Advertisement

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ ಪ್ರಕ್ರಿಯೆ ಶುರು

[ad_1]

Social Media Ban

ಬೆಂಗಳೂರು: 16 ವರ್ಷ ಒಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ (Social Media Ban) ಬ್ಯಾನ್ ಪ್ರಕ್ರಿಯೆ ಶಿಕ್ಷಣ ಇಲಾಖೆ ಶುರು ಮಾಡಿದ್ದು, ವರದಿ ನೀಡಲು ಸಮಿತಿ ರಚನೆಗೆ ಮುಂದಾಗಿದೆ.

ಶಿಕ್ಷಣ ಇಲಾಖೆ ಅಧಿಕಾರಿಗಳು, ತಜ್ಞರು, ವಿವಿಧ ಇಲಾಖೆ ಮುಖ್ಯಸ್ಥರು, ಪೋಷಕರು ಒಳಗೊಂಡ ಸಮಿತಿ ರಚನೆಗೆ ಮುಂದಾಗಿದೆ. ಸಮಿತಿಗೆ ಸಚಿವರು ಗ್ರೀನ್ ಸಿಗ್ನಲ್ ಕೊಟ್ಟ ಕೂಡಲೇ ಪ್ರಕ್ರಿಯೆ ಶುರು ಮಾಡಲಿದ್ದಾರೆ. ಇದನ್ನೂ ಓದಿ: Video Viral | ಬೆಂಗಳೂರಲ್ಲಿ `ಜೊಂಬಿ ಡ್ರಗ್’ ನಶೆಯಲ್ಲಿ ತೇಲಾಡಿದ ಆರೋಪ – ನಟ ದುನಿಯಾ ವಿಜಯ್‌ ಕಳವಳ

2-3 ತಿಂಗಳ ಒಳಗೆ ವರದಿ ನೀಡಲು ಸಮಿತಿಗೆ ಗಡುವು ನೀಡಲಾಗಿದೆ. ಸೋಶಿಯಲ್ ಮೀಡಿಯಾ ಬ್ಯಾನ್ ಸ್ವರೂಪದ ಬಗ್ಗೆ ಅಧ್ಯಯನ ಮಾಡಿ ಸಾಧಕ-ಬಾಧಕದ ವಿವರ ಕೊಡಬೇಕು. ಸಮಿತಿ ಕೊಡುವ ವರದಿ ಮೇಲೆ ಸರ್ಕಾರ 16 ವರ್ಷದ ಒಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡೋ ಬಗ್ಗೆ ನಿರ್ಧಾರ ಮಾಡಲಿದೆ.

ಸಮಿತಿಯ ಕೆಲಸ ಏನು?

  • ಬ್ಯಾನ್ ಮಾಡಲು ಸ್ವರೂಪ ಹೇಗಿರಬೇಕು ಅಂತ ವರದಿ ನೀಡಬೇಕು
  • ಬೇರೆ ಬೇರೆ ದೇಶಗಳಲ್ಲಿ ವ್ಯವಸ್ಥೆ ಅಧ್ಯಯನ ಮಾಡಬೇಕು
  • ಶಾಲೆ, ಮನೆಗಳಲ್ಲಿ ಅನುಷ್ಠಾನ ಹೇಗೆ ಎಂಬ ಶಿಫಾರಸು ಮಾಡಬೇಕು
  • ಮಕ್ಕಳ ಕಲಿಕೆಗೆ ಸಮಸ್ಯೆ ಆಗದಂತೆ ಪರ್ಯಾಯ ಮಾರ್ಗದ ಬಗ್ಗೆ ವರದಿ
  • ಮಕ್ಕಳು, ಪೋಷಕರ ಪಾತ್ರದ ಬಗ್ಗೆ ವರದಿ ಸಮಿತಿ ಕೊಡಬೇಕು
  • ಬ್ಯಾನ್, ನಿರ್ಬಂಧ ಹಾಕುವ ವ್ಯವಸ್ಥೆಯ ಸ್ವರೂಪದ ಬಗ್ಗೆ ವರದಿ ನೀಡಬೇಕು
  • ಶಿಕ್ಷಕರ ಪಾತ್ರ, ಅನುಷ್ಠಾನದ ವ್ಯವಸ್ಥೆ ಹೇಗೆ ಎಂಬ ಮಾಹಿತಿ ಕೊಡಬೇಕು


[ad_2]

Source link publictv.in

Leave a Reply

Your email address will not be published. Required fields are marked *