Advertisement

ಲವ್ ಜಿಹಾದ್ ಕೇಸಲ್ಲಿ ಜಿಮ್ ಟ್ರೈನರ್‌ಗೆ ಸಂಕಷ್ಟ – ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ ಸಂತ್ರಸ್ತೆ

[ad_1]

Hubballi Love Jihad 1

ಹುಬ್ಬಳ್ಳಿ: ಲವ್ ಜಿಹಾದ್ (Love Jihad) ಕೇಸಲ್ಲಿ ಜಿಮ್ ಟ್ರೈನರ್‌ಗೆ (Gym Trainer) ಮತ್ತೊಂದು ಸಂಕಷ್ಟ ಎದುರಾಗಿದೆ. ಸಮೀರ್ ವಿರುದ್ಧ ಸಂತ್ರಸ್ತೆ ಇದೀಗ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ.

ಸಂತ್ರಸ್ತ ಯುವತಿ ಶುಕ್ರವಾರ (ಏ.3) ರಾತ್ರಿ ಹುಬ್ಬಳ್ಳಿ ವಿದ್ಯಾನಗರ ಠಾಣೆಯಲ್ಲಿ ಸಮೀರ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ. ನಾನು ಜಿಮ್‌ಗೆ ಹೋಗುವಾಗ ಸಮೀರ್ ಪರಿಚಯವಾಗಿದ್ದ. 2025ರ ಆ.16ರಂದು ನನ್ನನ್ನು ಮನೆಗೆ ಕರೆಸಿಕೊಂಡಿದ್ದ. ಆ ವೇಳೆ ಜ್ಯೂಸ್‌ನಲ್ಲಿ ಮತ್ತು ಬರೋ ಪದಾರ್ಥ ಹಾಕಿ ನನಗೆ ಕುಡಿಸಿದ್ದ. ಬಳಿಕ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದನ್ನು ವಿಡಿಯೋ ಮಾಡಿಟ್ಟುಕೊಂಡು ಬೆದರಿಕೆ ಹಾಕಿದ್ದ. ಇದಾದ ಬಳಿಕ ಬೆದರಿಕೆ ಹಾಕಿ ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಜಿಮ್ ಟ್ರೈನರ್‌ನಿಂದ ಲವ್ ಜಿಹಾದ್ – ಹಿಂದೂ ಯುವತಿಯರೇ ಟಾರ್ಗೆಟ್, ವಿಡಿಯೋ ಇಟ್ಕೊಂಡು ಬ್ಲಾಕ್‌ಮೇಲ್

ಸದ್ಯ ಯುವತಿಯ ದೂರಿನ ಆಧಾರದ ಮೇಲೆ ಸಮೀರ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 64(1), 351, 123 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ದೂರಿನ ಹಿನ್ನೆಲೆ ಪೊಲೀಸರು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಸದ್ಯ ಸಮೀರ್ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇನ್ನೂ ಲವ್ ಜಿಹಾದ್ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸಮೀರ್ ಬಂಡವಾಳ ಮತ್ತಷ್ಟು ಬಯಲಾಗಿದೆ. ಬೇರೆ ಬೇರೆ ಯುವತಿಯರ ಜೊತೆಗೆ ಇರುವ ಪೋಟೋಗಳು ವೈರಲ್ ಆಗಿದೆ. ಜಿಮ್‌ಗೆ ಬರುವ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ, ಸ್ನೇಹ ಬೆಳೆಸಿಕೊಳ್ಳುತ್ತಿದ್ದ. ಪೊಲೀಸರು ಸಮೀರ್ ಮೊಬೈಲ್ ಪರಿಶೀಲನೆ ಮಾಡಿದಾಗ ಹಲವು ವಿಚಾರಗಳು ಬಯಲಾಗಿವೆ. ಬ್ರೌಸಿಂಗ್ ಹಿಸ್ಟರಿಯಲ್ಲಿ ಅಸಭ್ಯ ಮತ್ತು ನಿಷೇಧಿತ ವೆಬ್ ಬಳಕೆ ಮಾಡುತ್ತಿರುವುದು ಗೊತ್ತಾಗಿದೆ.ಇದನ್ನೂ ಓದಿ: ಕುಡಿಯೋಕೆ ನೀರು ಕೇಳಲು ಬಂದು ರೇಪ್ – ಕೈ ಕಟ್ಟಿ, ಚಾಕು ತೋರಿಸಿ ಅತ್ಯಾಚಾರವೆಸಗಿದ ಕಾಮುಕ


[ad_2]

Source link publictv.in

Leave a Reply

Your email address will not be published. Required fields are marked *