Advertisement

ರಾಜ್ಯ BJP ಕಚೇರಿಗೂ ತಟ್ಟಿದ LPG ಗ್ಯಾಸ್ ಎಫೆಕ್ಟ್ !!

[ad_1]

LPG: ಇರಾನ್-ಇಸ್ರೇಲ್-ಅಮೆರಿಕ ಸಂಘರ್ಷದಿಂದ ಉಂಟಾದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು ಭಾರತದಲ್ಲಿ ತೈಲ ಮತ್ತು ಎಲ್‌ಪಿಜಿ (LPG) ಸರಬರಾಜಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಆದರೆ ಇದರ ಬಿಸಿ ಜನಸಾಮನ್ಯರಿಗೆ ಮಾತ್ರವಲ್ಲ ಬೆಂಗಳೂರಿನಲ್ಲಿರುವ ಬಿಜೆಪಿ ರಾಜ್ಯ ಕಚೇರಿಗೂ ತಟ್ಟಿದೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಸಿಗದೆ ಸಿಬ್ಬಂದಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಸಿಬ್ಬಂದಿಗಳು ಒಲೆ ಮೊರೆ ಹೋಗಿ ಪರದಾಟ ನಡೆಸುತ್ತಿದ್ದಾರೆ. ಕೆಲವರು ವಿದ್ಯುತ್ ಬಯೋ ಒಲೆ ಅಥವಾ ವುಡ್ ಪೆಲ್ಲೆಟ್ (ಮರದ ಗುಂಡಿಗಳು) ಸ್ಟೋವ್ ಬಳಸಿ ಅಡುಗೆ ಮಾಡುತ್ತಿದ್ದಾರೆ. ಇದು ಸಾಮಾನ್ಯವಾಗಿ ಕಚೇರಿಯಲ್ಲಿ ದಿನನಿತ್ಯದ ಊಟ-ತಿಂಡಿ ತಯಾರಿಕೆಗೆ ತೊಂದರೆ ಉಂಟುಮಾಡಿದೆ.

ಕೇಂದ್ರ ಬಿಜೆಪಿ ಸರ್ಕಾರ ‘ಗ್ಯಾಸ್ ಅಭಾವವಿಲ್ಲ’ ಎಂದು ಹೇಳುತ್ತಿದ್ದರೂ, ರಾಜ್ಯ ಮಟ್ಟದಲ್ಲಿ ವಾಣಿಜ್ಯ ಗ್ಯಾಸ್ ಸರಬರಾಜು ತೀವ್ರವಾಗಿ ಕುಸಿದಿದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸಾಮೂಹಿಕ ಅಡುಗೆ ಮಾಡುವ ಸ್ಥಳಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಬಿಜೆಪಿ ಕಚೇರಿಯಲ್ಲೂ ಇದೇ ಪರಿಸ್ಥಿತಿ ಎದುರಾಗಿರುವುದು ಆಸಕ್ತಿದಾಯಕವಾಗಿದೆ.



[ad_2]

Source link

Leave a Reply

Your email address will not be published. Required fields are marked *