Advertisement

Chandigarh : ಪತ್ನಿಯ ಕೊಲೆ ಮಾಡಿ 4 ವರ್ಷ ಬಳಿಸಿ ಸಿಕ್ಕಬಿದ್ದ ಮಾಜಿ ಸೈನಿಕ

[ad_1]

Chandigarh : ಪತ್ನಿಯನ್ನು ಕೊಲೆ ಮಾಡಿ ಸುಮಾರು ನಾಲ್ಕು ವರ್ಷಗಳಿಂದ ತಲೆಮರಿಸಿಕೊಂಡು ಓಡಾಡುತ್ತಿದ್ದ ಮಾಜಿ ಸೈನಿಕ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಹಂತಕನನ್ನು ಸರಿಯಾಗಿ ಕೊಟ್ಟಿದ್ದೆ ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್ !!

ಬಿಹಾರ್ ರೆಜಿಮೆಂಟ್‌ನಲ್ಲಿ ಕ್ಯಾಪ್ಟನ್ ಆಗಿದ್ದ ಸಂದೀಪ್ ತೋಮರ್, 2014ರಲ್ಲಿ ಅಬೋಹರ್ ಕ್ಯಾಂಟನ್ಮೆಂಟ್‌ನಲ್ಲಿ ಪೋಸ್ಟಿಂಗ್ ಹೊಂದಿದ್ದಾಗ ತನ್ನ ಪತ್ನಿ ಶ್ವೇತಾ ಎಂಬುವವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದ. ಆದರೆ ತನಿಖೆಯ ನಂತರ ಈತನೇ ಕೊಲೆಗಾರ ಎಂದು ಸಾಬೀತಾಗಿತ್ತು. 2014ರಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು ಮತ್ತು ಸೇನೆಯಿಂದ ವಜಾಗೊಳಿಸಲಾಯಿತು. ಆಗ ಪತ್ನಿಯನ್ನು ಕೊಲೆಗೈದು ನಾಲ್ಕು ವರ್ಷಗಳಿಂದಲೂ ಚಾಣಾಕ್ಷತನದಿಂದ ತಲೆಮರೆಸಿಕೊಂಡಿದ್ದ. ಆದರೆ ಇದೀಗ ನಾಲ್ಕು ವರ್ಷದ ಬಳಿಕ ಗ್ಯಾಸ್ ಬುಕಿಂಗ್ ಮಾಡಿದಾಗ ಈತ ಸಿಕ್ಕಿಬಿದ್ದಿದ್ದಾನೆ.

ಸಿಕ್ಕಿಬಿದ್ದಿದ್ದೇಗೆ?

ತೋಮರ್ ಪತ್ತೆಗಾಗಿ ಎಸ್‌ಪಿ ಆಸ್ವಂತ್ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ದಳ ರಚಿಸಲಾಗಿತ್ತು. ತನಿಖಾ ತಂಡವು ರಾಷ್ಟ್ರೀಯ ಗುಪ್ತಚರ ಗ್ರಿಡ್ ಮೂಲಕ ಈತನ ಪಾನ್ ಕಾರ್ಡ್ ವಿವರಗಳನ್ನು ಕಲೆಹಾಕಿ ಪಾನ್ ಕಾರ್ಡ್‌ಗೆ ಲಿಂಕ್ ಆಗಿದ್ದ ಖಾಸಗಿ ಬ್ಯಾಂಕ್ ಖಾತೆಯೊಂದನ್ನು ಪತ್ತೆಹಚ್ಚಿದರು. ಬ್ಯಾಂಕ್ ಸ್ಟೇಟ್‌ಮೆಂಟ್ ಪರಿಶೀಲಿಸಿದಾಗ, ಪ್ರತಿ ತಿಂಗಳು ಖಾಸಗಿ ಕಂಪನಿಯೊಂದರಿಂದ ಈತನ ಖಾತೆಗೆ ಸಂಬಳ ಜಮೆಯಾಗುತ್ತಿರುವುದು ಮತ್ತು ಮಧ್ಯಪ್ರದೇಶದ ಪಾಂಡುರ್ನಾ ಜಿಲ್ಲೆಯ ಮೊಬೈಲ್ ಸಂಖ್ಯೆಯೊಂದು ಅದಕ್ಕೆ ಲಿಂಕ್ ಆಗಿರುವುದು ಕಂಡುಬಂತು. 

banner

ಆದರೆ ಆತನ ನಿಖರ ವಿಳಾಸ ತಿಳಿದಿರಲಿಲ್ಲ. ಮತ್ತೆ ಬ್ಯಾಂಕ್ ವ್ಯವಹಾರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ‘ಭಾರತ್ ಗ್ಯಾಸ್’ನಿಂದ ಸಿಲಿಂಡರ್ ಬುಕ್ ಮಾಡಿರುವುದು ಪತ್ತೆಯಾಯಿತು. ತಕ್ಷಣ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿದ ಪೊಲೀಸರು, ಸಿಲಿಂಡರ್ ವಿತರಣೆಯಾದ ವಿಳಾಸವನ್ನು ಪಡೆದುಕೊಂಡು ಪಾಂಡುರ್ನಾದಲ್ಲಿ ತೋಮರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.



[ad_2]

Source link

Leave a Reply

Your email address will not be published. Required fields are marked *