Advertisement

MP: ನನಗಿನ್ನು ಕೇವಲ 19, ಗಂಡನಿಗೆ 40 ವರ್ಷ, ಸಂಸಾರ ಮಾಡಲಾಗದು ಎಂದ ಯುವತಿ

[ad_1]

MP: ನನ್ನ ಗಂಡನಿಗೆ 40 ವರ್ಷ. ನನಗಿನ್ನೂ ಕೇವಲ 19 ವರ್ಷ ಶೋ ನಮ್ಮಿಬ್ಬರ ನಡುವೆ ಸುಮಾರು 21 ವರ್ಷಗಳ ಅಂತರವಿದೆ. ಇದರಿಂದ ನನ್ನ ಗಂಡನೊಂದಿಗೆ ಸಂಸಾರ ಮಾಡಲು ಸಾಧ್ಯವಿಲ್ಲ ಎಂದ ಯುವತಿಗೆ ಮಧ್ಯಪ್ರದೇಶ ಹೈಕೋರ್ಟ್ ಪ್ರೇಮಿಯ ಜೊತೆ ಜೀವಿಸಲು ಅವಕಾಶ ಮಾಡಿಕೊಟ್ಟಿದೆ.

 ಹೌದು ನನ್ನ ಗಂಡ ಮತ್ತು ನನ್ನ ನಡುವೆ 21 ವರ್ಷಗಳ ಅಂತರವಿರುವ ಕಾರಣ ನಮ್ಮಿಬ್ಬರ ಚಿಂತನೆ, ಆಲೋಚನೆಗಳು ಪ್ರತಿಯೊಂದು ವಿಭಿನ್ನವಾಗಿದ್ದು ನನಗೆ ಅವರೊಂದಿಗೆ ಸಂಸಾರ ಮಾಡಲು ಸಾಧ್ಯವಿಲ್ಲ ಇಂದು 19 ವರ್ಷದ ಯುವತಿಯೊಬ್ಬಳು ಮಧ್ಯಪ್ರದೇಶದ ಹೈಕೋರ್ಟ್ ನಲ್ಲಿ ಕಡ್ಡಿ ತುಂಡಾಗುವಂತೆ ವಾದ ಮಂಡಿಸಿದ್ದಾಳೆ. ಯುವತಿಯ ವಾದ ಕೇಳಿದ ಹೈಕೋರ್ಟ್ ಆಕೆ ಹೇಳಿರುವುದಕ್ಕೆ ಒಪ್ಪಿ ಲವ್ವರ್ ಜೊತೆ ಜೀವನ ನಡೆಸಲು ಅನುಮತಿ ಸೂಚಿಸಿದೆ.

40 ವರ್ಷದ ವ್ಯಕ್ತಿಯೊಬ್ಬ ಅನುಜ್​ ಕುಮಾರ್​ ಎಂಬ ವ್ಯಕ್ತಿ ನನ್ನ ಪತ್ನಿಯನ್ನು ತನ್ನ ಜೊತೆ ಅಕ್ರಮವಾಗಿ ಇರಿಸಿಕೊಂಡಿದ್ದಾನೆ. ಆಕೆ ಎಲ್ಲಿದ್ದಾಳೋ ತಿಳಿದಿಲ್ಲ ಎಂದು ಕೋರ್ಟ್​ ಮೆಟ್ಟಿಲೇರಿದ್ದರು. ಪೊಲೀಸರು 19 ವರ್ಷದ ಯುವತಿ ಎಲ್ಲಿದ್ದಾಳೆ ಎನ್ನುವುದನ್ನು ಪತ್ತೆ ಹಚ್ಚಿ ‘ಒನ್-ಸ್ಟಾಪ್ ಸೆಂಟರ್’ನಲ್ಲಿ ಇರಿಸಿದ್ದರು. ಆ ನಂತರ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು.

ನ್ಯಾಯಮೂರ್ತಿಗಳಾದ ಆನಂದ್​ ಪಾಠಕ್​ ಮತ್ತು ಪುಷ್ಪೇಂದ್ರ ಯಾದವ್​ ಅವರಿದ್ದ ವಿಭಾಗೀಯ ಪೀಠವು ಈ ಅರ್ಜಿ ವಿಚಾರಣೆಯನ್ನು ನಡೆಸಿತು. 

banner

ಈ ವೇಳೆ ನ್ಯಾಯಾದೀಶರ ಮುಂದೆ ಯುವತಿ ಹಾಜರಾಗಿ ಯಾವುದೇ ಮುಜುಗರವಿಲ್ಲದೆ, ಆತಂಕಕ್ಕೆ ಒಳಗಾಗದೆ ‘ಸರ್ ನನಗೆ 19 ವರ್ಷ ಹಾಗೂ ನನ್ನ ಪತಿಗೆ 40 ವರ್ಷ. ನಮ್ಮಿಬ್ಬರ ಮಧ್ಯೆ 21 ವರ್ಷ ಗ್ಯಾಪ್​ ಇದೆ. ನಾವು ವೈವಾಹಿಕ ಜೀವನ ನಡೆಸೋದಾದರೂ ಹೇಗೆ ಹೇಳಿ. ನನಗೆ ಅವರೊಂದಿಗೆ ಬದುಕಲು ಸಾಧ್ಯ ಇಲ್ಲ. ಈ ಮದುವೆ ನನ್ನಿಷ್ಟದಂತೆ ನಡೆದಿಲ್ಲ. ನನ್ನ ಪತಿ ನನ್ನನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ.ನಾನೀಗ ನನ್ನ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಷ್ಟು ವಯಸ್ಕಳಾಗಿದ್ದೇನೆ. ನಾನು ನನ್ನಿಷ್ಟದಂತೆ ಬದುಕಲು ಇಚ್ಛಿಸುತ್ತೇನೆ. ಸ್ವಂತ ಇಚ್ಛೆಯಂತೆ ಬದುಕುತ್ತಿದ್ದೇನೆ. ನಾನು ನನ್ನ ಪೋಷಕರ ಜೊತೆ ಅಥವಾ ಪತಿ ಜೊತೆ ಇರೋದಿಲ್ಲ. ಹೀಗಾಗಿ ನಾನು ನನ್ನ ಪ್ರಿಯತಮನ ಸೇರುತ್ತೇನೆ” ಎಂದು ದೃಢವಾಗಿ ತನ್ನ ನಿರ್ಧಾರವನ್ನು ತಿಳಿಸಿದ್ದಾಳೆ.

ನಂತರ ಕೋರ್ಟ್​ ಆಕೆಯ ಮನವೊಲಿಸಲು ಕೌನ್ಸಲಿಂಗ್ ಕೊಡಿಸಿತು. ಆಗಲೂ ಯಾವುದೇ ಬದಲಾವಣೆ ಕಾಣದಿದ್ದ ಕಾರಣಕ್ಕೆ ಆಕೆಯ ಪ್ರಿಯಕರನ ಜೊತೆಗೆ ಬದುಕಲು ಒಪ್ಪಿಗೆ ನೀಡಿದೆ. ಈ ವೇಳೆ ಆಕೆಯ ಪ್ರಿಯಕರ ಸಹ ಕೋರ್ಟ್​ಗೆ ಹಾಜರಾಗಿ, ಯುವತಿಯನ್ನು ಸುರಕ್ಷಿತ ಮತ್ತು ಜವಾಬ್ದಾರಿಯುತವಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾನೆ. ಯಾವುದೇ ಒತ್ತಡಕ್ಕೆ ಒಳಗಾಗದೇ ಯುವತಿ ತನ್ನ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿಕೊಂಡ ನಂತರ, ಆಕೆಯನ್ನು ಪ್ರೇಮಿಯೊಂದಿಗೆ ತೆರಳಲು ಅನುಮತಿ ನೀಡಿದೆ. ಜೊತೆಗೆ ಅವರಿಬ್ಬರ ಸುರಕ್ಷತೆಗಾಗಿ ಆರುತಿಂಗಳ ಕಾಲ ಶೌರ್ಯ ದೀದಿ ಎನ್ನುವ ನಿಯೋಜಿತ ಅಧಿಕಾರಿಗಳ ಸಂಪರ್ಕದಲ್ಲಿರುವಂತೆ ಸೂಚನೆ ನೀಡಲಾಗಿದೆ.



[ad_2]

Source link

Leave a Reply

Your email address will not be published. Required fields are marked *