Advertisement

ಆಟೋ ಚಾಲಕರಿಗೆ ಸಮಸ್ಯೆ; ಈ ಸಮಸ್ಯೆ ನಾವ್ಯಾರು ಬಯಸಿ ಬಂದಿರೋದಲ್ಲ: ಹೆಚ್‌ಡಿಕೆ

[ad_1]

ಕೊಪ್ಪಳ: ರಾಜ್ಯದಲ್ಲಿ ಆಟೋ ಚಾಲಕರಿಗೆ (Auto Drivers) ಸಮಸ್ಯೆಯಾಗಿದ್ದು, ಈ ಸಮಸ್ಯೆ ನಾವು ಯಾರೂ ಬಯಸಿ ಬಂದಿರೋದಲ್ಲ. ಯುದ್ಧದ ಹಿನ್ನೆಲೆಯಲ್ಲಿ ಕೆಲ ಸಮಸ್ಯೆಗಳು ಉದ್ಭವವಾಗಿವೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು.

ಕೊಪ್ಪಳ (Koppal) ತಾಲೂಕಿನ ಹಿಟ್ನಾಳ್ ಟೋಲ್ ಗೇಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ಸರ್ಕಾರ ಇದ್ರೂ ಇಂತಹ ಪರಿಸ್ಥಿತಿಯಲ್ಲಿ ಜನ ಸಾಮಾನ್ಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳೋದು ನಮ್ಮ ಧರ್ಮ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಮೋದಿ ನೇತೃತ್ವದಲ್ಲಿ ಜನ ಸಾಮಾನ್ಯರಿಗೆ ಬೇಕಾಗಿರೋ ವಸ್ತುಗಳನ್ನ ತರಲು ಅಲ್ಪಸ್ವಲ್ಪ ಮಟ್ಟಿಗೆ ಯಶಸ್ಸು ಕಾಣುತ್ತಿದ್ದಾರೆ. ಇವತ್ತು ಕಾಂಗ್ರೆಸ್‌ನವರು ಏನೆನೋ ಮಾತಾಡುತ್ತಿದ್ದಾರೆ. ಕೇಂದ್ರದಲ್ಲಿ ಯುಪಿಎ ಸರ್ಕಾರವೇ ಇದ್ರೆ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಗೆದಷ್ಟು ಬಯಲಾಗ್ತಿದೆ ಜಿಮ್ ಟ್ರೈನರ್ ಬಂಡವಾಳ – 8 ರಿಂದ 10 ಬಾರಿ ಗರ್ಭಪಾತದ ಮಾತ್ರೆ ನೀಡಿದ್ದ ಸಮೀರ್

ಕೇಂದ್ರ ಸರ್ಕಾರವನ್ನು ಬೈಯೋದು ಒಳ್ಳೆದಲ್ಲ ಅನ್ನೋದು ನನ್ನ ಅಭಿಪ್ರಾಯ. ರಾಜ್ಯದಲ್ಲಿ ಸಿಲಿಂಡರ್, ಆಟೋ ಎಲ್‌ಪಿಜಿ ಕೊರತೆ ಇರೋದು ಕಾಣುತ್ತಿದೆ. ಸರ್ಕಾರವೂ ಆಟೋ ಚಾಲಕರ ಮೇಲೆ ತೆರಿಗೆ ವಿಧಿಸಿದೆ. ಆಟೋ ಚಾಲಕರು ಆರನೇ ಗ್ಯಾರಂಟಿಯಾಗಿ ತಿಂಗಳು 15 ಸಾವಿರ ಕೇಳುತ್ತಿದ್ದಾರೆ. ಸರ್ಕಾರ ಅದನ್ನು ಕೊಟ್ಟು ಗೌರಯುವತವಾಗಿ ನಡೆದುಕೊಳ್ಳಬೇಕು ಎಂದರು. ಇದನ್ನೂ ಓದಿ: ಪ್ರಜ್ಞೆ ತಪ್ಪಿದ್ದು ನಾನು, ರೆಕಾರ್ಡ್ ಮಾಡಿದ್ದು ಆಕೆ, ವೀಡಿಯೋಗಳೆಲ್ಲ ಅವಳ ಫೋನ್‌ನಲ್ಲಿದೆ: ಟ್ವಿಸ್ಟ್‌ ಕೊಟ್ಟ ಸಮೀರ್‌

ಸಿಂಧನೂರಿನಲ್ಲಿ ಸೈನಿಕ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮಕ್ಮೆ ಹೋಗುತ್ತಿದ್ದೇನೆ. ಇಂದು ಸಂಜೆ ದಾವಣಗೆರೆ ಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ. ಎರಡೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲೋ ವಾತಾವರಣ ಇದೆ ಎಂದು ಹೇಳಿದರು. ಇದನ್ನೂ ಓದಿ: ದೇಶದಲ್ಲೇ ಅತಿ ಹೆಚ್ಚು – ಬೆಂಗಳೂರಿಂದ 272 ಅಕ್ರಮ ಬಂಗ್ಲಾ ವಲಸಿಗರು ಗಡಿಪಾರು

[ad_2]

Source link publictv.in

Leave a Reply

Your email address will not be published. Required fields are marked *