Advertisement

ಗಂಡನನ್ನು ಬಿಟ್ಟು ‘ಮೊನಾಲಿಸಾ’ ಪರಾರಿ? ವಿಡಿಯೋ ಮಾಡಿ ಕಣ್ಣೀರು ಹಾಕಿದ ಫರ್ಮಾನ್

[ad_1]

Monalisa: ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಯುವತಿ ಮೊನಾಲಿಸಾ ಬೋಂಸ್ಲೆ ರಾತ್ರೋರಾತ್ರಿ ಫೇಮಸ್ ಆಗಿದ್ದು ಗೊತ್ತೇಯಿದೆ. ತನ್ನ ಸುಂದರ ಕಣ್ಣುಗಳಿಂದಲೇ ಮೋಡಿ ಮಾಡಿ, ಫೇಮಸ್ ಚೆಲುವೆ ಇದೀಗ ದಿಢೀರನೆ 6 ತಿಂಗಳಿನಿಂದ ಪ್ರೀತಿಸುತ್ತಿದ್ದ ಮುಸ್ಲಿಂ ಯುವಕ ಫರ್ಮಾನ್ ಎಂಬುವವನ ಜೊತೆ ಪೋಷಕರ ವಿರೋಧದ ನಡುವೆ ಕೇರಳದಲ್ಲಿ ಮೊನಾಲಿಸಾ ಮದುವೆ ನಡೆದಿತ್ತು. ಈ ಘಟನೆ ಹಲವಾರು ತಿರುವುಗಳನ್ನು ಪಡೆದುಕೊಂಡಿತ್ತು. ಆದರೆ ಇದೀಗ ಅಚ್ಚರಿ ಎಂಬಂತೆ ಮನಾಲಿಸಾ ತನ್ನ ಪತಿಯನ್ನು ಬಿಟ್ಟು ಓಡಿ ಹೋಗಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.

 ಮನಾಲಿಸಾ ಮತ್ತು ಫರ್ಮಾನ್ ಮದುವೆಯಾದ ಬೆನ್ನಲ್ಲೇ ಮುನಾಲಿಸಾಹಳಿಗೆ ಇನ್ನೂ 18 ವರ್ಷ ತುಂಬಿಲ್ಲ, ಅವಳು ಇನ್ನು ಅಪ್ರಾಪ್ತೇ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಿರುವಾಗ ಈ ಲವ್ ಸ್ಟೋರಿ ಇನ್ನೊಂದು ತಿರುವು ಪಡೆದಿದ್ದು ಮೊನಾಲಿಸಾ ಕಾಣೆಯಾಗಿದ್ದಾಳೆ ಎಂದು ಫರ್ಮಾನ್ ಖಾನ್ ಅಲವತ್ತುಕೊಂಡಿದ್ದಾರೆ. ಈ ಕುರಿತು ವಿಡಿಯೋ ಮೂಲಕ ಮಾಹಿತಿಯನ್ನು ಹಂಚಿಕೊಂಡಿರುವ ಫರ್ಮಾನ್, ಮೊನಾಲಿಸಾ ಕಾಣೆಯಾಗಿದ್ದಾಳೆ ಎಂದು ಹೇಳಿದ್ಧಾರೆ.

 ಈ ಕುರಿತಾಗಿ ಮುನಾಲಿಸಾ ಗಂಡ ಫರ್ಮನ್ ವಿಡಿಯೋ ಮಾಡಿದ್ದು, ಅದರಲ್ಲಿ ಮೊನಾಲಿಸಾನ ಹುಡುಕಿಕೊಂಡು ರಾಜಸ್ಥಾನದ ಪುಷ್ಕರ್‌ಗೆ ಬಂದಿರುವುದಾಗಿ ಕೂಡ ಫರ್ಮಾನ್ ಖಾನ್ ಹೇಳಿದ್ದು, ಮೊನಾಲಿಸಾನ ಹುಡುಕುವ ಪ್ರಯತ್ನ  ಮಾಡುತ್ತಿರುವುದಾಗಿ ಹೇಳಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಮೊನಾಲಿಸಾ ಅವರ ತಾಯಿ ಲತಾ ಭೋಸ್ಲೆ ಇದು ತನಿಖೆಯ ದಾರಿ ತಪ್ಪಿಸುವ ಸಂಚು ಎಂದು ಹೇಳಿದ್ದಾರೆ.ಎಲ್ಲೇ ಇದ್ದರೂ ದಯಮಾಡಿ ಮನೆಗೆ ಬಾ ಎಂದು ಕೂಡ ಮೊನಾಲಿಸಾ ಬಳಿ ಮನವಿಯನ್ನು ಮಾಡಿಕೊಂಡಿರುವ ಅವರ ತಾಯಿ ಲತಾ, ನಾವೆಲ್ಲ ನಿನ್ನ ಜೊತೆ ಇದ್ದೇವೆ, ಹೆದರಬೇಡ ಎಂದು ಹೇಳಿದ್ದಾರೆ. ಮಗಳ ಸುರಕ್ಷತೆಗಾಗಿ ಪೊಲೀಸರಲ್ಲಿ ಮತ್ತು ಸರ್ಕಾರದಲ್ಲಿ ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ.



[ad_2]

Source link

Leave a Reply

Your email address will not be published. Required fields are marked *