[ad_1]

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬಿಸಿಲಿನ ಬೇಗೆಗೆ ಬೆಂದು ಹೋಗಿದ್ದ ಬೆಂಗಳೂರಿಗೆ (Bengaluru) ಇಂದು ಮಳೆರಾಯ (Rain) ತಂಪೇರಿದ್ದಾನೆ.
ಪೂರ್ವ ಮುಂಗಾರು ಹಾಗೂ ಕರ್ನಾಟಕದ (Karnataka) ಒಳನಾಡಿನಲ್ಲಿ ಟ್ರಫ್ (ವಾತಾವರಣದ ಮೇಲ್ಪದರದಲ್ಲಿ ಕಡಿಮೆ ಒತ್ತಡವಿರುವ ವಿಸ್ತೃತ ಪ್ರದೇಶ) ಹಿನ್ನೆಲೆ, ಮಳೆಯಾಗುತ್ತಿದೆ. ಇಂದು ಬೆಂಗಳೂರಿನ ವಿಜಯನಗರ, ಹೊಸಹಳ್ಳಿ, ಯಶವಂತಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಇದನ್ನೂ ಓದಿ: ಹಣೆಬರಹದಲ್ಲಿ ಎಲ್ಲಿ ಬರೆದಿದ್ಯೋ ಅಲ್ಲಿಂದ ಮುಂದಿನ ಚುನಾವಣೆಗೆ ಸ್ಪರ್ಧೆ – ನಿಖಿಲ್ ಕುಮಾರಸ್ವಾಮಿ

ಬಿಸಿಲ ಝಳಕ್ಕೆ ಹೈರಾಣರಾಗಿದ್ದ ಬೆಂಗಳೂರು ಜನ ಮಳೆಯಿಂದ ಕೂಲ್ ಕೂಲ್ ಆಗಿದ್ದಾರೆ. ಸಂಜೆಯ ತಂಪುಗಾಳಿ ಜನರನ್ನ ತಂಪಾಗಿಸಿದೆ. ಆದ್ರೆ ಮಳೆಯಿಂದಾಗಿ ಅಲ್ಲಲ್ಲಿ ಸಂಚಾರದಲ್ಲಿ ಅಸ್ತವ್ಯಸ್ತವೂ ಆಗಿದೆ. ಇದನ್ನೂ ಓದಿ: ಝಾಂಬಿ ಡ್ರಗ್ ಅನ್ನೋದೇ ಇಲ್ಲ, ಆತಂಕ ಬೇಡ – ಪರಮೇಶ್ವರ್ ಸ್ಪಷ್ಟನೆ

ಒಂದು ವಾರ ಭಾರೀ ಮಳೆ
ಮುಂದಿನ ಒಂದು ವಾರಗಳ ಕಾಲ ಮಳೆಯಾಗಲಿದ್ದು, ಇಂದು ಹಾಗೂ ನಾಳೆ ಬೆಂಗಳೂರಿನ ಕೆಲವೆಡೆ ಗುಡುಗು-ಮಿಂಚು ಸಹಿತ ಮಳೆಯ ಎಚ್ಚರಿಕೆಯನ್ನು ಹವಮಾನ ಇಲಾಖೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ ಸೇರಿದಂತೆ ಕೆಲವೆಡೆ ಮಳೆಯ ಮುನ್ಸೂಚನೆಯನ್ನು ನೀಡಲಾಗಿದೆ. ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ 6 ವರ್ಷದ ಹೆತ್ತ ಮಗನನ್ನೇ ಕೊಂದ ಪಾಪಿ ತಾಯಿ
[ad_2]
Source link publictv.in

















Leave a Reply