Advertisement

ಹಾಸ್ಟೆಲ್‌ ಬಳಿ ಡ್ರಗ್ಸ್‌ ಮಾರುತ್ತಿದ್ದ ಆರೋಪಿಗಳು ಅರೆಸ್ಟ್‌ – 10.5 ಲಕ್ಷ ಮೌಲ್ಯದ ಗಾಂಜಾ ಸೀಜ್‌

[ad_1]

suspects arrested for selling drugs near hostel in yelahanka

ಬೆಂಗಳೂರು: ಯಲಹಂಕ (Yelahanka) ಉಪನಗರದ ಬಾಯ್ಸ್ ಹಾಸ್ಟೆಲ್ ಒಂದರ ಹಿಂಭಾಗ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಯಲಹಂಕ ಉಪನಗರ ಪೊಲೀಸರು (Police) ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮುಹಮ್ಮದ್ ನಿಶಾದ್ ಹಾಗೂ ಆದೇಶ್‌ ಎಂದು ಗುರುತಿಸಲಾಗಿದೆ. ಬಂಧಿತರಿಂದ 10.5 ಲಕ್ಷದ ರೂ. ಮೌಲ್ಯದ 21 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರೂ ಹಾಸ್ಟೆಲ್‌ ಹಿಂಭಾಗದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್‌ ಮಾಡಿ, ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಗಾಂಜಾ ತಂದು ಇಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಮೈಸೂರಲ್ಲಿ ಸಿಕ್ಕ 12 ಕೋಟಿ ಮೌಲ್ಯದ ಡ್ರಗ್ಸ್‌ಗೆ ಮುಂಬೈ ನಂಟು

ಆರೋಪಿಗಳ ವಿರುದ್ಧ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿ ಕೇಸ್ ದಾಖಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಮೈಸೂರಲ್ಲಿ ಡ್ರಗ್ಸ್‌ ಗೋಡೌನ್‌ ಜಪ್ತಿ – ಉತ್ತರ ಪ್ರದೇಶ ಮೂಲದ ಖತರ್ನಾಕ್ ದಂಪತಿ ವಶಕ್ಕೆ

[ad_2]

Source link publictv.in

Leave a Reply

Your email address will not be published. Required fields are marked *