Advertisement

ಕೊನೆಯಲ್ಲಿ ಮುಕುಲ್‌ ಅಬ್ಬರ; ರೋಚಕ ಪಂದ್ಯದಲ್ಲಿ ಲಕ್ನೋಗೆ 3 ವಿಕೆಟ್‌ ಜಯ – ಖಾತೆ ತೆರೆಯದ ಕೆಕೆಆರ್‌

[ad_1]

LSG Vs KKR 2 1

ಕೋಲ್ಕತ್ತಾ: ಕೊನೆಯಲ್ಲಿ ಮುಕುಲ್‌ ಚೌಧರಿ ಸ್ಫೋಟಕ ಅರ್ಧಶತಕದ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಇಂದಾದರೂ ಗೆದ್ದು ಖಾತೆ ತೆರೆಯುವ ನಿರೀಕ್ಷೆಯಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ಗೆ ಮತ್ತೆ ನಿರಾಸೆಯಾಗಿದೆ.

ಕೊನೇ ಎಸೆತದವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯವು ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತ್ತು, ಪ್ರತಿ ಎಸೆತದ ಫಲಿತಾಂಶ ಏನಿರುತ್ತದೆ ಅನ್ನೋ ಕೌತುಕ ಅಭಿಮಾನಿಗಳನ್ನು ಕಾಡುತ್ತಿತ್ತು. ಆದ್ರೆ ಸಿಕ್ಸರ್‌ ಬೌಂಡಿಗಳ ಮೂಲಕ ಅಬ್ಬರಿಸಿದ ಮುಕುಲ್‌ ಚೌಧರಿ, ಸ್ಫೋಟಕ ಫಿಫ್ಟಿ ಬಾರಿಸುವ ಜೊತೆಗೆ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

KKR 1

ಕೊನೆಯ ಓವರ್‌ ಥ್ರಿಲ್ಲರ್‌
ಆರಂಭದಲ್ಲೇ ರನ್‌ ಬಿಟ್ಟುಕೊಟ್ಟರೂ ಸ್ಪಿನ್ನರ್‌ಗಳ ಕೈಚಳಕದಿಂದ ಲಕ್ನೋ ತಂಡಕ್ಕೆ ಲಗಾಮು ಹಾಕಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿತ್ತು. ಆದ್ರೆ ಕೊನೇ 2 ಓವರ್‌ಗಳಲ್ಲಿ ಮುಕುಲ್‌ ಸಿಕ್ಸರ್‌ ಬೌಂಡರಿ ಬಾರಿಸುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದ್ರು. ಕೊನೇ ಓವರ್‌ನಲ್ಲಿ ಲಕ್ನೋ ಗೆಲುವಿಗೆ 14 ರನ್‌ಗಳ ಅಗತ್ಯವಿತ್ತು. ವೈಭವ್‌ ಅರೋರಾ ಬೌಲಿಂಗ್‌ನಲ್ಲಿದ್ದರು. ಮೊದಲ ಎಸೆತದಲ್ಲೇ 1 ರನ್‌ ಕದ್ದ ಅವೇಶ್‌ ಖಾನ್‌, ಅಬ್ಬರಿಸುತ್ತಿದ್ದ ಮುಕುಲ್‌ಗೆ ಕ್ರೀಸ್‌ ಬಿಟ್ಟುಕೊಟ್ಟರು. 2ನೇ ಎಸೆತದಲ್ಲಿ ಸಿಕ್ಸರ್‌ ಬಾರಿಸಿದ ಮುಕಲ್‌, ಮೂರು ಮತ್ತು 4ನೇ ಎಸೆತವನ್ನು ವ್ಯರ್ಥ ಮಾಡಿದರು. 5ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್‌ ಬಾರಿಸಿದ ಮುಕುಲ್‌ ಪಂದ್ಯವನ್ನು ಡ್ರಾನತ್ತ ತಿರುಗಿಸಿದ್ರು, ಕೊನೇ ಎಸತೆವನ್ನ ಬೀಟ್‌ ಮಾಡಿಕೊಂಡರೂ, ಬೈಸ್‌ ಮೂಲಕ ಒಂದು ರನ್‌ ಕದ್ದು ತಂಡಕ್ಕೆ ಗೆಲುವು ತಂದರು.

LSG Vs KKR

ಲಕ್ನೋ ಪರ ಮುಕುಲ್‌ ಚೌಧರಿ 54 ರನ್‌ (27 ಎಸೆತ, 7 ಸಿಕ್ಸರ್‌, 2 ಬೌಂಡರಿ), ಆಯುಷ್‌ ಬದೋನಿ 54 ರನ್‌ (34 ಎಸೆತ, 2 ಸಿಕ್ಸರ್‌, 7 ಬೌಂಡರಿ), ಏಡನ್‌ ಮಾರ್ಕ್ರಂ 2 ರನ್‌, ಮಿಚೆಲ್‌ ಮಾರ್ಷ್‌ 15 ರನ್‌, ಪಂತ್‌ 10 ರನ್‌, ನಿಕೊಲಸ್‌ ಪೂರನ್‌ 13 ರನ್‌, ಅಬ್ದುಲ್‌ ಸಮದ್‌ 2 ರನ್‌, ಮೊಹಮ್ಮದ್‌ ಶಮಿ, ಅವೇಶ್‌ ಖಾನ್‌ ತಲಾ 1 ರನ್‌ ಕೊಡುಗೆ ನೀಡಿದರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಕೆಕೆಆರ್‌ ಪರ ನಾಯಕ ಅಜಿಂಕ್ಯಾ ರಹಾನೆ 41 ರನ್‌, ಅಂಗ್‌ಕ್ರಿಶ್ ರಘುವಂಶಿ 45 ರನ್‌, ಕ್ಯಾಮರೂನ್‌ ಗ್ರೀನ್‌ 32 ರನ್‌, ರೋವ್ಮನ್‌ ಪೋವೆಲ್‌ 39 ರನ್‌, ಫಿನ್‌ ಅಲೆನ್‌ 9 ರನ್‌, ರಿಂಕು ಸಿಂಗ್‌ 4 ರನ್‌ ಗಳಿಸಿ ಔಟಾದರು.

[ad_2]

Source link publictv.in

Leave a Reply

Your email address will not be published. Required fields are marked *