Advertisement

ಶಿವಮೊಗ್ಗ | ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿಗೆ 2 ವರ್ಷ ಜೈಲು

[ad_1]

Shivamogga Court

ಶಿವಮೊಗ್ಗ: ಗಂಗಾ ಕಲ್ಯಾಣ ಯೋಜನೆ ಫಲಾನುಭವಿಯೊಬ್ಬರಿಂದ 10,000 ರೂ. ಲಂಚ ಪಡೆದಿದ್ದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ (Devaraja Urs Backward Classes Development Corporation) ಜಿಲ್ಲಾ ವ್ಯವಸ್ಥಾಪಕನಿಗೆ ಶಿವಮೊಗ್ಗ (Shivamogga) ನ್ಯಾಯಾಲಯವು (Court) 2 ವರ್ಷ ಜೈಲು, 40,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಆರ್.ಎಸ್. ಪರಮೇಶ್ವರಪ್ಪ ಶಿಕ್ಷೆಗೆ ಗುರಿಯಾದ ಅಪರಾಧಿ. ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಹೊಸಗುಂದದ ಹೆಚ್.ಎಸ್. ಜನಾರ್ಧನ ಎಂಬವರಿಗೆ ಮಂಜೂರಾದ ಕೊಳವೆ ಬಾವಿ ಕೊರೆಸಲು 10,000 ರೂ. ಲಂಚಕ್ಕೆ ಅಪರಾಧಿ ಬೇಡಿಕೆ ಇಟ್ಟಿದ್ದ. ಲಂಚ ಪಡೆಯುವಾಗ ಕಚೇರಿಯಲ್ಲೇ ಸಿಕ್ಕಿಬಿದ್ದಿದ್ದ.

ಪ್ರಕರಣದ ತನಿಖಾಧಿಕಾರಿ ಲೋಕಾಯುಕ್ತ ಡಿಎಸ್‌ಪಿ ಎ.ಚಂದ್ರಪ್ಪ,ತನಿಖೆ ಕೈಗೊಂಡು ಆಪಾದಿತನ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸಾರ್ವಜನಿಕ ಅಭಿಯೋಜಕ ಎಂ.ಡಿ.ಸುಂದರ್‌ರಾಜ್ ಲೋಕಾಯುಕ್ತ ಪರ ವಾದ ಮಂಡಿಸಿದ್ದರು.

[ad_2]

Source link publictv.in

Leave a Reply

Your email address will not be published. Required fields are marked *