Advertisement

10ನೇ ವಯಸ್ಸಿನಲ್ಲಿ ಶುರುವಾದ ಗಾಯನದ ಬದುಕು – `ಸ್ವರʼ ನಿಲ್ಲಿಸಿದ ಆಶಾ ಭೋಸ್ಲೆ

[ad_1]

– ಗಂಧರ್ವ ಕಂಠದ ಗಾಯಕಿ ಪಯಣವೇ ಅದ್ಭುತ

ಆಶಾ ಭೋಸ್ಲೆ.. ಬರೋಬ್ಬರಿ 80 ವರ್ಷದ ತಮ್ಮ ಗಾಯನದ ಬದುಕನ್ನು ತೊರೆದಿದ್ದಾರೆ. 10ನೇ ವಯಸ್ಸಿಗೆ ಹಾಡಲು ಶುರು ಮಾಡಿದ ಗಾನಕೋಗಿಲೆ ಎಂಬ ಆಶಾ ಭೋಸ್ಲೆ (Asha Bhosle), ವಿವಿಧ ಭಾಷೆಗಳಲ್ಲಿ ಬರೋಬ್ಬರಿ 12 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. 8 ದಶಕಗಳ ಸುಂದರ ಬದುಕಿನ ಯಾನ ಮುಗಿಸಿದ ಸ್ವರ ಸಾಮ್ರಾಜ್ಞಿ ಇಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ (Breach Candy Hospital) ಕೊನೆಯುಸಿರು ಎಳೆದಿದ್ದಾರೆ.

ಶನಿವಾರ ಹೃದಯಾಘಾತದಿಂದ (Heart Attack) ಅಸ್ವಸ್ಥಗೊಂಡಿದ್ದ ಆಶಾ ಭೋಸ್ಲೆಯವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮಧ್ಯಾಹ್ನ 12 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸೋಮವಾರ (ಏ.13) ಸಂಜೆ 4 ಗಂಟೆ ಮುಂಬೈನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

Asha Bhosle 1

ಗಂಧರ್ವ ಕಂಠದ ಗಾಯಕಿ ಪಯಣವೇ ಅದ್ಭುತ
ಆಶಾ ಭೋಸ್ಲೆ ಅಂದ ತಕ್ಷಣ ನಮಗೆ ಕಿವಿಗೆ ಮಾರ್ಧವ ಹಾಗೂ ಮಾದಕದ ಒಂದು ಧ್ವನಿ ಸುಳಿದು ತಾಗುತ್ತದೆ. ಆಶಾ ಭೋಸ್ಲೆ ಮಧುರ ಗೀತೆಯಿಂದ ಹಿಡಿದು ಮಾದಕ ಗೀತೆಯನ್ನ ಹಾಡಿದವರು. 10ನೇ ವಯಸ್ಸಿನಲ್ಲಿ ಚಲಾ ಚಲ್ ನವ್ ಬಾಲಾ ಎಂಬ ಮರಾಠಿ ಸಿನಿಮಾಗೆ ಹಾಡು ಹಾಡುವ ಮೂಲಕ ತಮ್ಮ ಗಾಯನ ಬದುಕು ಆರಂಭಿಸಿದ ಆಶಾ ಜೀ. ನಂತರ ಹಿಂದಿರುಗಿ ನೋಡಲೇ ಇಲ್ಲ. ದಮ್ ಮಾರೋ ಧಮ್.. ಯೇ ಮೇರಾ ದಿಲ್ ಪ್ಯಾರ ಕಾ ದಿವಾನಾ.. ರಂಗೀಲಾರೆ ರೀತಿಯ ಮಾದಕ ಹಾಡುಗಳ ಜೊತೆ ಚುರಾಲಿಯಾ ಹೈ ತುಮ್ನೇ.. ರಾಧಾ ಕೈಸೇನ ಜಲೆದಂತ ಮಾಧುರ್ಯ ಭರಿತ ಹಾಡುಗಳನ್ನು ಕೂಡ ದಿವ್ಯ ಕಂಠದ ಗಾಯಕಿ ಹಾಡಿದ್ದಾರೆ.

ಭಾರತದ ಗಾನಕೋಗಿಲೆ ಲತಾ ಮಂಗೇಶ್ವರ್ ಸಹೋದರಿ ಆಶಾ ಭೋಸ್ಲೆ. ಲತಾ ಮಂಗೇಶ್ವರ್ ಮೆಲೋಡಿ ಕ್ವೀನ್ ಅಂತ ಖ್ಯಾತಿ ಪಡೆದ್ರೆ. ಆಶಾ ಭೋಸ್ಲೆ ತಮ್ಮದೇ ಬೇರೆ ಛಾಪು ಮೂಡಿಸಿದ್ರು. ಪಾಪ್ ಗಾಯನದಲ್ಲಿ ಹೆಸರುವಾಸಿಯಾದ್ರು. ಜಗತ್ತು ಆಶಾ ಭೋಸ್ಲೆಯವರನ್ನ ಕ್ವೀನ್ ಆಫ್ ಇಂಡಿಪಾಪ್ ಎಂದು ಕರೆಯಿತು. ಅಂದ್ರೆ ಭಾರತೀಯ ಪಾಪ್ ಜಗತ್ತಿನ ರಾಣಿ ಎಂದೇ ಖ್ಯಾತಿಯನ್ನು ಆಶಾಜೀ ಪಡೆದಿದ್ದರು..

Asha Bhosle and Narendra Modi

ಆಶಾ ಭೋಸ್ಲೆ ಅವರನ್ನೂ ನೂರಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿದ್ದವು. 1981 ರಲ್ಲಿ ಉಮ್ರಾವ್ ಜಾನ್ ಚಿತ್ರಕ್ಕಾಗಿ ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿ ಪಡೆದರು. 1988 ರಲ್ಲಿ ಇಜಾಜತ್ ಚಿತ್ರಕ್ಕಾಗಿ ತಮ್ಮ ಎರಡನೇ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು. 2000 ರಲ್ಲಿ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮತ್ತು 2008 ರಲ್ಲಿ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪುರಸ್ಕೃತರಾಗಿದ್ದರು.

ಭೀಮಸೇನ್ ಜೋಶಿಯವರ ಹಾಡು ಅಂದ್ರೆ ಆಶಾ ಭೋಸ್ಲೆಯವರಿಗೆ ಅಚ್ಚುಮೆಚ್ಚು. ಇನ್ನುಅವರಿಗೆ ಗಜಲ್‌ಗಳೆಂದ್ರೆ ಪಂಚಪ್ರಾಣ. ಅದರಲ್ಲೂ ಗುಲ್ಜಾರ್ ಅವರ ಗಜಲ್‌ಗಳು ಆಶಾ ಅವರಿಗೆ ತುಂಬಾ ಇಷ್ಟ. ಆರ್ ಬರ್ಮನ್ ಅವರ ಸಂಗೀತದಲ್ಲಿ ಆಶಾಜೀ ಅನೇಕ ಹಾಡುಗಳನ್ನ ಹಾಡಿದ್ದಾರೆ. ಇನ್ನೂ ಕನ್ನಡದ ಹಾಡುಗಳಿಗೂ ಆಶಾ ಬೋಸ್ಲೆ ದನಿ ಆಗಿದ್ದಾರೆ.

[ad_2]

Source link publictv.in

Leave a Reply

Your email address will not be published. Required fields are marked *