[ad_1]

ಗುವಾಹಟಿ: ರಾಜಸ್ಥಾನ ರಾಯಲ್ಸ್ (Rajasthan Royals) ತಂಡದ ಯುವ ಆಟಗಾರ 15 ವರ್ಷದ ವೈಭವ್ ಸೂರ್ಯವಂಶಿ(Vaibhav Sooryavanshi ) ವಿಶ್ವದ ಬೆಸ್ಟ್ ಬೌಲರ್ ಬುಮ್ರಾ ಅವರ ಒಂದೇ ಓವರಿನಲ್ಲಿ ಎರಡು ಸಿಕ್ಸ್ ಚಚ್ಚಿದ್ದಾರೆ.
ಮಳೆಯಿಂದ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ರಾಜಸ್ಥಾನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿತು.
11 ಓವರ್‌ಗಳಿಗೆ ಪಂದ್ಯ ನಿಗದಿಯಾದ ಕಾರಣ ಆರಂಭಿಕ ಆಟಗಾರರಾಗಿ ಇಳಿದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ(Jasprit Bumrah) ಮೊದಲ ಓವರ್‌ನಿಂದಲೇ ಸಿಕ್ಸರ್, ಬೌಂಡರಿ ಸಿಡಿಸಲು ಆರಂಭಿಸಿದರು. ಇದನ್ನೂ ಓದಿ: ಪಾಕ್ ಕ್ರಿಕೆಟ್ ಲೀಗ್‌ಗೆ ಶಾಕ್ – ಡೇವಿಡ್ ವಾರ್ನರ್ ಅರೆಸ್ಟ್
The sheer audacity of Vaibhav Sooryavanshi
The 1⃣5⃣ year old welcomes Jasprit Bumrah with a maximum!
#TATAIPL | #KhelBindaas | #RRvMI | @rajasthanroyals pic.twitter.com/cI0zqCXz0X
— IndianPremierLeague (@IPL) April 7, 2026
ವೈಭವ್ ಬ್ಯಾಟಿಂಗ್ ಸಿಕ್ಕಿದ್ದೇ ಎರಡನೇ ಓವರ್‌ನಲ್ಲಿ ಬುಮ್ರಾ ಎಸೆದ ಮೊದಲ ಎಸೆತವನ್ನೇ ಸಿಕ್ಸರ್ ಅಟ್ಟಿದರೆ ಮತ್ತೆ ನಾಲ್ಕನೇ ಎಸೆತದಲ್ಲೂ ಸಿಕ್ಸ್ ಸಿಡಿಸಿದರು. ಅಂತಿಮವಾಗಿ ವೈಭವ್ ಸೂರ್ಯವಂಶಿ 14 ಎಸೆತಗಳಲ್ಲಿ 39 ರನ್( 1 ಬೌಂಡರಿ, 5 ಸಿಕ್ಸ್) ಸಿಡಿಸಿ ಶಾರ್ದೂಲ್ ಠಾಕೂರ್ ಎಸೆತದಲ್ಲಿ ಸಿಕ್ಸ್ ಹೊಡೆಯಲು ಹೋಗಿ ಬೌಂಡರಿ ಗೆರೆಯ ಬಳಿ ತಿಲಕ್ ವರ್ಮಾ ಹಿಡಿದ ಕ್ಯಾಚ್‌ಗೆ ಔಟಾದರು.
ಔಟಾಗುವ ಮೊದಲು ಜೈಸ್ವಾಲ್ ಮತ್ತುಸೂರ್ಯವಂಶಿ ಮೊದಲ ವಿಕೆಟಿಗೆ ಕೇವಲ 30 ಎಸೆತಗಳಲ್ಲಿ 80 ರನ್ ಜೊತೆಯಾಟವಾಡಿದ್ದರು
[ad_2]
Source link publictv.in




The 1⃣5⃣ year old welcomes Jasprit Bumrah with a maximum! 














Leave a Reply