Advertisement

Video Viral | ಬೆಂಗಳೂರಲ್ಲಿ `ಜೊಂಬಿ ಡ್ರಗ್’ ನಶೆಯಲ್ಲಿ ತೇಲಾಡಿದ ಆರೋಪ – ನಟ ದುನಿಯಾ ವಿಜಯ್‌ ಕಳವಳ

[ad_1]

Dunia Vijay

– ಎಣ್ಣೆ ಹೊಡೆದು ಮೆಡಿಸಿನ್ ತಗೊಂಡಿದ್ದಕ್ಕೆ ಈ ರೀತಿ ಆಗಿದೆ: ಪೊಲೀಸ್‌ ಆಯುಕ್ತರಿಂದ ಸ್ಪಷ್ಟನೆ

ಬೆಂಗಳೂರು: ನಿಂತಲ್ಲೆ ತೂರಾಡುವ ಚಲನರಹಿತವಾಗಿರುವ ಡ್ರಗ್ಸ್ ಬೆಂಗಳೂರಿಗೆ (Bengaluru) ಕಾಲಿಟ್ಟಿರುವ ಬಗ್ಗೆ ನಟ ದುನಿಯಾ ವಿಜಯ್ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಲ್ಲಿ ವ್ಯಕ್ತಿಯೋರ್ವ ನಿಂತಲ್ಲೇ ನಿಂತಿರುವ ವಿಡಿಯೋ ವೈರಲ್ (Video Viral) ಆಗಿದೆ. ಇದು ಜೊಂಬಿ ಡ್ರಗ್‌ನ ಪರಿಣಾಮ ಎಂಬ ಮಾತುಗಳು ಕೇಳಿಬಂದ ಬೆನ್ನಲ್ಲೇ ನಟ ದುನಿಯಾ ವಿಜಯ್ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Iran-US-Israel War | ಮಧ್ಯಪ್ರಾಚ್ಯ ಯುದ್ಧಕ್ಕೆ 4.62 ಲಕ್ಷ ಕೋಟಿ ಡಾಲರ್‌ ನೆರವು ಅಗತ್ಯ: ಐಎಂಎಫ್‌

ಯುವಕರು ಮತ್ತು ಪೋಷಕರು ಜಾಗೃತವಾಗಿರಬೇಕು ಅಂದಿದ್ದಾರೆ. ಬೆನ್ನಲ್ಲೇ ಈಶಾನ್ಯ ವಿಭಾಗದ ಪೊಲೀಸರು ತನಿಖೆ ಮಾಡಿದ್ದು, ಅಸಲಿಗೆ ಜೊಂಬಿ ಡ್ರಗ್ಸ್ ಎನ್ನುವುದೇ ಇಲ್ಲ. ವಿಡಿಯೋ ದಲ್ಲಿ ಇರುವ ವ್ಯಕ್ತಿ ಪಂಜಾಬ್ ಮೂಲದ ಲಾರಿ ಚಾಲಕ ರಾಜವೀರ್ ಸಿಂಗ್. ಅವರು ಅಫೀಮ್ ಸೇವಿಸಿದ್ದರು. ಇದೇ ಕಾರಣಕ್ಕೆ ಆತನ ಕುಟುಂಬ ಆತನನ್ನು ಡಿ-ಅಡಿಕ್ಷನ್ ಸೆಂಟರ್‌ಗೆ ಸೇರಿಸಿದ್ರು.

ಬಳಿಕ ಆತ ಬೆಂಗಳೂರಿಗೆ ಬಂದು ಲಾರಿ ಡ್ರೈವರ್‌ ಆಗಿದ್ದಾನೆ. ಈತನಿಗೆ ಆರ್ಥರೈಟಿಸ್ ಮತ್ತು ಸೈನಾಸಿಟಿಸ್ ಕಾಯಿಲೆ ಸಹ ಇದೆ, ಲಾರಿ ಚಾಲಕರ ಜೊತೆಗೆ ಸೇರಿ ಕಂಠ ಪೂರ್ತಿ ಮದ್ಯ ಸೇವಿಸಿದ್ದ, ಬಳಿಕ ಎರಡು ಮಾತ್ರೆಯನ್ನೂ ತೆಗೆದುಕೊಂಡಿದ್ದ. ಮಾತ್ರೆಗಳು ಮತ್ತು ಆಲ್ಕೊಹಾಲ್‌ನ ಕೆಮಿಕಲ್ ರಿಯಾಕ್ಷನ್ ನಿಂದ ಕಣ್ಣು ಮಂಜಾಗಿ, ಒಂದೇ ಕಡೆ ನಿಂತಿದ್ದ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ. ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿದ್ದ ವಿಡಿಯೋಗಳ ಬೆನ್ನತ್ತಿ ಪೊಲೀಸರು ಭೇದಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರ ಒಳ ಉಡುಪು ಕಳ್ಳತನ – ಆರೋಪಿ ವಶಕ್ಕೆ

CRIME

ಎಣ್ಣೆ ಹೊಡೆದು ಮೆಡಿಸಿನ್ ತಗೊಂಡಿದ್ದ: ಪೊಲೀಸ್‌ ಆಯುಕ್ತರು
ಇನ್ನೂ ವ್ಯಕ್ತಿ ಜೊಂಬಿ ಡ್ರಗ್ ನಶೆಯಲ್ಲಿ ತೆಲಾಡಿರೋ ಆರೋಪ ಪ್ರಕರಣದ ಕುರಿತು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್‌ ಸಿಂಗ್‌ ಅವರು ಸ್ಪಷ್ಟನೆ ನೀಡಿದ್ದಾರೆ. ವಿಡಿಯೋದಲ್ಲಿರೋ ವ್ಯಕ್ತಿಯನ್ನ ಪೊಲೀಸ್ರು ಪತ್ತೆ ಮಾಡಿದ್ದಾರೆ, ಆತ ಅನಾರೋಗ್ಯ ವಿಚಾರಕ್ಕೆ ಮೆಡಿಸನ್ ತಗೊಂಡಿದ್ದಾನೆ. ಆತನ ಮೆಡಿಕಲ್ ಮಾಡಿಸಿದ್ದು ಮೆಡಿಕಲ್ ನಲ್ಲಿ ಡ್ರಗ್ ಪತ್ತೆಯಾಗಿಲ್ಲ. ಈ ರೀತಿ ವಿಡಿಯೋ ಅಪ್ಲೋಡ್ ಮಾಡೋ ಮುನ್ನ ಯೋಚನೆ ಮಾಡಿ, ಮೊದಲು ಪೊಲೀಸ್ರಿಗೆ ತಿಳಿಸಿ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.

ಈ ರೀತಿ ಸುಖಾ ಸುಮ್ಮನೆ ವೈರಲ್ ಮಾಡೋದು ಸರಿಯಲ್ಲ. ಇದು ಸಿಟಿಗೆ ಮತ್ತು ಒಬ್ಬ ವ್ಯಕ್ತಿಗೆ ಕೆಟ್ಟ ಹೆಸರು ತರುವ ವಿಚಾರ ಆಗಿದೆ. ಈ ವಿಡಿಯೋ ವೈರಲ್ ಮಾಡಿರೋ ವ್ಯಕ್ತಿ ಪತ್ತೆ ಮಾಡಿ ಕ್ರಮ ಕೈಗೊಳ್ಳಯತ್ತೇವೆ. ನಮ್ಮ ಪೊಲೀಸರು ಡ್ರಗ್ ವಿಚಾರವಾಗಿ ಕೆಲಸ ಮಾಡ್ತಿದ್ದಾರೆ. ಆ ವ್ಯಕ್ತಿ ಇಲ್ಲಿಯವರು ಅಲ್ಲ ಅವರು ಎಣ್ಣೆ ಹೊಡೆದು ಮೆಡಿಸಿನ್ ತಗೊಂಡಿದ್ದಕ್ಕೆ ಈ ರೀತಿ ಆಗಿದೆ. ಡ್ರಗ್ ಬಗ್ಗೆ ಝೀರೋ ಟಾರಲೆನ್ಸ್ ಇದೆ. ಜನ ಆತಂಕ ಪಡೋದು ಬೇಡ. ಸಿಟಿ ಬಗ್ಗೆ ಅಪಪ್ರಚಾರ ಮಾಡಿದವರ ಮೇಲೆ ಕಾನೂನು ಕ್ರಮ ಆಗಲಿದೆ. ವಿಡಿಯೋ ಶೇರ್ ಮಾಡಿದವರಿಗೂ ನೋಟಿಸ್ ಜಾರಯಾಗಲಿದೆ ಎಂದು ತಿಳಿಸಿದ್ದಾರೆ.

[ad_2]

Source link publictv.in

Leave a Reply

Your email address will not be published. Required fields are marked *