Advertisement

ಹಿಂದೂ ಯುವತಿ ಜೊತೆ ವಿವಾಹಿತ ಮುಸ್ಲಿಂ ವ್ಯಕ್ತಿ ಪರಾರಿ

[ad_1]

ತನ್ನ ಮಗಳನ್ನು ಮುಸ್ಲಿಂ ಸಮುದಾಯದ ವಿವಾಹಿತ ವ್ಯಕ್ತಿ ಕರೆದುಕೊಂಡು ಹೋಗಿದ್ದು, ಜೊತೆಗೆ ಮನೆ ಖರೀದಿ ಮಾಡಲು ನೀಡಿದ್ದ ಹತ್ತು ಲಕ್ಷ ಹಣ ಕೂಡಾ ತೆಗೆದುಕೊಂಡು ಹೋಗಿದ್ದಾನೆ. ಇತ್ತ ಹಣನೂ ಇಲ್ಲ, ಮಗಳೂ ಇಲ್ಲ ಎನ್ನುವಂತಾಗಿದೆ ಎಂದು ತಾಯಿಯೊಬ್ಬಳು ಮನವಿ ಮಾಡಿದ್ದಾರೆ. ಈ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕಳೆದ ಎರಡು ವರ್ಷಗಳಿಂದ ಮಗಳಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

ಧಾರವಾಡದ ಕೆಲಗೇರಿಯ ನಿವಾಸಿ 22 ವರ್ಷದ ತಂಗೆಮ್ಮಾ ಎಂಬ ಯುವತಿ ಮನೆ ಎದುರಿನ ನಿವಾಸಿ ಕಾರು ಚಾಲಕ ಮುಸ್ಲಿಂ ವ್ಯಕ್ತಿಯ ಜೊತೆ ಓಡಿ ಹೋಗಿದ್ದಾಳೆ. ಈ ಕುರಿತು ತಾಯಿ ಮಂಜುಳಾ ಮಾಹಿತಿ ನೀಡಿದ್ದಾರೆ. ತಮ್ಮ ಮಗಳಿಗೆ ಪರಿಚಿತ ಯುವಕನ ಜೊತೆ ವಿವಾಹವಾಗಿದ್ದಳು. ಆದರೆ ಮಗಳು ನಮ್ಮ ಜೊತೆಯೇ ಇದ್ದಳು. ಆಕೆಯ ಪತಿ ಆಗಾಗ ಬಂದು ಹೋಗುತ್ತಿದ್ದ. ಧಾರವಾಡದ ಕೆಲಗೇರಿಯಲ್ಲಿ ಬಾಡಿಗೆ ಮನೆಯಲ್ಲಿದ್ದಾಗ ವಕೀಲರೊಬ್ಬರು ಪರಿಚಯವಿದ್ದರು. ಕಾರ್‌ ಡ್ರೈವರ್‌ ಆಗಿ ಮುನ್ನಾ ಎನ್ನುವಾತ ಕೆಲಸ ಮಾಡುತ್ತಿದ್ದ. ಆಗ ನಮಗೆ ಸ್ವಂತ ಮನೆ ಮಾಡಬೇಕು ಹೀಗಾಗಿ ಮನೆ ಹುಡುಕಿ ಕೊಡಿ ಎಂದು ಮುನ್ನಾ ಮತ್ತು ವಕೀಲರಿಗೆ ಹತ್ತು ಲಕ್ಷ ಹಣ ನೀಡಿದ್ದೆವು.

ಆ ಬಳಿಕ ವಕೀಲರು ಮತ್ತು ಮುನ್ನಾ ಆಗಾಗ ಮನೆಗೆ ಬಂದು ಹೋಗುತ್ತಿದ್ದರು. ಆದರೆ 2023 ರಲ್ಲಿ ನಾವು ಮನೆಯಲ್ಲಿ ಇಲ್ಲದ ಸಂದರ್ಭ ಮುನ್ನಾ ತಮ್ಮ ಮಗಳನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಈ ಕುರಿತು ಧಾರವಾಡದ ಸಬ್‌ ಅರ್ಬನ್‌ ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಿದ್ದೆವು. ಆಗ ಪೊಲೀಸರು ಮುನ್ನಾ ವಿರುದ್ಧ ದೂರನ್ನು ದಾಖಲು ಮಾಡಿಕೊಳ್ಳದೇ ಕೇವಲ ಮಿಸ್ಸಿಂಗ್‌ ಕಂಪ್ಲೇಟ್‌ ದಾಖಲು ಮಾಡಿದ್ದರು.

ಆದರೆ ಇಲ್ಲಿಯವರೆಗೆ ಮುನ್ನಾ ಮತ್ತು ತಮ್ಮ ಮಗಳು ಎಲ್ಲಿದ್ದಾರೆ ಎಂದು ಹುಡುಕಿಲ್ಲ ಎಂದು ಆರೋಪ ಮಾಡಿದ್ದಾರೆ.

banner



[ad_2]

Source link

Leave a Reply

Your email address will not be published. Required fields are marked *