Advertisement

ಹಾರ್ದಿಕ್ ವಿಕೆಟ್‌ ಉರುಳಿದಾಗ ಕುಣಿದು ಕುಪ್ಪಳಿಸಿದ ಅಣ್ಣ ಕೃನಾಲ್ ಪಾಂಡ್ಯ – ಬ್ರದರ್‌ vs ಬ್ರದರ್ ವಿಡಿಯೋ ವೈರಲ್‌!

[ad_1]

Krunal Pandya Hardik Pandya

ವಾಂಖೆಡೆಯಲ್ಲಿ ಭಾನುವಾರ (ಏ.12) ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs MI) ನಡುವಿನ ಐಪಿಎಲ್‌ (IPL) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಔಟ್‌ ಆದಾಗ ಅವರ ಸಹೋದರ ಕೃನಾಲ್ ಪಾಂಡ್ಯ ಕುಣಿದು ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಬೀಸಿದ ಆರ್‌ಸಿಬಿ, ಫಿಲ್ ಸಾಲ್ಟ್ (78) ಮತ್ತು ನಾಯಕ ರಜತ್ ಪಾಟಿದಾರ್ (53) ಅವರ ಸ್ಫೋಟಕ ಆಟದ ನೆರವಿನಿಂದ 240/4 ರ ಬೃಹತ್ ಮೊತ್ತ ಪೇರಿಸಿತು. ವಿರಾಟ್ ಕೊಹ್ಲಿ 50 ರನ್, ಟೀಮ್ ಡೇವಿಡ್‌ ಅಜೇಯ 34 ರನ್ ಸಿಡಿಸಿ ಮಿಂಚಿದರು. ಇದನ್ನೂ ಓದಿ: ಫೋನ್‌ ಬಳಸಿ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ರೋಮಿ – RR ವ್ಯವಸ್ಥಾಪಕನಿಗೆ ಬಿಸಿಸಿಐ ನೋಟಿಸ್‌; ಕಾಡ್ತಿದೆಯಾ ಬ್ಯಾನ್‌ ಭೀತಿ?

ಆರ್‌ಸಿಬಿ ನೀಡಿದ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, ಶೆರ್ಫೇನ್ ರುದರ್ಫೋರ್ಡ್ (71*) ಅವರ ಹೋರಾಟದ ಹೊರತಾಗಿಯೂ 222/5 ರನ್‌ ಗಳಿಸಿ 18 ರನ್‌ಗಳಿಂದ ಸೋಲಿಗೆ ಶರಣಾಯಿತು. ಪಂದ್ಯದ ನಡುವೆ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ನಡುವಿನ ವರ್ತನೆ ಅಭಿಮಾನಿಗಳ ಗಮನ ಸೆಳೆದಿದೆ.

ಹಾರ್ದಿಕ್ ಪಾಂಡ್ಯ ಜೇಕಬ್‌ ಢಪಿ ಬೌಲಿಂಗ್‌ಲ್ಲಿ ಕ್ಯಾಚ್ ನೀಡಿ ಔಟ್ ಆದರು. ಈ ವೇಳೆ ಕೃನಾಲ್ ಬೌಲರ್‌ಗಿಂತಲೂ ಕೃನಾಲ್ ಹೆಚ್ಚು ಸಂಭ್ರಮಿಸಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಅಲ್ಲದೆ, ಪಂದ್ಯ ಮುಗಿದ ನಂತರ ಎರಡೂ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡಿದರು. ಆದರೆ, ಕೃನಾಲ್ ಹಾಗೂ ಹಾರ್ದಿಕ್ ಕೈಕುಲುಕದೆ ದೂರ ಉಳಿದಿದ್ದರು. ಹಿಂದೆಲ್ಲ ಪಂದ್ಯದ ಬಳಿಕ ಸಹೋದರರಿಬ್ಬರು ಮೈದಾನದಲ್ಲಿ ಮಾತುಕತೆ ನಡೆಸುತ್ತಿದ್ದರು. ಈ ಬಾರಿ ಅಂತಹ ಯಾವುದೇ ದೃಶ್ಯ ಕಂಡುಬಂದಿಲ್ಲ. ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನದಲ್ಲಾದ ಬದಲಾವಣೆಗಳು ಮತ್ತು ನತಾಶಾ ಸ್ಟಾಂಕೋವಿಕ್ ಅವರಿಂದ ಬೇರ್ಪಟ್ಟ ನಂತರ ಪಾಂಡ್ಯ ಕುಟುಂಬದಲ್ಲಿ ಬಿರುಕು ಮೂಡಿದ್ದೇ ಇದಕ್ಕೆ ಕಾರಣ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಯಾವುದೂ ವರ್ಕೌಟ್ ಆಗ್ತಿಲ್ಲ – ಹ್ಯಾಟ್ರಿಕ್ ಸೋಲಿನ ಬಳಿಕ ಹೊಸ ಪ್ಲ್ಯಾನ್‌ ಬಗ್ಗೆ ಹಾರ್ದಿಕ್ ಮಾತು



[ad_2]

Source link publictv.in

Leave a Reply

Your email address will not be published. Required fields are marked *