Advertisement

1 ದಿನಕ್ಕೆ 4 ಸಾವಿರ ಕೋಟಿ ರೂ. – ನೌಕಾ ದಿಗ್ಬಂಧನದಿಂದ ಇರಾನ್‌ ಆರ್ಥಿಕತೆಗೆ ಭಾರೀ ನಷ್ಟ!

[ad_1]

ಟೆಹ್ರಾನ್‌: ಅಮೆರಿಕವು(USA) ಇರಾನ್‌ನ ಬಂದರುಗಳ ಮೇಲೆ ವಿಧಿಸಿರುವ ನೌಕಾ ದಿಗ್ಬಂಧನದಿಂದಾಗಿ (Naval Blockade) ಇರಾನ್ ದೇಶಕ್ಕೆ ಪ್ರತಿದಿನ ಅಂದಾಜು 435 ಮಿಲಿಯನ್ ಡಾಲರ್ (4,073 ಕೋಟಿ ರೂ.) ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.

ದಿಗ್ಬಂಧನದಿಂದಾಗಿ ಇರಾನ್‌ನ(Iran)ತೈಲ ಮತ್ತು ಇತರ ಉತ್ಪನ್ನಗಳ ರಫ್ತು ಸ್ಥಗಿತಗೊಳ್ಳಲಿದ್ದು, ಇದರಿಂದ ಪ್ರತಿದಿನ ಸುಮಾರು 276 ಮಿಲಿಯನ್ (2,585 ಕೋಟಿ ರೂ.) ಆದಾಯ ನಷ್ಟವಾಗಲಿದೆ.  ಇದನ್ನೂ ಓದಿ: ಟ್ರಂಪ್‌ ಎಚ್ಚರಿಕೆ ಬೆನ್ನಲ್ಲೇ ಹಾರ್ಮುಜ್ ದಾಟದೇ ಯೂಟರ್ನ್‌ ಹೊಡೆದ 2 ಪಾಕ್‌ ತೈಲ ಟ್ಯಾಂಕರ್‌ಗಳು

ಅಗತ್ಯ ವಸ್ತುಗಳ ಆಮದು ಸ್ಥಗಿತಗೊಳ್ಳುವುದರಿಂದ ಪ್ರತಿದಿನ ಸುಮಾರು 159 ಮಿಲಿಯನ್ (1,489 ಕೋಟಿ ರೂ.) ಮೌಲ್ಯದ ಆರ್ಥಿಕ ಹಾನಿ ಸಂಭವಿಸಲಿದೆ. 

 

ಈ ದಿಗ್ಬಂಧನ ಮುಂದುವರಿದರೆ ಇರಾನ್ ಪ್ರತಿ ತಿಂಗಳು ಸುಮಾರು 13 ಬಿಲಿಯನ್ ಡಾಲರ್‌(1,21,778 ಕೋಟಿ ರೂ.) ನಷ್ಟು ಬೃಹತ್ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಇರಾನ್‌ನ ಬೊಕ್ಕಸಕ್ಕೆ ಬರುವ ಬಹುಪಾಲು ಆದಾಯ ತೈಲದಿಂದ ಬರುತ್ತದೆ. ಇದನ್ನೂ ಓದಿ: ಇರಾನ್‌ ಜೊತೆಗಿನ ಮಾತುಕತೆ ವಿಫಲವಾದ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ಶೇ.11 ರಷ್ಟು ಏರಿಕೆ

[ad_2]

Source link publictv.in

Leave a Reply

Your email address will not be published. Required fields are marked *