Advertisement

ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌ – ಲಕ್ನೋಗೆ ಲಗಾಮು ಹಾಕಿದ ಗುಜರಾತ್‌ಗೆ 7 ವಿಕೆಟ್‌ಗಳ ಜಯ

[ad_1]

ಲಕ್ನೋ: ಜೋಸ್‌ ಬಟ್ಲರ್‌ (Jos Buttler), ನಾಯಕ ಶುಭಮನ್‌ ಗಿಲ್‌ (Shubman Gill) ಅಮೋಘ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಗುಜರಾತ್‌ ಟೈಟಾನ್ಸ್‌ ತಂಡವು ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ವಿರುದ್ಧ 7 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ.

ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ (Lucknow Super Giants) ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 164 ರನ್‌ ಗಳಿಸಿತ್ತು. ಸ್ಪರ್ಧಾತ್ಮಕ ರನ್‌ ಗುರಿ ಬೆನ್ನಟ್ಟಿದ್ದ ಗುಜರಾತ್‌ 18.4 ಓವರ್‌ಗಳಲ್ಲೇ 3 ವಿಕೆಟ್‌ ನಷ್ಟಕ್ಕೆ 165 ರನ್‌ ಬಾರಿಸಿ ಗೆಲುವು ಸಾಧಿಸಿತು.

Shubman Gill Jos Buttler 2

ಚೇಸಿಂಗ್‌ ಆರಂಭಿಸಿದ ಜಿಟಿ ಪರ ನಾಯಕ ಶುಭಮನ್‌ ಗಿಲ್‌ ಆರಂಭದಲ್ಲೇ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಮುಂದಾದರು. ಆದ್ರೆ ನಿಧಾನ ಗತಿಯ ಬ್ಯಾಟಿಂಗ್‌ ಶುರು ಮಾಡಿದ ಸಾಯಿ ಸುದರ್ಶನ್‌ 14 ಎಸೆತಗಳಲ್ಲಿ ಕೇವಲ 15 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಬಳಿಕ ಗಿಲ್‌ ಜೊತೆಗೂಡಿದ ಜೋಸ್‌ ಬಟ್ಲರ್‌ ಸ್ಫೋಟಕ ಫಿಫ್ಟಿ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

ಗುಜರಾತ್‌ ಪರ ಗಿಲ್‌ 40 ಎಸೆತಗಳಲ್ಲಿ 56 ರನ್‌ (1 ಸಿಕ್ಸರ್‌, 6 ಬೌಂಡರಿ) ಚಚ್ಚಿದ್ರೆ, ಬಟ್ಲರ್‌ 37 ಎಸೆತಗಳಲ್ಲಿ 11 ಬೌಂಡರಿ ಸಹಿತ 60 ರನ್‌ ಬಾರಿಸಿ ಔಟಾದರು. ಇನ್ನೂ ವಾಷಿಂಗ್ಟನ್‌ ಸುಂದರ್‌ ಅಜೇಯ 21 ರನ್‌, ರಾಹುಲ್‌ ತೆವಾಟಿಯಾ ಅಜೇಯ 10 ರನ್‌ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

Rishabh Pant

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಲಕ್ನೋ ಪರ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಮತ್ತೆ ವೈಫಲ್ಯ ಅನುಭವಿಸಿದರು. ಆರಂಭಿಕ ಏಡನ್‌ ಮಾರ್ಕ್ರಂ 30 ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಯಾರೊಬ್ಬರೂ 20 ರನ್‌ಗಳ ಗಡಿ ದಾಟಲಿಲ್ಲ. ಇದು ತಂಡದ ಸೋಲಿಗೆ ಕಾರಣವಾಯಿತು.

Prasidh Krishna

ಆರಂಭಿಕ ಮಿಚೆಲ್ ಮಾರ್ಷ್(4 ಎಶೆತದಲ್ಲಿ 11) ಅವರನ್ನು ರಬಾಡಾ ಮತ್ತು ನಾಯಕ ರಿಷಬ್ ಪಂತ್ (11 ಎಸೆತದಲ್ಲಿ 18) ಅವರ ವಿಕೆಟ್ ಅನ್ನು ಸಿರಾಜ್ ಅವರು ಪಡೆದು ಲಖನೌಗೆ ಆಘಾತ ನೀಡಿದ್ದರು. ಈ ಸಂದರ್ಭದಲ್ಲಿ ಕ್ರೀಸ್ ನಲ್ಲಿ ಸೆಟ್ ಆಗಲು ಪ್ರಯತ್ನಿಸಿದ ಐಡನ್ ಮಾರ್ಕಂ ದೊಡ್ಡ ಇನ್ನಿಂಗ್ಸ್ ಆಡುವ ಸೂಚನೆ ನೀಡಿದರು. ಆದರೆ ಪ್ರಸಿದ್ಧ ಕೃಷ್ಣ ಅವರು ಮಾರ್ಕಂಗೆ ಪೆವಿಲಿಯನ್‌ ದಾರಿ ತೋರಿದರು.

[ad_2]

Source link publictv.in

Leave a Reply

Your email address will not be published. Required fields are marked *