Advertisement

ರಫಾ ತಂತ್ರ ಬಳಸಿ ಲೆಬನಾನ್‌ನ್‌ ಮೇಲೆ ಇಸ್ರೇಲ್‌ ದಾಳಿ – ಮೂರು ಗ್ರಾಮ ಸಂಪೂರ್ಣ ನೆಲಸಮ

[ad_1]

Israel Strikes Lebanon

ಬೈರೂತ್‌: ಇಡೀ ಜಗತ್ತು ಈಗಷ್ಟೇ ನಿಟ್ಟುಸಿರು ಬಿಟ್ಟಿತ್ತು. ಅಮೆರಿಕ ಮತ್ತು ಇರಾನ್ (US Iran Talks) ನಡುವೆ ಸಂಧಾನ ಶುರುವಾಗಿದೆ, ಇನ್ನು ಯುದ್ಧ ನಿಲ್ಲುತ್ತೆ, ಪೆಟ್ರೋಲ್ ಬೆಲೆ ಇಳಿಯುತ್ತೆ, ಜಗತ್ತು ಶಾಂತಿಯಾಗುತ್ತೆ ಅಂತಾ ಕೋಟ್ಯಂತರ ಜನರು ಕನಸು ಕಂಡಿದ್ದರು. ಆದರೆ, ಆ ಎಲ್ಲಾ ಆಸೆಗಳ ಮೇಲೆ ಈಗ ತಣ್ಣೀರು ಎರಚಲಾಗಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಆ ಭೀಕರ 21 ಗಂಟೆಗಳ ಹೈವೋಲ್ಟೇಜ್ ಸಂಧಾನ ವಿಫಲವಾಗಿದೆ. ಸಂಧಾನ ಸಭೆ ವಿಫಲವಾದ ಬೆನ್ನಲ್ಲೇ ಇಸ್ರೇಲ್‌, ಲೆಬನಾನ್‌ (Lebanon) ಮೇಲೆ ತನ್ನ ದಾಳಿ ಮುಂದುವರಿಸಿದೆ.

ಮಾತುಕತೆ ವಿಫಲವಾದ ಬೆನ್ನಲ್ಲೇ ಹೆಜ್ಬುಲ್ಲಾ ರಾಕೆಟ್‌ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್‌ ಸೇನೆಯು (Israeli military) ಲೆಬನಾನ್‌ ಮೇಲೆ ದಾಳಿ ನಡೆಸಿದೆ. ಇದನ್ನೂ ಓದಿ: ಹೆಜ್ಬೊಲ್ಲಾ ಭದ್ರಕೋಟೆ ಟಾರ್ಗೆಟ್‌ ಮಾಡಿ ಇಸ್ರೇಲ್‌ ದಾಳಿ – 11 ಮಂದಿ ಸಾವು

Israel targets Hezbollah

ದಕ್ಷಿಣ ಲೆಬನಾನ್‌ನಲ್ಲಿರುವ ಹಳ್ಳಿಗಳ (Lebanese Villages) ಮೇಲೆ ಇಸ್ರೇಲ್‌ ಅತಿಭೀಕರ ವಾಯುದಾಳಿ ನಡೆಸಿದೆ. ಭಾರೀ ಪ್ರಮಾಣದ ರಿಮೋಟ್‌ ಕಂಟ್ರೋಲ್‌ ಸ್ಫೋಟಕಗಳನ್ನ ಹಾರಿಸಿ ದಕ್ಷಿಣ ಲೆಬನಾನ್‌ ನಲ್ಲಿರುವ ಮೂರು ಹಳ್ಳಿಗಳನ್ನ ಸಂಪೂರ್ಣ ನೆಲಸಮ ಮಾಡಿದೆ.

ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ನೀಡಿದ ಕರೆ ಮೇರೆಗೆ, ತೈಬೆಹ್‌, ನಕೌರಾ ಮತ್ತು ಡೀರ್‌ ಸೆರಿಯಾನ್‌ ಗಡಿ ಗ್ರಾಮಗಳಲ್ಲಿ ಇಸ್ರೇಲ್‌ ದಾಳಿ ನಡೆಸುವ ಮೂಲಕ ಇಡೀ ಹಳ್ಳಿಗಳನ್ನೇ ನಾಶ ಮಾಡಿದೆ. ದಾಳಿಯ ವಿಡಿಯೋವನ್ನ ಇಸ್ರೇಲ್‌ ಮಿಲಿಟರಿ ತನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಇರಾನ್‌-ಅಮೆರಿಕ ಸಂಧಾನ ಮಾತುಕತೆ ವಿಫಲ – ‘ಕಹಿ ಸುದ್ದಿ’ ಎಂದ ಯುಎಸ್‌ ಉಪಾಧ್ಯಕ್ಷ

ಗಾಜಾಪಟ್ಟಿಯ ರಫಾ, ಬೀಟ್‌ ಹನೌನ್‌ ನಿರಾಶ್ರಿತ ಕೇಂದ್ರಗಳ ಮೇಲೆ ಬಳಸಿದ ಕಾರ್ಯತಂತ್ರವನ್ನೇ ಬಳಸಿ ಇಸ್ರೇಲ್‌, ಲೆಬನಾನ್‌ನ ಗಡಿ ಗ್ರಾಮಗಳ ಮೇಲೆ ದಾಳಿ ಮಾಡಿದೆ. ಲೆಬನಾನ್‌ ಮಾಧ್ಯಮಗಳೂ ಇದನ್ನ ವರದಿ ಮಾಡಿವೆ. ಸದ್ಯಕ್ಕೆ ಸಾವು ನೋವಿನ ಬಗ್ಗೆ ವರದಿಗಳು ತಿಳಿದುಬಂದಿಲ್ಲ.

Gaza

ಕಳೆದ ವರ್ಷ ದಕ್ಷಿಣ ಗಾಜಾದ ರಫಾದಲ್ಲಿ, ಇಸ್ರೇಲ್‌ ಸೇನೆಯು ಶೇ.90 ರಷ್ಟು ಮನೆಗಳನ್ನ ನಾಶಪಡಿಸಿತ್ತು. ನಾಗರಿಕ ವಸತಿಗಳನ್ನು ದೊಡ್ಡ ಪ್ರಮಾಣದಲ್ಲಿ ನಾಶ ಮಾಡಿತ್ತು. ಅದೇ ತಂತ್ರವನ್ನು ಇಲ್ಲಿಯೂ ಬಳಸಿದೆ. ಗಡಿ ಗ್ರಾಮಗಳನ್ನ ವಾಸಕ್ಕೆ ಯೋಗ್ಯವಿಲ್ಲದಂತೆ ಮಾಡಲು ನಾಗರಿಕರ ಮನೆಗಳ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡಿದೆ ಎಂದು ಇರಾನ್‌ ಮಾಧ್ಯಮಗಳು ಆರೋಪಿಸಿವೆ.

2000 ಕ್ಕೂ ಹೆಚ್ಚು ಸಾವು
ದಕ್ಷಿಣ ಲೆಬನಾನ್‌ ಮೇಲೆ ಒಂದು ದಿನದ ಹಿಂದಷ್ಟೇ ದಾಳಿ ನಡೆಸಿದ್ದ ಇಸ್ರೇಲ್‌ 18 ಜನರನ್ನ ಹತ್ಯೆಗೈದಿತ್ತು. ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್‌ ದಾಳಿಗೆ ಲೆಬನಾನ್‌ನಲ್ಲಿ ಈವರೆಗೆ 2,000 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಇರಾನ್‌ ಯುದ್ಧ ಶುರುವಾದ ಬಳಿಕ ಫಸ್ಟ್‌ ಟೈಮ್‌ ಹಾರ್ಮುಜ್‌ ಜಲಸಂಧಿ ದಾಟಿದ 2 ಯುಎಸ್‌ ಯುದ್ಧನೌಕೆ

[ad_2]

Source link publictv.in

Leave a Reply

Your email address will not be published. Required fields are marked *