Advertisement

SSLC ಪರೀಕ್ಷೆಗೆ 525 ಅಂಕ – ಕರಡು ಅಧಿಸೂಚನೆ ಹೊರಡಿಸಿದ ಶಿಕ್ಷಣ ಇಲಾಖೆ

[ad_1]

SSLC

ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ (SSLC Exam) 525 ಅಂಕ ನೀಡುವ ನಿಯಮ ಬದಲಾವಣೆ ಮಾಡಿರುವ ವಿಚಾರದಲ್ಲಿ ಶಿಕ್ಷಣ ಇಲಾಖೆ (Education Department) ಕರಡು ಅಧಿಸೂಚನೆ ಹೊರಡಿಸಿದೆ. ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 7 ದಿನ ಅವಕಾಶ ನೀಡಲಾಗಿದ್ದು ಆಕ್ಷೇಪಣೆ ಸಲ್ಲಿಸಬಹುದಾಗಿದೆ‌‌.

ಅಧಿಸೂಚನೆಯಲ್ಲಿ 525 ಅಂಕಗಳ ಅನುಷ್ಠಾನ ಹೇಗೆ ನಡೆಯಲಿದೆ ಎಂಬುದನ್ನು ತಿಳಿಸಲಾಗಿದೆ. ಅದರಂತೆ ತೃತೀಯ ಭಾಷೆ ವಿಷಯದಲ್ಲಿ ಅಂಕಗಳ ಬದಲಾಗಿ ಗ್ರೇಡ್ ಸಿಸ್ಟಮ್ ವಿವರಿಸಲಾಗಿದೆ.  ಇದನ್ನೂ ಓದಿ:  ಪಿಯುಸಿ ಎರಡೂ ಪರೀಕ್ಷೆಗಳಲ್ಲಿ ಪಡೆದ ಅತ್ಯಧಿಕ ಅಂಕಗಳನ್ನೇ ಸಿಇಟಿ ಫಲಿತಾಂಶಕ್ಕೆ ಪರಿಗಣನೆ: ಕೆಇಎ

ಈ ಮೊದಲು 625 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿತ್ತು. ಈಗ ತೃತೀಯ ಭಾಷೆಗೆ ನೀಡಲಾಗುತ್ತಿದ್ದ 100 ಅಂಕ ತೆಗೆಯಲಾಗಿದೆ. ಹಾಗಾಗಿ ಐದು ಭಾಷೆಯ ವಿಷಯಗಳಿಗೆ 525 ಅಂಕಗಳಿಗೆ ಫಲಿತಾಂಶ ನೀಡಲಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಒಟ್ಟು 525 ಅಂಕಗಳಲ್ಲಿ ಕನಿಷ್ಠ 173 ಅಂಕಗಳನ್ನು ಗಳಿಸಬೇಕು. ಅಂದರೆ ಶೇ.33ರಷ್ಟು ಅಂಕ ಗಳಿಸಬೇಕು. ಅಲ್ಲದೇ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.30 ರಷ್ಟು ಅಂಕಗಳನ್ನು ಪಡೆಯುವುದು ಕಡ್ಡಾಯವಾಗಲಿದೆ.

ತೃತೀಯ ಭಾಷೆಯ ಪರೀಕ್ಷೆಯಲ್ಲಿ ಅಂಕಗಳ ಬದಲಾಗಿ ಗ್ರೇಡ್ ನೀಡಲಾಗುತ್ತದೆ. 80-100 ರಷ್ಟು ಅಂಕ ಗಳಿಸಿದರೆ A ಗ್ರೇಡ್, 50-79 ರಷ್ಟು ಅಂಕ ಗಳಿಸಿದ್ರೆ B ಗ್ರೇಡ್ 49 ರಷ್ಟು ಅಂಕ ಗಳಿಸಿದ್ರೆ C ಗ್ರೇಡ್ ಅಂತ ಕೊಡಲಾಗುತ್ತದೆ. ಹೊಸ ನಿಯಮ 2025-26ನೇ ಸಾಲಿನಿಂದಲೇ ಜಾರಿಗೆ ಬರಲಿದೆ.

[ad_2]

Source link publictv.in

Leave a Reply

Your email address will not be published. Required fields are marked *