Advertisement

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್‌ – ಹಿಂದೂ ಯುವತಿ ಮೇಲೆ ಅತ್ಯಾಚಾರ ಆರೋಪ

[ad_1]

– ಸಮೀರ್‌ ಪ್ರಕರಣದ ಬಳಿಕ ಧೈರ್ಯದಿಂದ ಮುಂದೆ ಬಂದು ದೂರು ಕೊಟ್ಟ ಸಂತ್ರಸ್ತೆ

ಹುಬ್ಬಳ್ಳಿ:‌ ಜಿಮ್‌ ಟ್ರೈನರ್‌ ಸಮೀರ್ ಮುಲ್ಲಾ ಲವ್‌ ಜಿಹಾದ್‌ ಪ್ರಕರಣ (Love Jihad Case) ರಾಜ್ಯಾದ್ಯಂತ ಸದ್ದು ಮಾಡುತ್ತಿರುವಾಗಲೇ ಅಂತಹದ್ದೇ ಮತ್ತೊಂದು ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಮೀರ್‌ ಪ್ರಕರಣದ ಬಳಿಕ ಧೈರ್ಯದಿಂದ ಹೊರ ಬಂದ ಸಂತ್ರಸ್ತ ಯುವತಿ ಹಿಂದೂಪರ ಸಂಘಟನೆಗಳ ನೆರವಿನಿಂದ ಕೇಶ್ವಾಪುರ ಠಾಣೆಯಲ್ಲಿ (Keshwapur Police Station) ದಾಖಲಿಸಿದ್ದಾರೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಮುಫೀಸ್ ಮಿಯಾನ್ನವರ್ ಎಂಬಾತನ ವಿರುದ್ಧ ಅತ್ಯಾಚಾರ ಪ್ರಕರಣ (Rape Case) ದಾಖಲಾಗಿದೆ. ಯುವತಿಗೆ ಬ್ಲ್ಯಾಕ್‌ ಮೇಲ್‌ ಮಾಡಿ ಸಂತ್ರಸ್ತೆ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದನ್ನೂ ಓದಿ: ಪ್ರಜ್ಞೆ ತಪ್ಪಿದ್ದು ನಾನು, ರೆಕಾರ್ಡ್ ಮಾಡಿದ್ದು ಆಕೆ, ವೀಡಿಯೋಗಳೆಲ್ಲ ಅವಳ ಫೋನ್‌ನಲ್ಲಿದೆ: ಟ್ವಿಸ್ಟ್‌ ಕೊಟ್ಟ ಸಮೀರ್‌

Love Jihad

ಮನೆಗೇ ನುಗ್ಗಿ ಅತ್ಯಾಚಾರ ಎಸಗಿದ ಆರೋಪ
ಮುಸ್ಲಿಂ ಯುವಕ (Muslim Youth) ಮುಫೀಸ್ ಮಿಯಾನ್ನವರ್ ಹಿಂದೂ ಮರಾಠ ಯುವತಿಯೊಂದಿಗೆ ಪ್ರೀತಿಸುವ ನಾಟಕವಾಗಿ ಲೈಂಗಿ ದೌರ್ಜನ್ಯ ಎಸಗಿದ್ದನಂತೆ. ಬಳಿಕ ಧಾರವಾಡದಲ್ಲಿ ರಿಜಿಸ್ಟರ್‌ ಮ್ಯಾರೇಜ್‌ ಆಗಲು ತಯಾರಿ ಕೂಡ ನಡೆಸಿದ್ದ. ಕಳೆದ ಆಗಸ್ಟ್‌ನಲ್ಲಿ ಮದುವೆ ನೋಂದಣಿ ಮಾಡಿಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಅಷ್ಟರಲ್ಲಿ ವಿಷಯ ತಿಳಿದ ಯುವತಿ ಕುಟುಂಬಸ್ಥರು ಮದುವೆ ನಿಲ್ಲಿಸಿದ್ದರು. ಇದನ್ನೂ ಓದಿ: ಜಿಮ್ ಟ್ರೈನರ್‌ನಿಂದ ಲವ್ ಜಿಹಾದ್ – ಹಿಂದೂ ಯುವತಿಯರೇ ಟಾರ್ಗೆಟ್, ವಿಡಿಯೋ ಇಟ್ಕೊಂಡು ಬ್ಲಾಕ್‌ಮೇಲ್

ಇದಾದ ಬಳಿಕ ಮುಫೀಸ್‌ ಯುವತಿಗೆ ಬ್ಲ್ಯಾಕ್‌ ಮೇಲ್‌ ಮಾಡೋಕೆ ಶುರು ಮಾಡಿದ್ದಾನೆ. ತನ್ನ ಖಾಸಗಿ ವಿಡಿಯೋ ವೈರಲ್‌ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೇ ಯುವತಿ ಮನೆಯಲ್ಲಿ ಒಂಟಿಯಾಗಿದ್ದಾಗ, ಮನೆಗೇ ನುಗ್ಗಿ ಅತ್ಯಾಚಾರ ಮಾಡಿದ್ದಾನೆ. ಈ ವಿಷಯ ಯಾರಿಗಾದ್ರೂ ತಿಳಿಸಿದ್ರೆ, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎದಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Hubballi Love Jihad Case

ಇಷ್ಟು ದಿನ ಜೀವ ಭಯದಿಂದ ದೂರು ನೀಡಲು ಹಿಂದೇಟು ಹಾಕಿದ್ದ ಯುವತಿ, ಸಮೀರ್‌ ಮುಲ್ಲಾ ಪ್ರಕರಣದ ಬಳಿಕ, ಹಿಂದೂ ಸಂಘಟನೆಗಳ ನೆರವು ಪಡೆದು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಬಗೆದಷ್ಟು ಬಯಲಾಗ್ತಿದೆ ಜಿಮ್ ಟ್ರೈನರ್ ಬಂಡವಾಳ – 8 ರಿಂದ 10 ಬಾರಿ ಗರ್ಭಪಾತದ ಮಾತ್ರೆ ನೀಡಿದ್ದ ಸಮೀರ್

[ad_2]

Source link publictv.in

Leave a Reply

Your email address will not be published. Required fields are marked *