Advertisement

ಶಿವಮೊಗ್ಗ | ಹುಲಿಗಣತಿಗೆ ಅಳವಡಿಸಿದ್ದ ಸೆನ್ಸಾರ್ ಕ್ಯಾಮೆರಾ ಕಳವು

[ad_1]

tiger image

ಶಿವಮೊಗ್ಗ: ಜಿಲ್ಲೆಯ (Shivamogga) ವಿವಿಧ ವನ್ಯಜೀವಿ ವಿಭಾಗಗಳಲ್ಲಿ ಹುಲಿಗಣತಿ (Tiger Census) ಅಳವಡಿಸಲಾಗಿದ್ದ ಸೆನ್ಸಾರ್ ಕ್ಯಾಮೆರಾಗಳನ್ನು ಕಳ್ಳತನ ಮಾಡಲಾಗಿದೆ.

ಸಕ್ರೇಬೈಲು ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಮಾರ್ಚ್ 01 ರಿಂದ ಹುಲಿಗಣತಿ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯದ ವಿವಿಧ ಆಯಕಟ್ಟಿನ ಜಾಗಗಳಲ್ಲಿ ಅತ್ಯಾಧುನಿಕ ಸೆನ್ಸಾರ್ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಸಕ್ರೇಬೈಲು ವನ್ಯಜೀವಿ ವಲಯದ ಸರ್ವೆ ನಂ.02 ರಲ್ಲಿ ಅಳವಡಿಸಲಾಗಿದ್ದ ಎರಡು ಕ್ಯಾಮರಾಗಳು ಕಳುವಾಗಿವೆ. ಇದನ್ನೂ ಓದಿ: Explained | ಹುಲಿ ಗಣತಿ ಮಾಡೋದು ಹೇಗೆ?

ಮಾ.21 ರಂದು ಮಧ್ಯಾಹ್ನ ಡಿ.ಆರ್.ಎಫ್.ಓ ಸ್ಥಳಕ್ಕೆ ಭೇಟಿ ನೀಡಿದಾಗ ಕ್ಯಾಮೆರಾಗಳು ಅಲ್ಲಿಯೇ ಇದ್ದವು. ಆದರೆ ಮಾ. 22ರಂದು ಬೆಳಿಗ್ಗೆ ಸಿಬ್ಬಂದಿ ಪರಿಶೀಲನೆಗೆ ಹೋದಾಗ ಕ್ಯಾಮೆರಾಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಸುಮಾರು 50 ಸಾವಿರ ರೂ. ಮೌಲ್ಯದ ಈ ಉಪಕರಣಗಳಿಗಾಗಿ ಅರಣ್ಯ ಸಿಬ್ಬಂದಿ ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ ತಡವಾಗಿ ದೂರು ನೀಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಶೆಟ್ಟಿಹಳ್ಳಿ ವನ್ಯಜೀವಿ ವಿಭಾಗದ ಪುರದಾಳು ಗ್ರಾಮದ ಬಾರೇಹಳ್ಳ ಡ್ಯಾಂ ಹತ್ತಿರದ ಸರ್ವೆ ನಂ.32 ರಲ್ಲಿ ಅಳವಡಿಸಲಾಗಿದ್ದ 25 ಸಾವಿರ ರೂ. ಮೌಲ್ಯದ ಕ್ಯಾಮೆರಾ ಕಳುವಾಗಿದೆ. ಹುಲಿ ಗಣತಿಗಾಗಿ ಅಳವಡಿಸಿದ್ದ ಮೆಮೊರಿ ಕಾರ್ಡ್ ಸಹಿತ ಸೆನ್ಸಾರ್ ಕ್ಯಾಮೆರಾವನ್ನು ಕಳ್ಳರು ಹೊತ್ತೊಯ್ದಿದ್ದಾರೆ.

ಮಾ.25ರ ಸಂಜೆ ಗಸ್ತು ವನಪಾಲಕ ಭೇಟಿ ನೀಡಿದಾಗ ಕ್ಯಾಮೆರಾ ಸ್ಥಳದಲ್ಲಿಯೇ ಇತ್ತು. ಆದರೆ ಮಾ.26ರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಕರ್ತವ್ಯದ ಮೇಲೆ ಹೋದಾಗ ಕಳ್ಳತನವಾಗಿರುವುದು ದೃಢಪಟ್ಟಿದೆ. ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ಅರಣ್ಯ ಇಲಾಖೆಯ (Forest Department) ಉಪವಲಯ ಅರಣ್ಯಾಧಿಕಾರಿಗಳು ಈ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಎಷ್ಟೇ ಒತ್ತಾಯ ಮಾಡಿದ್ರೂ ದಾವಣಗೆರೆಯಲ್ಲಿ ಪ್ರಚಾರಕ್ಕೆ ಒಪ್ಪದೇ ತೆರಳಿದ ಜಮೀರ್

[ad_2]

Source link publictv.in

Leave a Reply

Your email address will not be published. Required fields are marked *