Advertisement

IPL ಟಿಕೆಟ್ ಪಡೆಯಲು ವಿಧಾನಸೌಧದಲ್ಲಿ ಶಾಸಕರ PA ಗಳು ಕ್ಯೂ!!

[ad_1]

Bengaluru : ರಾಜ್ಯದಲ್ಲಿ ಎಲ್‌ಪಿಜಿ ಗ್ಯಾಸ್ ಗೆ ಸಮಸ್ಯೆ ಉಂಟಾಗಿದೆ ಎಂದು ಗ್ರಾಹಕರು ರಾತ್ರಿ ಇಡೀ ಸಿಲಿಂಡರ್ ಪಡೆಯುತ್ತಿದ್ದಾರೆ. ಆದರೆ ಇದು ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ನಮ್ಮ ಜನಪ್ರತಿನಿಧಿಗಳು ಮೋಜು ಮಸ್ತಿಯೆಂದು ತಿರುಗಾಡುತ್ತಿದ್ದಾರೆ. ಇದೀಗ ವಿಧಾನಸೌಧದಲ್ಲಿ ನಮ್ಮ ಶಾಸಕ ಮಹಾಶಯರು ಐಪಿಎಲ್ ಟಿಕೆಟ್ (IPL Ticket) ಪಡೆಯೋಕೆ ತಮ್ಮ ಪಿಎಗಳನ್ನೇ ಕ್ಯೂ ನಿಲ್ಲಿಸಿದ್ದಾರೆ.

ಪ್ರತಿ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ ಉಚಿತವಾಗಿ 3 ಟಿಕೆಟ್ ಕೊಡುವ ಮಾತುಕತೆ ಸರ್ಕಾರ- ಕೆಎಸ್‌ಸಿಎ (KSCA) ಮಧ್ಯೆ ಆಗಿದೆ. ನಾಳೆ ಬೆಂಗಳೂರು ಮತ್ತು ಚೆನೈ (RCB vs CSK) ಪಂದ್ಯವಿರುವ ಕಾರಣ ಈ ಪಂದ್ಯದ ಟಿಕೆಟ್‌ಗಾಗಿ ಶಾಸಕರ ಪಿಎಗಳು ಸ್ಪೀಕರ್ ಕಚೇರಿ ಮುಂದೆ ಕ್ಯೂ ನಿಂತು ಟಿಕೆಟ್ ಪಡೆದಿದ್ದಾರೆ.

ಸ್ಪೀಕರ್ ಕಚೇರಿಯಲ್ಲಿ ಟಿಕೆಟ್ ಸಿಗುವುದರಿಂದ ಶಾಸಕರ ಸೂಚನೆ ಮೇರೆಗೆ ಕ್ಯೂ ನಿಂತು ಟಿಕೆಟ್ ಪಡೆದಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸಿದ ಶಾಸಕರುಗಳು ಈ ರೀತಿ ಐಪಿಎಲ್ ಟಿಕೆಟ್ಗಾಗಿ ತಮ್ಮ ಪಿಯಗಳನ್ನು ನಿಲ್ಲಿಸಿರುವುದು ಸಾಕಷ್ಟು ಹಾಸ್ಯಸ್ಪದವಾಗಿ ಗೋಚರಿಸಿದ್ದು ಚರ್ಚೆಗೂ ಕೂಡ ಕಾರಣವಾಗಿದೆ. 



[ad_2]

Source link

Leave a Reply

Your email address will not be published. Required fields are marked *