Advertisement

ಇಸ್ರೇಲ್ ದಾಳಿಗೆ ಹಿಜ್ಬುಲ್ಲಾ ಮುಖ್ಯಸ್ಥನ ಸಹಾಯಕ ಮಟಾಶ್

[ad_1]

Hezbollah new chief Sheikh Naim Qassem

ಟೆಲ್‌ ಅವೀವ್‌: ಕದನ ವಿರಾಮದ ನಡುವೆಯೂ ಲೆಬನಾನ್‌ನಲ್ಲಿ(Lebanon) ಇಸ್ರೇಲ್‌ ಏರ್‌ಸ್ಟ್ರೈಕ್‌ ನಡೆಸಿ ಹಿಜ್ಬುಲ್ಲಾ ಮುಖ್ಯಸ್ಥ ನಯಿಮ್ ಕಾಸೆಮ್‌ನ(Naim Qassem) ಸೋದರಳಿಯ ಯೂಸುಫ್ ಹರ್ಷಿಯನ್ನು (Ali Yusuf Harshi) ಹತ್ಯೆ ಮಾಡಿದೆ.

ವೈಮಾನಿಕ ದಾಳಿಯಲ್ಲಿ ಅಲಿ ಯೂಸುಫ್ ಹರ್ಷಿ ಮೃತಪಟ್ಟಿದ್ದಾನೆ ಎಂದು ಎಂದು ಇಸ್ರೇಲಿ(Israel) ಮಿಲಿಟರಿ (IDF) ತಿಳಿಸಿದೆ.

ಹಿಜ್ಬುಲ್ಲಾ ಮುಖ್ಯಸ್ಥ ನಯಿಮ್ ಕಾಸೆಮ್ ವೈಯಕ್ತಿಕ ಕಾರ್ಯದರ್ಶಿ ಮತ್ತು ಆಪ್ತ ಸಲಹೆಗಾರರನಾಗಿ ಅಲಿ ಯೂಸುಫ್ ಹರ್ಷಿ ಕೆಲಸ ಮಾಡುತ್ತಿದ್ದ. ಹಿಜ್ಬುಲ್ಲಾ ಮುಖ್ಯಸ್ಥನ ಕಚೇರಿ ನಿರ್ವಹಣೆ ಮತ್ತು ಭದ್ರತೆಯ ಉಸ್ತುವಾರಿಯಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ.  ಇದನ್ನೂ ಓದಿ:  ಕದನ ವಿರಾಮ ಘೋಷಣೆ ಬೆನ್ನಲ್ಲೇ 10 ನಿಮಿಷದಲ್ಲಿ ಲೆಬನಾನ್‌ ಮೇಲೆ ಇಸ್ರೇಲ್‌ನಿಂದ 100 ಕ್ಷಿಪಣಿ ದಾಳಿ

ಬೈರುತ್‌ನ ‘ತಲ್ಲೆಟ್ ಖಯಾತ್’ ಎಂಬ ಪ್ರದೇಶದಲ್ಲಿರುವ ಕಟ್ಟಡವೊಂದರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಈತ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಈ ದಾಳಿಯಲ್ಲಿ ನಯಿಮ್ ಕಾಸೆಮ್ ಸಾವನ್ನಪ್ಪಿದ್ದಾನೆ ಎಂದು ಆರಂಭದಲ್ಲಿ ಕೆಲವು ವರದಿಗಳು ಪ್ರಕಟವಾಗಿದ್ದವು. ನಂತರ ಇಸ್ರೇಲಿ ಸೇನೆ ಮೃತಪಟ್ಟಿದ್ದು ಸೋದರಳಿಯ ಮತ್ತು ಕಾರ್ಯದರ್ಶಿಯಾಗಿದ್ದ ಅಲಿ ಯೂಸುಫ್ ಹರ್ಷಿ ಎಂದು ಸ್ಪಷ್ಟಪಡಿಸಿದೆ.

ಇಸ್ರೇಲ್‌ ನಯಿಮ್ ಕಾಸೆಮ್‌ ನೆಲೆಸಿದ್ದ ಕಟ್ಟಡ ಗುರಿಯಾಗಿಸಿ ದಾಳಿ ನಡೆಸಿತ್ತು. ದಾಳಿ (Air Strike) ನಡೆಸಿದ ಸಂದರ್ಭದಲ್ಲಿ ಆ ಕಟ್ಟಡದಲ್ಲಿ ಕಾಸೆಮ್‌ ಇರಲಿಲ್ಲ ಎಂದು ವರದಿಯಾಗಿದೆ.



[ad_2]

Source link publictv.in

Leave a Reply

Your email address will not be published. Required fields are marked *