[ad_1]
2
Hassan: ಹಾಸನದಲ್ಲಿ 8 ವರ್ಷಗಳ ಹಿಂದೆಯೇ ಮದುವೆಯಾಗಿದ್ದ ಮಹಿಳೆ ತನ್ನ ಗಂಡನನ್ನು ಬಿಟ್ಟು ರಾತ್ರೋ ರಾತ್ರಿ ಲವರ್ ಜೊತೆ ಪರಾರಿಯಾಗಿದ್ದು, ಕಾರಿನಲ್ಲೇ ಪ್ರಿಯಕರನ ಕೈಯಿಂದ ತಾಳಿ ಕಟ್ಟಿಸಿಕೊಂಡಿರುವ ಘಟನೆ ನಡೆದಿದೆ.


ಪತಿಯನ್ನು ಮುಕುಂದೂರು ಗ್ರಾಮದ ಪ್ರಕಾಶ್ ಹಾಗೂ ಪತ್ನಿಯನ್ನು ಅರಕಲಗೂಡು (Arkalgud) ತಾಲ್ಲೂಕಿನ ಮುಂಡಗೋಡು ಗ್ರಾಮದ ಹರ್ಷಿತಾ ಎಂದು ಗುರುತಿಸಲಾಗಿದ್ದು, ಪ್ರಿಯಕನ ಜೊತೆ ಮದುವೆಯಾದ ಗೃಹಿಣಿ ಎಂದು ತಿಳಿದುಬಂದಿದೆ.
ಹರ್ಷಿತಾಗೆ 2017ರಲ್ಲಿ ಪ್ರಕಾಶ್ ಅವರೊಂದಿಗೆ ವಿವಾಹವಾಗಿತ್ತು. ಪ್ರಕಾಶ್ ಅವರು ಹರ್ಷಿತಾ ಅವರ ಅತ್ತೆಯ ಮಗನಾಗಿದ್ದು, ದಂಪತಿಗೆ ಏಳು ವರ್ಷದ ಗಂಡು ಮಗನಿದ್ದಾನೆ. ಆಸ್ಪತ್ರೆಗೆ ಹೋಗುತ್ತೇನೆ ಎಂದು ಹೋದ ಹರ್ಷಿತಾ ಅಲ್ಲಿಂದಲೇ ತನ್ನ ಪ್ರಿಯಕರ ಸಚಿನ್ ಜೊತೆ ಕಾರಿನಲ್ಲಿ ತೆರಳಿ ವಿವಾಹವಾಗಿದ್ದಾರೆ. ಮಗ ಹಾಗೂ ಪತಿಯನ್ನು ತೊರೆದು ಪ್ರಿಯಕರನ ಜೊತೆ ಹೋದ ಹರ್ಷಿತಾಳ ಕೃತ್ಯಕ್ಕೆ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಪತಿ ಪ್ರಕಾಶ್ ಪತ್ನಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ
[ad_2]
Source link

















Leave a Reply