Advertisement

ಕ್ರಿಕೆಟ್‌ ಪಂದ್ಯದ ವೇಳೆ ಜೇನುನೊಣಗಳ ದಾಳಿ: 18 ಮಂದಿಗೆ ಗಾಯ

[ad_1]

ಕ್ರಿಕೆಟ್‌ ಪಂದ್ಯದ ವೇಳೆ ಜೇನುನೊಣಗಳ ದಾಳಿಯಿಂದ 18 ಜನ ಗಾಯಗೊಂಡಿರುವ ಘಟನೆ ನಡೆದಿದೆ. ಭದ್ರಾವತಿಯ ವಿಐಪಿಎಲ್‌ ಕ್ರೀಡಾಂಗಣದಲ್ಲಿ ಟೆನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಜೇಣುನೊಣಗಳು ದಾಳಿ ಮಾಡಿದೆ.

ರಾಜಸ್ಥಾನ ಸಮಾಜ ವತಿಯಿಂದ ಕ್ರಿಕೆಟ್‌ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಮೊದಲನೇ ಪಂದ್ಯ ಆರಂಭದ ಸಮಯದಲ್ಲಿ ಜೇನುನೊಣಗಳು ಸ್ಥಳದಲ್ಲಿದ್ದವರ ಮೇಲೆ ದಿಢೀರ್‌ ದಾಳಿ ಮಾಡಿದೆ. ಇವುಗಳಿಂದ ತಪ್ಪಿಸಲು ಆಟಗಾರರು ಮತ್ತು ಪ್ರೇಕ್ಷಕರು ದಿಕ್ಕಾಪಾಲಾಗಿ ಓಡಿದ್ದಾರೆ. ಜೇನುನೊಣಗಳ ದಾಳಿಯಿಂದ ಗಾಯಗೊಂಡ 18 ಜನರ ಪೈಕಿ ಇಬ್ಬರನ್ನು ಭದ್ರಾವತಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದವರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ತೆರಳಿದ್ದಾರೆ.



[ad_2]

Source link

Leave a Reply

Your email address will not be published. Required fields are marked *