Advertisement

ಜಲಪಾತದಲ್ಲಿ ಫೋಟೋ ತೆಗೆಯಲು ಹೋಗಿ 3 ಯುವತಿಯರು ಸಾವು: ಕೊನೆಯ ಕ್ಷಣ ಕ್ಯಾಮೆರಾದಲ್ಲಿ ಸೆರೆ

[ad_1]

ಬೇಸಿಗೆ ರಜೆ ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ. ಪೋಷಕರ ಮಾತನ್ನು ಮೀರಿ ಮಕ್ಕಳು ಹಳ್ಳ ಕೊಳ್ಳ, ಕೆರೆ ನದಿ ಸಮುದ್ರ ಅಂತ ಹೋಗಿ ಈಜಾಡಿ ತಮ್ಮ ಪ್ರಾಣಕ್ಕೆ ಸಂಚಾಕಾರ ತಂದುಕೊಳ್ಳುತ್ತಿದ್ದಾರೆ.

ನೆರೆರಾಜ್ಯ ಆಂಧ್ರಪ್ರದೇಶದಲ್ಲಿ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯಲ್ಲಿ ನೀರಿನಲ್ಲಿ ಈಜಾಡುತ್ತಿದ್ದಾಗಲೇ ಮೂವರು ಹದಿಹರೆಯದ ಬಾಲಕಿಯರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಈ ಘಟನೆಯ ಕೊನೆಯ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ನೀರಿನಲ್ಲಿ ಫೋಟೋ ತೆಗೆಯುವ ವೇಳೆಯೇ ಈ ಅವಘಡ ನಡೆದಿದೆ.

ಪೊಲೀಸರ ಪ್ರಕಾರ, ಈ ಹುಡುಗಿಯರು ಸೇತುವೆಯ ಬಳಿಯೇ ಫೋಟೋ ಹಾಗೂ ಸೆಲ್ಫಿ ವೀಡಿಯೋ ಮಾಡಿದ್ದಾರೆ. ಬಳಿಕ ಐವರಲ್ಲಿ ಮೂವರು ಹುಡುಗಿಯರು ಜಲಪಾತದ ಮಧ್ಯೆ ಇರುವ ದೊಡ್ಡ ಬಂಡೆಯೊಂದನ್ನು ಏರಿದ್ದಾರೆ. ಇದೇ ವೇಳೆ ಅವರು ಅಲ್ಲಿಂದ ಆಯತಪ್ಪಿ ನೀರಿಗೆ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಹೋಗಿದ್ದಾರೆ.

ರಜಾ ದಿನವಾಗಿದ್ದರಿಂದ ಜಂಬವಲಸಾ ಗ್ರಾಮದ ಐವರು ಹುಡುಗಿಯರು ಈ ಜಲಪಾತವನ್ನು ನೋಡುವುದಕ್ಕೆ ಹೋಗಿದ್ದು, ನೀರಿನಲ್ಲಿ ಈಜಾಡುತ್ತಾ ಎಂಜಾಯ್‌ ಮಾಡುತ್ತಿದ್ದಾಗ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದು, ದುರಂತ ನಡೆದಿದೆ. ಸ್ಥಳೀಯರು ರಕ್ಷಣೆ ಮಾಡಲು ಪ್ರಯತ್ನ ಪಟ್ಟರೂ ನೀರಿನ ಹರಿವಿನ ರಭಸಕ್ಕೆ ಸಿಲುಕಿ ಯುವತಿಯರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮೃತದೇಹಗಳನ್ನು ನಂತರ ನೀರಿನಿಂದ ಮೇಲೆತ್ತಲಾಗಿದೆ. 17 ವರ್ಷದ ತ್ರಿಶಾ, 16 ವರ್ಷದ ರತ್ನಕುಮಾರಿ, 16 ವರ್ಷದ ಪವಿತ್ರಾ ಮೃತಪಟ್ಟಿದ್ದಾರೆ. ಉಳಿದ ಇಬ್ಬರು ಯುವತಿಯರು ಸುರಕ್ಷಿತರಾಗಿದ್ದಾರೆ.

banner

ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದು, ತನಿಖೆ ನಡೆಯುತ್ತಿದೆ.



[ad_2]

Source link

Leave a Reply

Your email address will not be published. Required fields are marked *