Advertisement

ನಟ ಉಪೇಂದ್ರ ಅಣ್ಣನ ಮಗ ನಿರಂಜನ್ ಜೊತೆ ಕ್ರಿಕೆಟರ್ ಶ್ರೇಯಾಂಕ ಪಾಟೀಲ್ ಮದುವೆ?

[ad_1]

Gossip: ಉಪೇಂದ್ರ ಅವರ ಅಣ್ಣನ ಮಗ, ಉದಯೋನ್ಮುಖ ನಟ ನಿರಂಜನ್ ಸುಧೀಂದ್ರ ಹಾಗೂ ಟೀಂ ಇಂಡಿಯಾದ ಮಹಿಳಾ ಸ್ಟಾರ್ ಕ್ರಿಕೆಟರ್, ಆರ್‌ಸಿಬಿ ತಂಡದ ಟಗರು ಪುಟ್ಟಿ ಶ್ರೇಯಾಂಕ ಪಾಟೀಲ್ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಜಾಲತಾಣಗಳಲ್ಲಿ ಹಬ್ಬಿದೆ. ಈ ಬಗ್ಗೆ ನಟ ನಿರಂಜನ್ ಸುಧೀಂದ್ರ ಕಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು, ಸಿನಿಮಾ ಮತ್ತು ಕ್ರಿಕೆಟ್ ಲೋಕದ ಇಬ್ಬರು ತಾರೆಯರನ್ನು ಜೋಡಿಸಿ ಟ್ರೋಲ್ ಪೇಜ್‌ವೊಂದು ವಿಚಿತ್ರ ಪೋಸ್ಟ್ ಹಾಕಿದ್ದು “ಶ್ರೇಯಾಂಕ ಪಾಟೀಲ್ ಶೀಘ್ರದಲ್ಲೇ ಉಪೇಂದ್ರ ಕುಟುಂಬದ ಸೊಸೆಯಾಗಲಿದ್ದಾರೆ. ಐಪಿಎಲ್‌ನಲ್ಲಿ ಮಿಂಚಿದ ಕರ್ನಾಟಕದ ಪುಟ್ಟಿ ಈಗ ನಿರಂಜನ್ ಸುಧೀಂದ್ರ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಸ್ವತಃ ಉಪೇಂದ್ರ ಅವರೇ ಈ ಲವ್ ಸ್ಟೋರಿ ರಿವೀಲ್ ಮಾಡಿದ್ದಾರೆ” ಎಂಬರ್ಥದ ಸುಳ್ಳು ವರದಿಯನ್ನು ಹರಿಬಿಡಲಾಗಿದೆ. ಇದೀಗ ಸುಳ್ಳು ಸುದ್ದಿ ಹಬ್ಬಿಸಿದ ಅಡ್ಮಿನ್‌ಗೆ ನಿರಂಜನ್ ಖಡಕ್ ಟಾಂಗ್ ನೀಡಿದ್ದಾರೆ.

 ಈ ಬಗ್ಗೆ ಪೋಸ್ಟ್ ಮಾಡಿರುವ ಅವರು ಗುರು, ಇನ್ವಿಟೇಶನ್ ಬಂದ್ರೆ ನಮಗೂ ಒಂದು ಕಳಿಸಿಕೊಡು! ಮೊದಲು ಫ್ಯಾಕ್ಟ್ ಚೆಕ್ (ಸತ್ಯಾಸತ್ಯತೆ ಪರಿಶೀಲನೆ) ಮಾಡಿ ಆಮೇಲೆ ಪೋಸ್ಟ್ ಮಾಡಿ. ಈ ರೀತಿ ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ” ಎಂದು ಬರೆಯುವ ಮೂಲಕ ಮದುವೆ ಸುದ್ದಿಗೆ ಇತಿಶ್ರೀ ಹಾಡಿದ್ದಾರೆ.

ಅಂದಹಾಗೆ ಸಿನಿಮಾ ರಂಗದಲ್ಲಿ ‘ಸೆಕೆಂಡ್ ಹಾಫ್’, ‘ನಮ್ಮ ಹುಡುಗರು’ ಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ನಿರಂಜನ್ ಕೈಯಲ್ಲಿ ಸದ್ಯ ಸಾಲು ಸಾಲು ಚಿತ್ರಗಳಿವೆ. ಇತ್ತ ಶ್ರೇಯಾಂಕ ಪಾಟೀಲ್ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಸ್ಟಾರ್ ಆಟಗಾರ್ತಿ. ಈ ಇಬ್ಬರಿಗೂ ಸಂಬಂಧವೇ ಇಲ್ಲದಿದ್ದರೂ ಈ ಸುದ್ದಿಯನ್ನು ಹಬ್ಬಿಸಲಾಗಿದೆ.

banner



[ad_2]

Source link

Leave a Reply

Your email address will not be published. Required fields are marked *