Advertisement

Chikkamaglur : ಚಿಕ್ಕಮಗಳೂರಲ್ಲಿ ಶ್ರೀನಂದಾ ಸಾವು ಪ್ರಕರಣ

[ad_1]

Chikkamaglur : ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಮೂರು ದಿನಗಳಿಂದ ನಾಪತ್ತೆಯಾಗಿದ್ದ 14 ವರ್ಷದ ಬಾಲಕಿ ಶ್ರೀನಂದಾ ಮೃತದೇಹ 2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಪತ್ತೆಯಾಗಿದೆ. ಇದುವರೆಗೂ ಶ್ರೀನಂದಾ ಕಾಲು ಜಾರಿ ಬಿದ್ದಿದ್ದಾಳೆ ಎನ್ನಲಾಗಿತ್ತು. ಇದೀಗ ಮರಣೋತ್ತರ ವರದಿಯಲ್ಲಿ ಅಚ್ಚರಿಯ ಸತ್ಯ ಬಯಲಾಗಿದೆ

ಮೂರು ದಿನಗಳ ಕಾಲ ನಿರಂತರ ಶೋಧ ಕಾರ್ಯಾಚರಣೆ ನಡೆದ ಬಳಿಕ, ಅರಿಶಿನಗುಪ್ಪೆ ಭಾಗದಿಂದ ಹೊರಟ ಶೋಧ ತಂಡಕ್ಕೆ ಸುಮಾರು ಮೂರ್ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಆಳವಾದ ಕಂದಕದ ಬಳಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಶ್ರೀನಂದಾ 2000 ಅಡಿ ಆಳದ ಪ್ರಪಾತದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆದ್ರೆ, ಶ್ರೀನಂದಾ ಅದು ಹೇಗೆ ಬಿದ್ದಿದ್ದಾಳೆ ಎನ್ನುವುದೇ ನಿಗೂಢವಾಗಿದೆ. ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರಬಹುದು ಎನ್ನಲಾಗಿತ್ತು. ಆದ್ರೆ, ತಂದೆ  ತಂದೆ ರಮೇಶ್, ಮೊಬೈಲ್ ವಿಚಾರಕ್ಕೆ ಮಗಳಿಗೆ ಬೈದಿದ್ದ ಬಗ್ಗೆ ಪೊಲೀಸರ ಮುಂದೆ ಹೇಳಿದ್ದಾರೆ. ಇದರಿಂದ ಶ್ರೀನಂದಾ, ಮಾಣಿಕ್ಯಧಾರಾ ಪಾರ್ಕಿಂಗ್ ಸ್ಥಳದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿತ್ತು. ಆದರೆ ಈಗ ಮರಣೋತ್ತರ ವರದಿಯಲ್ಲಿ ಬೇರೆಯ ವಿಚಾರ ಬಂದಿದೆ. 

ಮರಣೋತ್ತರ ವರದಿ ಪ್ರಕಾರ, ತಲೆಯ ಬಲಭಾಗಕ್ಕೆ ಗಂಭೀರವಾದ ಗಾಯವಾಗಿರುವುದೇ ಸಾವಿಗೆ ಕಾರಣ ಎಂದು ಉಲ್ಲೇಖಿಸಲಾಗಿದೆ. ಶ್ರೀನಂದಾ ಅವರ ದೇಹದಾದ್ಯಂತ ಗಾಯಗಳಾಗಿವೆ. ಹಲವು ಸ್ಥಳಗಳಲ್ಲಿ ಮೂಳೆಗಳು ಮುರಿದಿದ್ದು, ಇದೆಲ್ಲವೂ ಮೇಲಿಂದ ಬಿದ್ದು ಸಂಭವಿಸಿವೆ ಎಂದು ಮರಣೋತ್ತರ ವರದಿ ಹೇಳಿದೆ.

ಅಂದಹಾಗೆ, ನಿನ್ನೆ ರಾತ್ರಿ ಶ್ರೀನಂದಾಳ ಮೃತದೇಹದೊಂದಿಗೆ ಸಂಬಂಧಿಕರು ಮನೆಗೆ ಮರಳಿದರು. ಇಂದು ಅಂತ್ಯಕ್ರಿಯೆ ನಡೆಯಲಿದೆ. ಆಕೆಯ ಮೃತದೇಹದಲ್ಲಿ ಯಾವುದೇ ಅಸಾಮಾನ್ಯ ಸಂಗತಿಗಳು ಪತ್ತೆಯಾಗಿಲ್ಲ ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ. ಅಂದರೆ, ಇದು ಕೊಲೆಯಲ್ಲ ಎಂದು ನಂಬಲಾಗಿದೆ. ನಿನ್ನೆ ಬೆಳಗ್ಗೆ ನಡೆಸಿದ ಹುಡುಕಾಟದಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶ್ರೀನಂದಳಾ ಮೃತದೇಹ ಪತ್ತೆಯಾಗಿದೆ. ಈ ಸಮಯದಲ್ಲಿ ಶ್ರೀನಂದಾಳ ಬಟ್ಟೆ ಹರಿದಿದ್ದು, ಮರದ ಕೊಂಬೆಗಳು ಬಡಿದು ಸಾವಿಗೀಡಾಗಿರಬಹುದು ಎಂಬುದು ಪ್ರಾಥಮಿಕ ತೀರ್ಮಾನವಾಗಿದೆ.

banner



[ad_2]

Source link

Leave a Reply

Your email address will not be published. Required fields are marked *