Advertisement

ಮಧ್ಯಪ್ರಾಚ್ಯದಲ್ಲಿ ಮುಗಿಯದ ಯುದ್ಧ – ಅಮೆರಿಕ ಕಚ್ಛಾ ತೈಲ ಬೆಲೆ ಬ್ಯಾರಲ್​ಗೆ 113 ಡಾಲರ್​ಗೆ ಏರಿಕೆ​

[ad_1]

325702249 1 6 1 e1566118011669

ನವದೆಹಲಿ: ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನಿನ ಇಂಧನ ಸೌಲಭ್ಯಗಳ ಮೇಲೆ ದಾಳಿ ಮಾಡಲಾಗುವುದು ಎಂಬ ಡೊನಾಲ್ಡ್​ ಟ್ರಂಪ್​ (Donald Trump) ಅವರ ಎಚ್ಚರಿಕೆ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ.

Mojtaba Khamenei Donald Trump

ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 1.4 ರಷ್ಟು ಏರಿಕೆಯಾಗಿ 110.60 ಡಾಲರ್‌ಗೆ (10,287 ರೂಪಾಯಿ) ಏರಿಕೆ ಕಂಡಿದ್ದರೆ, ಅಮೆರಿಕದ ಕಚ್ಚಾ ತೈಲದ ಬೆಲೆ ಶೇ. 1.8 ರಷ್ಟು ಏರಿಕೆಯಾಗಿ 113.60 (10,568 ರೂಪಾಯಿ) ಡಾಲರ್‌ಗೆ (US Dollar) ತಲುಪಿದೆ. ಇರಾನಿನ ಶತ್ರು ರಾಷ್ಟ್ರಗಳಿಗೆ ತೈಲ ಪೂರೈಕೆ ಮಾರ್ಗ ಬಂದ್‌ ಮಾಡಿರುವುದರಿಂದ ಜಾಗತಿಕ ಇಂಧನ ಪೂರೈಕೆ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಇದನ್ನೂ ಓದಿ: 7,000 ಅಡಿ ಎತ್ತರ, ಪರ್ವತಗಳ ಬಿರುಕಿನ ಮಧ್ಯೆ ಅವಿತಿದ್ದ ಅಮೆರಿಕ ಪೈಲಟ್‌ – ರಹಸ್ಯ ಕಾರ್ಯಾಚರಣೆಯೇ ರೋಚಕ!

two more india bound petroleum vessels cross strait of hormuz navy on standby

ಹಾರ್ಮುಜ್‌ ಜಲಸಂಧಿ (Strait Of Hormuz) ತೆರೆಯದಿದ್ದರೆ, ಮಾರಕ ದಾಳಿ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿದರು. ಇದಕ್ಕೆ ತನ್ನದೇ ದಾಟಿಯಲ್ಲಿ ಕೌಂಟರ್‌ ಕೊಟ್ಟ ಇರಾನ್‌, ಯುದ್ಧ ನಷ್ಟದ ಪರಿಹಾರ ನೀಡುವವರೆಗೆ ತೆರೆಯುವುದಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ನಷ್ಟ ಪರಿಹಾರವಿಲ್ಲದೇ ಹಾರ್ಮುಜ್ ತೆರೆಯಲ್ಲ – ಟ್ರಂಪ್ ಡೆಡ್‌ಲೈನ್‌ಗೆ ಇರಾನ್ ಕೌಂಟರ್

[ad_2]

Source link publictv.in

Leave a Reply

Your email address will not be published. Required fields are marked *