Advertisement

ಒಂದೇ ರಾತ್ರಿಯಲ್ಲಿ ಇಡೀ ಇರಾನ್‌ನ ಸರ್ವನಾಶ ಮಾಡಬಹುದು, ಅದು ಮಂಗಳವಾರ ಇರಬಹುದು: ಟ್ರಂಪ್‌ ಮತ್ತೆ ಎಚ್ಚರಿಕೆ

[ad_1]

ವಾಷಿಂಗ್ಟನ್‌: ಅಮೆರಿಕವು (America) ಒಂದೇ ರಾತ್ರಿಯಲ್ಲಿ ಇಡೀ ಇರಾನ್ (Iran) ದೇಶವನ್ನು ನಾಶಪಡಿಸಬಹುದು. ಅದು ಮಂಗಳವಾರ ರಾತ್ರಿ ಆಗಿರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ (Donald Trump) ಎಚ್ಚರಿಸಿದ್ದಾರೆ.‌

ಒಪ್ಪಂದ ಮಾಡಿಕೊಳ್ಳಲು ವಿಫಲವಾದರೆ ಅಥವಾ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ವಿಫಲವಾದರೆ, ಇರಾನಿನ ವಿದ್ಯುತ್ ಸ್ಥಾವರಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಟ್ರಂಪ್ ಎಚ್ಚರಿಸಿದ್ದರು. ಅದರ ಬೆನ್ನಲ್ಲೇ ಮತ್ತೊಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಅಮೆರಿಕ – ಇಸ್ರೇಲಿ ದಾಳಿಯಲ್ಲಿ ಇರಾನ್‌ ಗುಪ್ತಚರ ಮುಖ್ಯಸ್ಥ ಮಜೀದ್ ಖಾದೇಮಿ ಹತ್ಯೆ

ಇದರ ನಂತರ ಟ್ರಂಪ್, ಗಡುವು ಕೊನೆಗೊಳ್ಳುವ ನಿಖರವಾದ ಸಮಯವನ್ನು ಉಲ್ಲೇಖಿಸುವ ಪೋಸ್ಟ್ ಹಂಚಿಕೊಂಡಿದ್ದರು. ‘ಮಂಗಳವಾರ, ಪೂರ್ವ ಸಮಯ ರಾತ್ರಿ 8:00 ಗಂಟೆಗೆ’ ಎಂದು ಡೆಡ್‌ಲೈನ್‌ ಅನ್ನು ಇರಾನ್‌ಗೆ ಟ್ರಂಪ್‌ ನೆನಪಿಸಿದ್ದರು.

ಯುದ್ಧವನ್ನು ಕೊನೆಗೊಳಿಸಲು ಕೆಲಸ ಮಾಡುತ್ತಿರುವ ದೇಶಗಳು 45 ದಿನಗಳ ಕದನ ವಿರಾಮ ಪ್ರಸ್ತಾಪವನ್ನು ಮುಂದಿಟ್ಟಿವೆ ಎಂದು ಟ್ರಂಪ್ ಒಪ್ಪಿಕೊಂಡರು. ಇದನ್ನು ಮಹತ್ವದ ಹೆಜ್ಜೆ ಎಂದು ಕರೆದರು. ಆದರೆ ಅದನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ.

[ad_2]

Source link publictv.in

Leave a Reply

Your email address will not be published. Required fields are marked *