Advertisement

ಗಾಂಜಾ ಸೇವಿಸಿ ವಿಚಿತ್ರ ವರ್ತನೆ – ವಿದ್ಯಾರ್ಥಿ ವಿರುದ್ಧ ಸುಮೊಟೊ ಕೇಸ್ ದಾಖಲು

[ad_1]

Vinobanagar Police Station

ಶಿವಮೊಗ್ಗ: ಗಾಂಜಾ ಸೇವಿಸಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಪದವಿ ವಿದ್ಯಾರ್ಥಿ ವಿರುದ್ಧ ವಿನೋಬನಗರ (Vinoba Nagar) ಪೊಲೀಸ್ ಠಾಣೆಯಲ್ಲಿ ಸುಮೊಟೊ ಕೇಸ್ (Suo Moto Case) ದಾಖಲಾಗಿದೆ.

ಶಿವಮೊಗ್ಗದ (Shivamogga) ವಿನೋಬನಗರ ಠಾಣೆ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ನಡೆಸುತ್ತಿದ್ದಾಗ, ಸಾರ್ವಜನಿಕ ಸ್ಥಳವೊಂದರಲ್ಲಿ ಪದವಿ ಓದುತ್ತಿರುವ ಯುವಕನೊಬ್ಬ ಅಸ್ವಸ್ಥನಂತೆ ತೂರಾಡುತ್ತಿರುವುದು ಕಂಡುಬಂದಿದೆ. ಆತನ ವರ್ತನೆಯಲ್ಲಿ ವ್ಯತ್ಯಾಸ ಕಂಡುಬಂದ ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಯುವಕ ಗಾಂಜಾ ಸೇವನೆ ಮಾಡಿರಬಹುದೆಂಬ ಅನುಮಾನದ ಮೇಲೆ ಆತನನ್ನು ತಕ್ಷಣವೇ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: 2 ವರ್ಷದ ಬಳಿಕ ವಿಧಾನಸೌಧಕ್ಕೆ ಬಂದ ಹೆಚ್‌ಡಿಕೆ – ಮಂಡ್ಯದಲ್ಲಿ ARAI ಕೇಂದ್ರದ ಜೊತೆ ಕೈಗಾರಿಕಾ ಹಬ್‌ ಸ್ಥಾಪನೆಗೆ ಚಿಂತನೆ

ಆಸ್ಪತ್ರೆಯಿಂದ ಬಂದ ವೈದ್ಯಕೀಯ ವರದಿಯಲ್ಲಿ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ವಿನೋಬನಗರ ಪೊಲೀಸರು ಆತನ ವಿರುದ್ಧ ಮಾದಕ ವಸ್ತು ಸೇವನೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಂತ್ರಾಲಯ ರಾಯರ ಮಠಕ್ಕೆ ಮಂಜೂರಾದ ಜಾಗದ ಸರ್ವೆಗೆ ಭಾರೀ ವಿರೋಧ – ಹಲವರು ವಶಕ್ಕೆ


[ad_2]

Source link publictv.in

Leave a Reply

Your email address will not be published. Required fields are marked *