Advertisement

2nd PUC ಪರೀಕ್ಷೆಯಲ್ಲಿ ಫಸ್ಟ್‌ ಕ್ಲಾಸ್‌ನಲ್ಲಿ ಪಾಸಾದ ಬಳ್ಳಾರಿ ಸೆಂಟ್ರಲ್‌ ಜೈಲಿನ ಕೈದಿ

[ad_1]

2nd PUC exam result ballari jail inmate pass

ಬಳ್ಳಾರಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (2nd PUC Results) ಬಳ್ಳಾರಿ ಸೆಂಟ್ರಲ್ ಜೈಲಿನ (Ballari Central Jail) ಶಿಕ್ಷಾ ಬಂಧಿ ಫಸ್ಟ್‌ ಕ್ಲಾಸ್‌ನಲ್ಲಿ ಪಾಸಾಗಿದ್ದಾನೆ. 600ಕ್ಕೆ 481 ಅಂಕಗಳನ್ನು ಪಡೆದಿದ್ದಾನೆ.

ಶಿಕ್ಷಾಬಂಧಿ ಅಶೋಕ್ ಕುಮಾರ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ಬಂದಿದ್ದಾನೆ. ಈತ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ. 600ಕ್ಕೆ 481 ಅಂಕ ಪಡೆಯುವ ಮೂಲಕ ಶೇ.81% ಫಲಿತಾಂಶದ ಸಾಧನೆ ಮಾಡಿದ್ದಾನೆ. ಇದನ್ನೂ ಓದಿ: 2nd PUC Result | ಗ್ರಾಮೀಣ ಪ್ರತಿಭೆ ಬಿಂದು ಈಗ ಟಾಪರ್‌ – ವಿಜ್ಞಾನ ವಿಭಾಗದಲ್ಲಿ 597 ಅಂಕ

ಕನ್ನಡದಲ್ಲಿ 82, ಇಂಗ್ಲಿಷ್ 69, ಇತಿಹಾಸ 94, ಅರ್ತಶಾಸ್ತ್ರ 84, ಸಮಾಜಶಾಸ್ತ್ರ 77, ರಾಜ್ಯಶಾಸ್ತ್ರ75 ಅಂಕ ಗಳಿಸಿದ್ದಾನೆ. ಶಿಕ್ಷಾಬಂಧಿ ಅಶೋಕ್ ಕುಮಾರ್ ಜೈಲಿನ ಪ್ರತ್ಯೇಕ ಸೆಲ್‌ನಲ್ಲಿಯೇ ಅಭ್ಯಾಸ ಮಾಡಿದ್ದ.

ಕೊಲೆ ಆರೋಪದಲ್ಲಿ ಕಳೆದ 7 ವರ್ಷಗಳಿಂದ ಈತ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾನೆ. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗಿ ಜೈಲಿನಲ್ಲಿದ್ದಾನೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರೂ ಓದುವ ಅಭ್ಯಾಸ ರೂಢಿಸಿಕೊಂಡಿದ್ದ. ಹೀಗಾಗಿ, ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದು ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗಿದ್ದಾನೆ. ಇದನ್ನೂ ಓದಿ: 2nd PUC Result | ದಕ್ಷಿಣ ಕನ್ನಡದ ದಿಶಾ ರಾಜ್ಯಕ್ಕೆ ಪ್ರಥಮ – 600ಕ್ಕೆ 600 ಅಂಕ

[ad_2]

Source link publictv.in

Leave a Reply

Your email address will not be published. Required fields are marked *