Advertisement

ತಡರಾತ್ರಿ ಯುವತಿಯೊಬ್ಬರ ಸಹಾಯ ಮಾಡಿ ಮಾನವೀಯತೆ ಮೆರೆದ BMTC ಸಿಬ್ಬಂದಿ, ರ‍್ಯಾಪಿಡೋ ಚಾಲಕ

[ad_1]

woman in Bengaluru Reached home Safely at late night with help of bmtc worker and rapido driver

ಬೆಂಗಳೂರು: ತಡರಾತ್ರಿ ಯುವತಿಯೊಬ್ಬರ ಸುರಕ್ಷತೆಗೆ ಬಿಎಂಟಿಸಿ (BMTC) ಸಿಬ್ಬಂದಿ ಮತ್ತು ರ‍್ಯಾಪಿಡೋ (Rapido) ಚಾಲಕ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.

ಸೋಮವಾರ (ಏ.6) ಬೆಳಗಿನ ಜಾವ 3 ಗಂಟೆ ಸುಮಾರಿಗೆ ಯುವತಿಯೊಬ್ಬರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾಡುಗೋಡಿಗೆ ಬಿಎಂಟಿಸಿ ಬಸ್‌ನಲ್ಲಿ ಬಂದಿದ್ದಾರೆ. ಕತ್ತಲು ಮತ್ತು ನಿರ್ಜನ ಪ್ರದೇಶವಾಗಿದ್ದರಿಂದ ಆಕೆಗೆ ಕ್ಯಾಬ್ ಬುಕ್ ಮಾಡಿದ್ರು, ಬುಕ್ ಆಗುತ್ತಿರಲಿಲ್ಲ. ಈ ವೇಳೆ ಬಸ್‌ನಿಂದ ಯುವತಿಯನ್ನ ಇಳಿಸಿದ ಬಳಿಕವೂ ಒಬ್ಬಳೇ ಇದ್ದ ಕಾರಣ ಬಿಎಂಟಿಸಿ ಸಿಬ್ಬಂದಿ ಆಕೆಗಾಗಿ ಅದೇ ಜಾಗದಲ್ಲಿ ಕಾದಿದ್ದಾರೆ. ಬಳಿಕ ಈ ವೇಳೆ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ರ‍್ಯಾಪಿಡೋ ಚಾಲಕನೋರ್ವ ಯುವತಿ ಪರಿಸ್ಥಿತಿ ಕಂಡು ಸಹಾಯಕ್ಕೆ ಧಾವಿಸಿದ್ದಾನೆ. ಬಳಿಕ ಬಿಎಂಟಿಸಿ ಸಿಬ್ಬಂದಿ ವಿಚಾರಿಸಿಕೊಂಡು ಯುವತಿಯನ್ನು ಆತನೊಂದಿಗೆ ಸುರಕ್ಷಿತವಾಗಿ ಕಳುಹಿಸಿದ್ದಾರೆ. ಇದನ್ನೂ ಓದಿ: ಇನ್‌ಸ್ಟಾದಲ್ಲಿ ಲವ್, ಮದ್ವೆ ಹೆಸರಲ್ಲಿ ಸೆಕ್ಸ್ – ವಿಡಿಯೋ ವೈರಲ್ ಮಾಡುವ ಬೆದರಿಕೆಯೊಡ್ಡಿ 150 ಗ್ರಾಂ ಚಿನ್ನ, 19 ಲಕ್ಷ ಪಡೆದು ವಂಚನೆ

ರ‍್ಯಾಪಿಡೋ ಚಾಲಕ ಕೂಡ ಯಾವುದೇ ಹಣ ಪಡೆಯದೇ ಸುರಕ್ಷಿತವಾಗಿ ಯುವತಿಯನ್ನ ಮನೆಗೆ ತಲುಪಿಸಿ ಜವಾಬ್ದಾರಿ ತೋರಿಸಿದ್ದಾನೆ. ಘಟನೆ ಬಗ್ಗೆ ಯುವತಿ ಐಶ್ವರ್ಯ ಸಾಮಾಜಿಕ ಜಾಲತಾಣದಲ್ಲಿ ವಿಚಾರ ಹಂಚಿಕೊಂಡು, ಬಿಎಂಟಿಸಿ ಸಿಬ್ಬಂದಿ ಹಾಗೂ ರ‍್ಯಾಪಿಡೋ ಚಾಲಕನಿಗೆ ಧನ್ಯವಾದ ತಿಳಿಸಿದ್ದಾರೆ.


[ad_2]

Source link publictv.in

Leave a Reply

Your email address will not be published. Required fields are marked *