Advertisement

ದಾವಣಗೆರೆ, ಬಾಗಲಕೋಟೆ ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ

[ad_1]

Congress BJP

ದಾವಣಗೆರೆ, ಬಾಗಲಕೋಟೆ: ದಾವಣಗೆರೆ ದಕ್ಷಿಣ (Davanagere South) ಹಾಗೂ ಬಾಗಲಕೋಟೆ(Bagalkote) ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ (By Election) ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು ಗುರುವಾರ ಎರಡೂ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಎರಡೂ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರು ಇಂದು ಬಹಿರಂಗ ಪ್ರಚಾರ ಅಂತ್ಯಕ್ಕೂ ಮುನ್ನ ಕೊನೆಯ ದಿನದ ಕಸರತ್ತು ನಡೆಸಿದ್ರು. ನಾಳೆ ಸಂಜೆಯವರೆಗೂ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಅವಕಾಶವಿದೆ.

 

ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಎರಡೂ ಕ್ಷೇತ್ರದಲ್ಲಿ ಸಮಾವೇಶ ನಡೆಸಿ, ಭರ್ಜರಿ ಮತಯಾಚನೆ ಮಾಡಿದ್ರು. ದಾವಣಗೆರೆ ದಕ್ಷಿಣ ಕ್ಷೇತ್ರದದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಡಿಸಿಎಂ ಡಿಕೆಶಿ ರೋಡ್ ಶೋ ನಡೆಸಿದರು. ಈ ಉಪಚುನಾವಣೆ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.

ಕಾಂಗ್ರೆಸ್‌ನವರು ಹಣದ ಹೊಳೆಯನ್ನೇ ಹರಿಸಿದರೂ ಬಿಜೆಪಿಗೆ ಜನರು ಅಶೀರ್ವಾದ ಮಾಡಲಿದ್ದಾರೆ ಅಂತ ಬಿಜೆಪಿ ಅಭ್ಯರ್ಥಿ ಕರಿಯಪ್ಪ ಹೇಳಿದ್ದಾರೆ. ದಾವಣಗೆರೆಯಲ್ಲಿ ಸಾಹುಕಾರ್ ಮತ್ತು  ಬಡವರ ನಡುವೆ ನಡೆಯುತ್ತಿರೋ ಚುನಾವಣೆ ಎಂದು ಆರ್.ಅಶೋಕ್ ಹೇಳಿದರು.

[ad_2]

Source link publictv.in

Leave a Reply

Your email address will not be published. Required fields are marked *