Advertisement

ಪ್ರೀತಿಸಿದವಳ ಕಿಡ್ನ್ಯಾಪ್ ಮಾಡಿ ಅತ್ತೆಗೆ ಚಾಕು ಇರಿತ ಕೇಸ್ – ಚಿಕಿತ್ಸೆ ಫಲಿಸದೇ ಮಹಿಳೆ ಸಾವು

[ad_1]

ಬೆಂಗಳೂರು: ಪ್ರೀತಿಸಿದವಳ ಕಿಡ್ನ್ಯಾಪ್ ವೇಳೆ ಅಣ್ಣನ ಮಗನಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಆಡುಗೋಡಿಯಲ್ಲಿ ನಡೆದಿದೆ.

ಚಿಕಿತ್ಸೆ ಫಲಿಸದೇ ಅತ್ತೆ ಮಾಗೇಶ್ವರಿ (55) ಸಾವನ್ನಪ್ಪಿದ ಮಹಿಳೆ. ಮಾ.25 ರಂದು ಆಡುಗೋಡಿ ಮನೆಯಲ್ಲಿ ಮಾಗೇಶ್ವರಿಗೆ ಚಾಕು ಇರಿಯಲಾಗಿತ್ತು. ಇದನ್ನೂ ಓದಿ: ಬೇಲೂರು | ʻಗಜಾಸುರʼನ ದಾಳಿಗೆ ರೈತ ಬಲಿ – ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಮಾಗೇಶ್ವರಿ ಅಣ್ಣನ ಮಗ ಕಿರಣ್‌ಗೆ ಮದುವೆಯಾಗಿತ್ತು. ಆದರೂ ಮಾಗೇಶ್ವರಿ ಸಂಬಂಧಿಯೊಬ್ಬಳನ್ನು ಕರೆದುಕೊಂಡು ಹೋಗಿದ್ದ. ಕೆಲ ದಿನಗಳ ಹಿಂದೆ ಕಿರಣ್ ಬಿಟ್ಟು ಬಂದಿದ್ದ ಆಕೆ ಅಜ್ಜಿ ಜೊತೆ ಇದ್ದಳು. ಮಾ.25 ರಂದು ಆಕೆಯನ್ನು ಹುಡುಕಿಕೊಂಡು ಕಿರಣ್ & ಫ್ಯಾಮಿಲಿ ಬಂದಿತ್ತು. ಬಲವಂತವಾಗಿ ಆಕೆಯನ್ನ ಕಿಡ್ನ್ಯಾಪ್ ಮಾಡಿ ಕರ್ಕೊಂಡು ಹೋಗಿದ್ದರು.

ತಡೆಯಲು ಬಂದ ಮಾಗೇಶ್ವರಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದರು. ಬಳಿಕ ಆಕೆಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ನಿನ್ನೆ ಮಧ್ಯರಾತ್ರಿ ಚಿಕಿತ್ಸೆ ಫಲಿಸದೇ ಮಹಿಳೆ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ನಾಲ್ವರು ಆರೋಪಿಗಳ ಬಂಧನವಾಗಿದೆ. ಇದನ್ನೂ ಓದಿ: ಪ್ರೀತಿ ಹೆಸರಲ್ಲಿ ಯುವತಿಯಿಂದ ಮೋಸ ಆರೋಪ – ವಿಡಿಯೋ ಕಾಲ್ ಮಾಡಿ ಯುವಕ ಆತ್ಮಹತ್ಯೆ

ಪ್ರಕರಣ ಸಂಬಂಧ ಮನಿಕಿರಣ್, ಅಭಿಷೇಕ್, ಮನಿರಾಜ್, ಮಣಿವಣ್ಣನ್ ಬಂಧಿಸಲಾಗಿದೆ. ಸದ್ಯ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮಾಗೇಶ್ವರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

[ad_2]

Source link publictv.in

Leave a Reply

Your email address will not be published. Required fields are marked *