Advertisement

ಲವರ್ ಗಾಗಿ ಹೆತ್ತ ತಂದೆ-ತಾಯಿಗೆ ಚಪಾತಿಯಲ್ಲಿ ಇಲಿ ಪಾಷಣ ಹಾಕಿದ ಅಪ್ರಾಪ್ತ ಬಾಲಕಿ!!

[ad_1]

MP: ಪ್ರೀತಿ ಮಾಡುವವರು ತಾಳ್ಮೆಯಿಂದ ಕಾದು ತಮ್ಮ ಪೋಷಕರನ್ನು ಒಪ್ಪಿಸಿ ಕೊನೆಗೆ ಮದುವೆಯಾಗುತ್ತಾರೆ. ಕೆಲವೊಮ್ಮೆ ಪೋಷಕರು ನಿರಾಕರಿಸಿದಾಗ ತಮ್ಮ ಪ್ರೀತಿಯನ್ನು ತ್ಯಾಗ ಮಾಡುವುದು ಉಂಟು. ಆದರೆ ಇಲ್ಲೊಂದೆಡೆ ತನ್ನ ಲವರ್ ಗಾಗಿ ಹೆತ್ತ ತಂದೆ ತಾಯಿಗೆ ಬಾಲಕಿ ಒಬ್ಬಳು ಚಪಾತಿಯಲ್ಲಿ ಇಲಿ ಪಾಷಾಣ ಹಾಕಿದ್ದಾಳೆ. ಆಶ್ಚರ್ಯವೇನೆಂದರೆ ಆಕೆ ಇನ್ನು ಅಪ್ರಾಪ್ತ ಬಾಲಕಿ.

ಮಧ್ಯಪ್ರದೇಶದ ಮೊರೆನಾದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಪ್ರಿಯಕರನ ಜತೆ ಮದುವೆಯಾಗಲು ಹೆತ್ತ ತಂದೆ – ತಾಯಿಯನ್ನೇ ವಿಷವಿಕ್ಕಿ ಕೊಲ್ಲಲು ಯತ್ನಿಸಿರುವ ಘಟನೆ ಭಾನುವಾರ (ಏ.12) ನಡೆದಿರುವುದು ವರದಿಯಾಗಿದೆ. ಬಾಲಕಿ ಚಪಾತಿಯಲ್ಲಿ ಇಲಿ ಪಾಷಾಣವನ್ನು ಹಾಕಿದ್ದು, ಇದನ್ನು ಹೆತ್ತವರು ಸೇವಿಸಿ ಅಸ್ವಸ್ಥರಾಗಿದ್ದಾರೆ. ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪೋಷಕರ ಪರಿಸ್ಥಿತಿ ಗಂಭೀರವಾಗಿದೆ  

ಗೊತ್ತಾಗಿದ್ದು ಹೇಗೆ?

ಬಾಲಕಿ ಆಕೆಯ ಗೆಳೆಯ ಸುದಾಮನಿಗೆ ಕೃತ್ಯವೆಸಗುವ ಬಗ್ಗೆ ಕುರಿತು ಮಾತನಾಡಿದ್ದು, ಇದು ಮೊಬೈಲ್‌ನಲ್ಲಿ ರೆಕಾರ್ಡ್‌ ಆಗಿದೆ. ಹತ್ತಿರದಲ್ಲಿ ಅಂಗಡಿ ಇದೆ. ಅಲ್ಲಿಂದ ಇಲಿ ಪಾಷಾಣ ತರಸುತ್ತೇನೆ. ಇವತ್ತು ನಾನು ರೊಟ್ಟಿ ಮಾಡುತ್ತಿದ್ದೇನೆ. ಇದೇ ಅವಕಾಶ. ನಾನು ರೊಟ್ಟಿಗಳಲ್ಲಿ ವಿಷ ಬೆರೆಸಿ ಅಪ್ಪ – ಅಮ್ಮನಿಗೆ ಬಡಿಸುತ್ತೇನೆ ಎನ್ನುವ ಸಂದೇಶವನ್ನು ಬಾಲಕಿ ಆಕೆಯ ಪ್ರಿಯಕರನಿಗೆ ಕಳುಹಿಸಿದ್ದಾಳೆ.

banner

ಪೊಲೀಸರಿಗೆ ವಿಚಾರ ತಲುಪಿದಾಗ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿದ್ದು, ಬಾಲಕಿಯ ಮೊಬೈಲ್‌ನಲ್ಲಿದ್ದ ಆಡಿಯೋದಿಂದ ಕೃತ್ಯ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿ ಮತ್ತು ಆಕೆಯ ಗೆಳೆಯ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ 



[ad_2]

Source link

Leave a Reply

Your email address will not be published. Required fields are marked *