Advertisement

ತುಮಕೂರಲ್ಲಿ ಮಹಿಳಾ ಪಿಎಸ್‌ಐ ನಾಪತ್ತೆ – ಮಗಳಿಂದ ದೂರು ದಾಖಲು

[ad_1]

PSI Mangalamma

ತುಮಕೂರು: ಇಲ್ಲಿನ (Tumkur) ಹೊಸ ಬಡಾವಣೆ ಪೊಲೀಸ್‌ ಠಾಣೆಯ ಪಿಎಸ್‌ಐ (PSI) ಮಂಗಳಮ್ಮ ಕಾಣೆಯಾಗಿದ್ದಾರೆ. ಅವರಿಗಾಗಿ ತೀವ್ರ ಹುಡುಕಾಟ ನಡೆಸಿದ ಮಗಳು, ಪತ್ತೆಯಾಗದಿದ್ದಾಗ ಹೊಸ ಬಡಾವಣೆ ಠಾಣೆಗೆ ತೆರಳಿ ಕಾಣೆಯಾದ ಬಗ್ಗೆ (Missing Case) ದೂರು ದಾಖಲಿಸಿದ್ದಾರೆ.

ಏ.3 ರಂದು ಡಿವೈಎಸ್‌ಪಿ ಕಚೇರಿಯಲ್ಲಿ ಸಭೆಗೆ ಮಂಗಳಮ್ಮ ಬಂದಿದ್ದರು. ಈ ವೇಳೆ ಮನೆಯಿಂದ ಕರೆ ಬಂದಿತ್ತು. ಬಳಿಕ ಅಲ್ಲಿಂದ ಠಾಣೆಗೆ ತೆರಳಿ, ಸಮವಸ್ತ್ರ ಬದಲಿಸಿ, ಸಿವಿಲ್‌ ಡ್ರೆಸ್‌ನಲ್ಲಿ ಹೊರಗೆ ತೆರಲಿದ್ದರು. ನಿನ್ನೆ (ಏ.3) ಯಾರ ಸಂಪರ್ಕಕ್ಕೂ ಅವರು ಸಿಕ್ಕಿಲ್ಲ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಪಲ್ಟಿ – 9 ವರ್ಷದ ಬಾಲಕಿ ಸಾವು

ಇತ್ತೀಚೆಗಷ್ಟೇ ಮಂಗಳಮ್ಮ ಪುತ್ರಿಗೆ ಡಿವೋರ್ಸ್ ಆಗಿತ್ತು. ಕೆಲ ದಿನಗಳಿಂದ ತಾಯಿ ಮಗಳು ಒಟ್ಟಿಗೆ ವಾಸವಿದ್ದರು. ಕೌಟುಂಬಿಕ ಕಲಹ ಹಿನ್ನೆಲೆ, ಮನನೊಂದು ಮನೆ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ನಾಪತ್ತೆಯಾದ ಪಿಎಸ್‌ಐಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೊಬೈಲ್ ಕದೀತಿದ್ದ 9 ಅಪ್ರಾಪ್ತರು ಸೇರಿ 13 ಮಂದಿ ಅರೆಸ್ಟ್ – ಕಳುವಾಗಿದ್ದ 75 ಹೈಎಂಡ್ ಮೊಬೈಲ್‌ಗಳು ಸೀಜ್‌

[ad_2]

Source link publictv.in

Leave a Reply

Your email address will not be published. Required fields are marked *