Advertisement

Price : ಪ್ರಪಂಚದಾದ್ಯಂತ ಪೆಟ್ರೋಲ್ – ಡೀಸೆಲ್ ಬೆಲೆ ಏರಿದರೂ ಭಾರತದಲ್ಲಿ ಯಾಕಿಲ್ಲ ಏರಿಕೆ?

[ad_1]

Price : ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ನಿರ್ಮಾಣವಾಗಿರುವ ಯುದ್ಧದ ವಾತಾವರಣದಿಂದ  ಹಾಗೂ ಹಾರ್ಮುಝ್ ಜಲಸಂಧಿಯ ಮೂಲಕ ತೈಲ ಸಾಗಣೆ ಸಮಸ್ಯೆ  ಹಿನ್ನೆಲೆ ಹಲವು ದೇಶಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅನಿಲ ಬೆಲೆಗಳನ್ನು (Gas Cylinder) ಹೆಚ್ಚುತ್ತಿದೆ. ಬೆಲೆ ಹೆಚ್ಚುವುದು ಮಾತ್ರವಲ್ಲ ಅವುಗಳ ಪೂರೈಕೆಯಲ್ಲಿ ವ್ಯತ್ಯಾಸವಾಗಿ ನಾನಾ ದೇಶಗಳು ಪರದಾಡುವ ಸ್ಥಿತಿ ಎದುರಾಗಿದೆ. ಇಷ್ಟಾದ್ಯೋ ಕೂಡ ಭಾರತದಲ್ಲಿ ಮಾತ್ರ ತೈಲ ಸಮಸ್ಯೆ ಎದುರಾಗಿಲ್ಲ. ಇದಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ 

ಬೇರೆ ಬೇರೆ ದೇಶಗಳಿಂದ ಆಮದು:

ಈ ಸಂಕಷ್ಟದ ಸಮಯದಲ್ಲಿ ಭಾರತವು ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲಷ್ಟೇ ಅವಲಂಬಿತವಾಗುವ ಬದಲು, ಅನ್ಯ ದೇಶಗಳಿಂದ ಅದನ್ನು ತರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದೆ. ಇದರ ಭಾಗವಾಗಿ ಅಮೆರಿಕ, ರಷ್ಯಾದಿಂದ ಆಮದು ಪ್ರಮಾಣವನ್ನು ಹೆಚ್ಚಿಸಿದೆ. ಅತ್ತ ಆಫ್ರಿಕಾ ಖಂಡದಿಂದ ತರಿಸಿಕೊಳ್ಳುವುದು ದುಬಾರಿಯಾದರೂ, ನೈಜೀರಿಯಾ ಮತ್ತು ಅಂಗೋಲಾದಿಂದ ಅಟ್ಲಾಂಟಿಕ್‌ ಸಾಗರದ ಮೂಲಕ ಇಂಧನ ತರಿಸಿಕೊಳ್ಳಲಾಗುತ್ತಿದೆ.

ದೇಶದಲ್ಲಿ ಉತ್ಪಾದನೆ ಹೆಚ್ಚಳ:

banner

ಒಂದು ಕಡೆ 2 ತಿಂಗಳಿಗಾಗುವಷ್ಟು ಇಂಧನವನ್ನು ಶೇಖರಿಸಿಟ್ಟುಕೊಂಡಿರುವ ಭಾರತವು, ದೇಶೀಯವಾಗಿಯೂ ಎಲ್‌ಪಿಜಿ ಉತ್ಪಾದನೆಯನ್ನು ಶೇ.28ರಷ್ಟು ಹೆಚ್ಚಿಸಿದೆ. ಅತ್ತ ಒಟ್ಟು 2.9 ಲಕ್ಷ ಮನೆಗಳಿಗೆ ಪಿಎನ್‌ಜಿ ಸಂಪರ್ಕ ಕಲ್ಪಿಸಲಾಗಿದೆ.

ಆರ್ಥಿಕ ನೆರವು:

ಯುದ್ಧ ಆರಂಭದ ಬಳಿಕ ಕಚ್ಚಾತೈಲದ ಬೆಲೆಯಲ್ಲಿ ಶೇ.70ರಷ್ಟು ಏರಿಕೆಯಾಗಿದೆ. ಆದರೆ ಆಮದು ಸುಂಕ ಕಡಿತ ಮಾಡುವ ಮೂಲಕ ತೈಲ ಕಂಪನಿಗಳ ಮೇಲಿನ ಹೊರೆಯನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿತು. ಜೊತೆಗೆ ಈ ಹಿಂದೆ ತೈಲ ಬೆಲೆ ಇಳಿಕೆಯಾದಾಗ ತೈಲ ಕಂಪನಿಗಳು ಮಾಡಿಕೊಂಡಿದ್ದ 40000 ಕೋಟಿ ರು. ಲಾಭವನ್ನು ಇದೀಗ ಬಳಸುವ ಮೂಲಕ ತೈಲ ಕಂಪನಿಗಳು ದರ ಹೆಚ್ಚಳ ಮಾಡದಂತೆ ನೋಡಿಕೊಂಡಿತು.



[ad_2]

Source link

Leave a Reply

Your email address will not be published. Required fields are marked *