Advertisement

Koppala: ಹುಬ್ಬಳ್ಳಿ ಬೆನ್ನಲ್ಲೇ ಕೊಪ್ಪಳದಲ್ಲಿ ಲವ್ ಜಿಹಾದ್ – ಮುಸ್ತಫಾನ ಫೋನಲ್ಲಿ ಹಿಂದೂ ಯುವತಿಯರ ರಾಶಿ ರಾಶಿ ಫೋಟೋ, ವಿಡಿಯೋ ಪತ್ತೆ!!

[ad_1]

Koppala: ಕೆಲವು ದಿನಗಳಿಂದ ಹುಬ್ಬಳ್ಳಿಯಲ್ಲಿ ಮುಸ್ಲಿಂ ಯುವಕ ಸಮೀರ್ ಮುಲ್ಲಾನಿಂದ ನಡೆದ ಲವ್ ಜಿಹಾದ್ ಪ್ರಕರಣ ಒಂದು ಭಾರಿ ಸದ್ದು ಮಾಡುತ್ತಿದೆ. ಇದರ ಹಿಂದೆಯೇ ಇದೇ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದು ಹಿಂದೂ ಯುವತಿಗೆ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ನಡೆಸಿದ ಘಟನೆ ನಡೆದಿತ್ತು. ಆದರೆ ಇದೀಗ ಮತ್ತೆ ಅಚ್ಚರಿ ಎಂಬಂತೆ ಕೊಪ್ಪಳದಲ್ಲಿಯೂ ಶನಿವಾರ ಲವ್ ಜಿಹಾದ್ ಆರೋಪ ಕೇಳಿಬಂದಿದೆ.

ಕೊಪ್ಪಳ (Koppal) ತಾಲೂಕಿನ ಕಂಪ್ಲಿ ಗ್ರಾಮದ ಮುಸ್ತಫಾ ವಿರುದ್ಧ ಲವ್ ಜಿಹಾದ್  (Love Jihad) ಆರೋಪ ಕೇಳಿಬಂದಿದೆ. ನರ್ಸಿಂಗ್ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ, ಹಲವೆಡೆ ಸುತ್ತಾಡಿದ್ದಾನೆ. ಸದ್ಯ ಇದೇ ವಿದ್ಯಾರ್ಥಿನಿ ಲವ್ ಜಿಹಾದ್‌ಗೆ ಒಳಗಾಗಿದ್ದಾಳೆ ಎನ್ನಲಾಗಿದೆ. 

ಮುಸ್ತಫಾ ವಿದ್ಯಾರ್ಥಿನಿಯ ಜತೆಗಿದ್ದ ವೇಳೆ ಕೆಲ ಹಿಂದೂ ಯುವಕರ ಕೈಗೆ ಸಿಕ್ಕಿಕೊಂಡಿದ್ದಾನೆ. ಈ ವೇಳೆ ಯುವಕರು ಆತನ ಮೊಬೈಲ್‌ ಪರಿಶೀಲಿಸಿದಾಗ ಹಿಂದೂ ಯುವತಿಯರ ಪೋಟೋ, ವಿಡಿಯೋ ಪತ್ತೆಯಾಗಿವೆ. ಅಲ್ಲದೇ ಈತ ಜೂಜಾಟ, ಮಟ್ಕಾ ದಂಧೆ ನಡೆಸುತ್ತಿದ್ದ ಎಂಬ ಮಾಹಿತಿ ದೊರಕಿದೆ. ಮುಸ್ತಾಫ್ ತನ್ನ ಮೊಬೈಲ್‌ನಲ್ಲಿ ಹಿಂದೂ ಯುವತಿಯರ ಜತೆಗೆ ಇರುವ ಅಶ್ಲೀಲ ವಿಡಿಯೋ, ನಗ್ನ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಯುವಕರು ನಗರ ಪೊಲೀಸ್ ಠಾಣೆಗೆ ಮುಸ್ತಾಫ್‌ನನ್ನು ಒಪ್ಪಿಸಿದ್ದಾರೆ. ಈ ವೇಳೆ ಆತ ಹಿಂದೂ ಯುವತಿಯನ್ನು ಮದುವೆ ಆಗುವುದಾಗಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಇನ್ನು ಮುಸ್ತಫಾ ಮಟ್ಕಾ ಬುಕ್ಕಿಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಹಿಂದೂ ಜಾಗರಣಾ ವೇದಿಕೆ ಹಾಗೂ ವಿಶ್ವ ಹಿಂದೂ ಪರಿಷತ್‌ನ ಮುಖಂಡರು, ಕಾರ್ಯಕರ್ತರು ಎಸ್ಪಿ ಡಾ.ರಾಮ್ ಅರಸಿದ್ದಿಯವರನ್ನು ಭೇಟಿಯಾಗಿ ಮುಸ್ತಾಫಾ ಬಗ್ಗೆ ತಿಳಿಸಿದ್ದಾರೆ.

The post Koppala: ಹುಬ್ಬಳ್ಳಿ ಬೆನ್ನಲ್ಲೇ ಕೊಪ್ಪಳದಲ್ಲಿ ಲವ್ ಜಿಹಾದ್ – ಮುಸ್ತಫಾನ ಫೋನಲ್ಲಿ ಹಿಂದೂ ಯುವತಿಯರ ರಾಶಿ ರಾಶಿ ಫೋಟೋ, ವಿಡಿಯೋ ಪತ್ತೆ!! appeared first on Hosakananda.

[ad_2]

Source link

Leave a Reply

Your email address will not be published. Required fields are marked *