕ ರೂಪಾಯಿ ಮೌಲ್ಯವು ಒಂದೇ ದಿನದಲ್ಲಿ ಸುಮಾರು 1.8% ನಷ್ಟು ಏರಿಕೆ ಕಂಡಿದೆ.

ಮಾ.31 ರಂದು ಒಂದು ಡಾಲರ್‌ಗೆ  95 ರೂ. ದಾಟಿದ್ದ ರೂಪಾಯಿ ಮೌಲ್ಯ ಇಂದು 93.14 ರೂ. ಅಸುಪಾಸಿನಲ್ಲಿ ವ್ಯವಹಾರ ನಡೆಸುತ್ತಿದೆ.

ಟ್ರಂಪ್‌ ಭಾಷಣದ ಬಳಿಕ ವಿಶ್ವದ ಷೇರು ಮಾರುಕಟ್ಟೆಗಳು ಕುಸಿದಿದ್ದವು.ಪರಿಣಾಮ ಬೆಳಗ್ಗೆ ಸೆನ್ಸೆಕ್ಸ್‌ 1,588 ಅಂಕ ಕುಸಿದಿದ್ದರೆ ನಿಫ್ಟಿ 496 ಅಂಕ ಕುಸಿದಿತ್ತು. ಆದರೆ ರೂಪಾಯಿ ಮೌಲ್ಯ ಚೇತರಿಕೆ, ನಿಫ್ಟಿ ಐಟಿ ಸೂಚ್ಯಂಕ 772 ಅಂಕ(2.6%) ರಷ್ಟು ಏರಿಕೆಯಾಗಿದ್ದರಿಂದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರಿಕೆ ಕಾಣಲು ಆರಂಭಿಸಿತು.

ಮಧ್ಯಾಹ್ನದ ನಂತರ ಚೇತರಿಸಿಕೊಂಡ ಸೆನ್ಸೆಕ್ಸ್, ದಿನದ ಕನಿಷ್ಠ ಮಟ್ಟದಿಂದ ಸುಮಾರು 1,700 ಅಂಕಗಳಷ್ಟು ಏರಿಕೆ ಕಂಡು ಅಂತಿಮವಾಗಿ 73,319.55 (+185) ಅಂಕಗಳಲ್ಲಿ ವ್ಯವಹಾರ ಕೊನೆಗೊಳಿಸಿದರೆ ನಿಫ್ಟಿ 530 ಅಂಕಗಳಷ್ಟು ಭರ್ಜರಿ ಚೇತರಿಕೆ ಕಂಡು 22,713.10 (+33) ಅಂಕಗಳಲ್ಲಿ ವ್ಯವಹಾರ ಮುಕ್ತಾಯಗೊಳಿಸಿತು. ಇದನ್ನೂ ಓದಿ: ಟ್ರಂಪ್‌ ಭಾಷಣ ಮುಗಿದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ದಿಢೀರ್‌ ಭಾರೀ ಏರಿಕೆ

 

ಆರ್‌ಬಿಐ ಕೈಗೊಂಡ ಕ್ರಮ ಏನು?
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಬ್ಯಾಂಕ್‌ಗಳು ಊಹಾಪೋಹದ ವಹಿವಾಟು ನಡೆಯುತ್ತಿರುತ್ತದೆ. ರೂಪಾಯಿ ಮೌಲ್ಯದ ಮೇಲೆ ನಡೆಯುವ ಊಹಾಪೋಹದ ವಹಿವಾಟುಗಳಿಗೆ (Speculation) ಕಡಿವಾಣ ಹಾಕಲಾಗಿದೆ.

ಈ ಮೊದಲು ಬ್ಯಾಂಕ್‌ಗಳ ಮಂಡಳಿಗಳೇ ತಮ್ಮ ಬಂಡವಾಳದ 25% ವರೆಗೆ ಈ ಮಿತಿಯನ್ನು ನಿಗದಿಪಡಿಸಿಕೊಳ್ಳಲು ಅವಕಾಶವಿತ್ತು. ಇದರಿಂದ ದೊಡ್ಡ ಬ್ಯಾಂಕ್‌ಗಳು ಶತಕೋಟಿ ಡಾಲರ್‌ಗಳವರೆಗೆ ವಹಿವಾಟು ನಡೆಸುತ್ತಿದ್ದವು. ಈಗ ಎಲ್ಲಾ ಬ್ಯಾಂಕ್‌ಗಳಿಗೂ ಸಮಾನವಾಗಿ 100 ಮಿಲಿಯನ್‌ ಡಾಲರ್‌ನ ಕಠಿಣ ಮಿತಿಯನ್ನು ಹೇರಲಾಗಿದೆ. ಇದರ ಅರ್ಥ ಒಂದು ಬ್ಯಾಂಕ್ ತನ್ನಲ್ಲಿ ಇಟ್ಟುಕೊಳ್ಳಬಹುದಾದ ಒಟ್ಟು ವಿದೇಶಿ ಕರೆನ್ಸಿಯ (ಮುಖ್ಯವಾಗಿ ಡಾಲರ್) ನಿವ್ವಳ ಮೌಲ್ಯವು ದಿನದ ಅಂತ್ಯಕ್ಕೆ 100 ಮಿಲಿಯನ್‌ ಡಾಲರ್‌ ದಾಟುವಂತಿಲ್ಲ.

ಈಗ ಮಿತಿಯನ್ನು ನಿಗದಿ ಪಡಿಸಿದ್ದರಿಂದ ಬ್ಯಾಂಕ್‌ಗಳು ತಮ್ಮಲ್ಲಿರುವ ಹೆಚ್ಚುವರಿ ಡಾಲರ್‌ಗಳನ್ನು ಮಾರಾಟ ಮಾಡಬೇಕಾಗುತ್ತದೆ. ಈ ನಿರ್ಧಾರದಿಂದ ಮಾರುಕಟ್ಟೆಯಲ್ಲಿ ಡಾಲರ್ ಪೂರೈಕೆ ಹೆಚ್ಚಾಗಿ ರೂಪಾಯಿ ಮೌಲ್ಯ ಸ್ಥಿರಗೊಳ್ಳಬಹುದು ಎಂಬ ಲೆಕ್ಕಾಚಾರವನ್ನು ಹಾಕಲಾಗಿದೆ. ಇದನ್ನೂ ಓದಿ: ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ ಕೈಗಳಲ್ಲಿದ್ದಾರೆ, ಚಿಂತಿಸಬೇಡಿ: ಇರಾನ್‌

ಈ ಹಠಾತ್ ಬದಲಾವಣೆಯಿಂದ ಬ್ಯಾಂಕ್‌ಗಳಿಗೆ ಅಲ್ಪಾವಧಿಯ ನಷ್ಟ (Mark-to-market losses) ಉಂಟಾಗಬಹುದು ಎಂದು ಆತಂಕ ವ್ಯಕ್ತವಾಗಿದೆ. ಬ್ಯಾಂಕುಗಳು ಏಪ್ರಿಲ್ 10 ರೊಳಗೆ ಈ ಮಿತಿಯನ್ನು ತಲುಪಬೇಕಾಗಿರುವುದರಿಂದ ಸುಮಾರು 18 ಶತಕೋಟಿ ಡಾಲರ್‌ನಿಂದ 30 ಶತಕೋಟಿ ಡಾಲರ್‌ವರೆಗಿನ ಹೆಚ್ಚುವರಿ ಡಾಲರ್‌ಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಾಗುತ್ತದೆ.

ಬ್ಯಾಂಕ್‌ಗಳು ತಾವು ಹೊಂದಿರುವ ಡಾಲರ್ ಒಪ್ಪಂದಗಳನ್ನು ಅವಧಿಗೆ ಮುನ್ನವೇ ಮುಕ್ತಾಯಗೊಳಿಸಬೇಕಾದ ಕಾರಣ (Mark-to-market losses) ಸುಮಾರು 4,000 ಕೋಟಿ ರೂ. ವರೆಗೆ ನಷ್ಟ ಉಂಟಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಈ ನಿಯಮವನ್ನು ಜಾರಿಗೊಳಿಸಲು ಕನಿಷ್ಠ 3 ತಿಂಗಳ ಕಾಲಾವಕಾಶ ನೀಡಬೇಕೆಂದು ಬ್ಯಾಂಕ್‌ಗಳು ಆರ್‌ಬಿಐಗೆ ಮನವಿ ಮಾಡಿವೆ ಎಂದು ವರದಿಯಾಗಿದೆ.

[ad_2]

Source link publictv.in

Leave a Reply

Your email address will not be published. Required fields are marked *