Advertisement

ಮದ್ದುಗುಂಡುಗಳನ್ನ ಯುದ್ಧನೌಕೆಗೆ ತುಂಬಿಸ್ತಿದ್ದೇವೆ – ಮಾತುಕತೆಗೆ ಒಪ್ಪದಿದ್ರೆ ಇರಾನ್‌ ಮೇಲೆ ಭೀಕರ ದಾಳಿ: ಟ್ರಂಪ್‌ ಕೊನೇ ವಾರ್ನಿಂಗ್‌

[ad_1]

Donald Trump Angry

– ಯುರೇನಿಯಂ ಹಸ್ತಾಂತರಿಸಬೇಕು, ಹಾರ್ಮುಜ್‌ ತೆರೆಯಬೇಕೆಂದು ಷರತ್ತು

ವಾಷಿಂಗ್ಟನ್‌: ಅಮೆರಿಕದ ಯುದ್ಧನೌಕೆಗಳಿಗೆ (US WarShips) ಅತ್ಯುನ್ನತ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನ ತುಂಬಿಸಲಾಗುತ್ತಿದೆ. ಇರಾನ್‌ ಮಾತುಕತೆಗೆ ಒಪ್ಪಿ ಒಪ್ಪಂದ ಮಾಡಿಕೊಳ್ಳದೇ ಇದ್ರೆ, ಭೀಕರ ದಾಳಿ ನಡೆಸಲಾಗುತ್ತದೆ. ಶಸ್ತ್ರಾಸ್ತ್ರಗಳನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ದೊಡ್ಡ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಇರಾನ್‌ (Iran) ಜೊತೆಗೆ ಮಾತುಕತೆ ನಡೆಸಲು ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ನೇತೃತ್ವದ ನಿಯೋಗ ಇಸ್ಲಾಮಾಬಾದ್‌ಗೆ ಭೇಟಿ ನೀಡಿದೆ. ಆದ್ರೆ ಲೆಬನಾನ್‌ ಮೇಲಿನ ದಾಳಿಗಳು ನಿಲ್ಲುವವರೆಗೂ ಮಾತುಕತೆಗೆ ಒಪ್ಪಲ್ಲ ಎಂದು ಇರಾನ್‌ ಹೇಳಿದೆ, ಜೊತೆಗೆ ಹಲವು ಷರತ್ತುಗಳನ್ನೂ ವಿಧಿಸಿದೆ. ಈ ಮಧ್ಯೆ ಟ್ರಂಪ್‌ ದೊಡ್ಡ ದಾಳಿಯ ಎಚ್ಚರಿಕೆ ಕೊಟ್ಟಿದ್ದಾರೆ.

US Air Force Jet

ಮುಂದಿನ 24 ಗಂಟೆಯಲ್ಲಿ ಎಲ್ಲವೂ ನಮಗೆ ತಿಳಿಯುತ್ತೆ. ಎಲ್ಲವನ್ನು ರೀಸೆಟ್‌ ಮಾಡಲಾಗ್ತಿದೆ. ಇದುವರೆಗೆ ತಯಾರಿಸಲಾದ ಅತ್ಯುನ್ನತ ಶ್ರೇಣಿಯ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಯುದ್ಧ ನೌಕೆಗಳಿಗೆ ಲೋಡ್‌ ಮಾಡುತ್ತಿದ್ದೇವೆ. ಈ ಹಿಂದೆ ಮಾಡಿದ್ದಕ್ಕಿಂದ ಉತ್ತಮವಾಗಿ ಅವುಗಳನ್ನು ಸ್ಫೋಟಿಸಲಿದ್ದೇವೆ. ಇರಾನ್‌ ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳದೇ ಇದ್ರೆ, ನಾವು ಅವುಗಳನ್ನ ಪರಿಣಾಮಕಾರಿಯಾಗಿ ಬಳಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಇರಾನ್‌ ಬಳಿ ಬೇರೆ ಕಾರ್ಡ್‌ಗಳಿಲ್ಲ
ಇರಾನ್‌ ಅಂತಾರಾಷ್ಟ್ರೀಯ ಜಲಮಾರ್ಗವನ್ನ ಬಳಸಿಕೊಂಡು ಸುಲಿಗೆ ಮಾಡುತ್ತಿದೆ. ಅಲ್ಪಾವಧಿಯ ಸುಲಿಗೆ ಹೊರತುಪಡಿಸಿ, ಅವರ ಬಳಿ ಯಾವುದೇ ಕಾರ್ಡ್‌ಗಳಿಲ್ಲ ಅಂತ ಇರಾನಿಯನ್ನರು ಅರಿತುಕೊಂಡಂತೆ ಕಾಣುತ್ತಿಲ್ಲ. ಅವರು ಇಂದು ಜೀವಂತವಾಗಿರುವುದಕ್ಕೆ ಏಕೈಕ ಕಾರಣ ಮಾತುಕತೆ. ಇರಾನ್‌ ಪುಷ್ಟೀಕರಿಸಿದ 1,000 ಪೌಂಡ್‌ಗಳಷ್ಟು ಯುರೇನಿಯಂ ಅನ್ನು ಹಸ್ತಾಂತರಿಸಬೇಕು. ಜೊತೆಗೆ ಹಾರ್ಮುಜ್‌ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

Iran Strait of Hormuz

ಮಾತುಕತೆಗೆ ಇರಾನ್‌ ಪ್ರತಿನಿಧಿಸುವ ಸಾಧ್ಯತೆ
ಇನ್ನೂ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹೊತ್ತಿನಲ್ಲೇ, ಇರಾನ್‌ ಇಸ್ಲಾಮಾಬಾದ್‌ ಮಾತುಕತೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮತ್ತು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್ ತಿಳಿಸಿದ್ದಾರೆ. ಅಲ್ಲದೇ ಇರಾನ್‌ ಯುರೇನಿಯಂ ಪುಷ್ಟೀಕರಿಸುವ ಹಕ್ಕು ಹೊಂದಿದೆ ಎಂಬ ತಂಬ ಹಿಂದಿನ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.

[ad_2]

Source link publictv.in

Leave a Reply

Your email address will not be published. Required fields are marked *