Advertisement

1 ಪಂದ್ಯ, 3 ವಿಕೆಟ್‌, 3 ದಾಖಲೆ – ʻರಾಜʼರನ್ನು ಉರುಳಿಸಿ ಇತಿಹಾಸ ಬರೆದ ಪ್ರಫುಲ್‌ ಹಿಂಗೆ ಯಾರು?

[ad_1]

Praful Hinge 1 1

ಹೈದರಾಬಾದ್‌: ಘಟಾನುಘಟಿ ಬೌಲರ್‌ಗಳು ವಿಕೆಟ್‌ ಪಡೆಯಲು ಪರದಾಡುತ್ತಿರುವಾಗ ಸನ್‌ ರೈಸರ್ಸ್‌ ಹೈದರಾಬಾದ್‌ (SRS) ತಂಡದ ವೇಗಿ ಪ್ರಫುಲ್‌ ಹಿಂಗೆ(Praful Hinge) ರಾಜಸ್ಥಾನ ರಾಯಲ್ಸ್‌(Rajasthan Royals) ವಿರುದ್ಧ ಮೊದಲ  ಓವರಿನಲ್ಲಿ ಮೂರು ವಿಕೆಟ್‌ ಪಡೆದು ಐಪಿಎಲ್‌ನಲ್ಲಿ (IPL) ದಾಖಲೆ ಬರೆದಿದ್ದಾರೆ.

ಐಪಿಎಲ್‌ ಪಿಚ್‌ಗಳು ಬ್ಯಾಟಿಂಗ್‌ ಸ್ನೇಹಿಯಾಗಿವೆ ಎಂಬ ಆರೋಪದ ಮಧ್ಯೆ ತಮ್ಮ ಮೊದಲ ಪಂದ್ಯದಲ್ಲೇ ಹಿಂಗೆ ತಮ್ಮ ಮೊದಲ ಎರಡು ಓವರ್‌ಗಳಲ್ಲಿ 4 ವಿಕೆಟ್‌ ಪಡೆದಿರುವುದು ವಿಶೇಷ.

ಮೊದಲ ಓವರಿನ ಎರಡನೇ ಎಸೆತದಲ್ಲಿ ವೈಭವ್‌ ಸೂರ್ಯವಂಶಿ ಕೀಪರ್‌ಗೆ ಕ್ಯಾಚ್‌ ನೀಡಿದರೆ ನಾಲ್ಕನೇ ಎಸೆತದಲ್ಲಿ ಧ್ರುವ್‌ ಜರೇಲ್‌ ಬೌಲ್ಡ್‌ ಆದರು. 6ನೇ ಎಸೆತದಲ್ಲಿ ಲ್ಹುವಾನ್-ಡ್ರೆ ಪ್ರಿಟೋರಿಯಸ್ ಅವರು ಸಿಕ್ಸ್‌ ಸಿಡಿಸಲು ಹೋಗಿ ಕ್ಯಾಚ್‌ ನೀಡಿ ಔಟಾದರು.

ಮೂರು ದಾಖಲೆ:
19 ವರ್ಷಗಳ ಐಪಿಎಲ್‌ ಇತಿಹಾಸದಲ್ಲಿ ಮೊದಲ ಓವರ್‌ನಲ್ಲಿ ಮೂವರನ್ನು ಔಟ್‌ ಮಾಡಿದ ಮೊದಲ ಬೌಲರ್‌ ಎಂಬ ದಾಖಲೆಯನ್ನು ಹಿಂಗೆ ಬರೆದಿದ್ದಾರೆ. ಇದರೊಂದಿಗೆ ಪಾದಾರ್ಪಣೆಗೈದ ಮೊದಲ ಪಂದ್ಯದಲ್ಲೇ ಈ ದಾಖಲೆ ಬರೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲದೇ ಔಟಾಗಿರುವ ಮೂವರು ಬ್ಯಾಟರ್‌ಗಳು ಶೂನ್ಯಕ್ಕೆ ಔಟಾಗಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.

ಏಪ್ರಿಲ್ 11 ರಂದು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಾಯಕ ಇಶಾನ್ ಕಿಶನ್ ಅವರು ಜಯದೇವ್ ಉನದ್ಕತ್ ಬದಲಿಗೆ ಪ್ರಫುಲ್‌ ಹಿಂಗೆ ಅವರ ಹೆಸರನ್ನು ಸೇರಿಸಿದ್ದರು. ಆದರೆ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅಡಿಯಲ್ಲಿ ಕೊನೆಯ ನಿಮಿಷದ ಬದಲಾವಣೆಗಳಿಂದಾಗಿ ಅವರು ಪಂದ್ಯದಲ್ಲಿ ಆಡಲು ಸಾಧ್ಯವಾಗಿರಲಿಲ್ಲ.  ಇದನ್ನೂ ಓದಿ: 114 ಎಸೆತ ಹಾಕಿಯೂ ವಿಕೆಟ್‌ ಪಡೆಯದ ಬುಮ್ರಾ

Praful Hinge 1

ಯಾರಿದು ಪ್ರಫುಲ್‌ ಹಿಂಗೆ?
ಮಹಾರಾಷ್ಟ್ರದ ನಾಗ್ಪುರದ ಪ್ರಫುಲ್‌ ಪ್ರಕಾಶ್‌ ಹಿಂಗೆ ದೇಶೀಯ ಕ್ರಿಕೆಟ್‌ನಲ್ಲಿ ವಿದರ್ಭ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.  24 ವರ್ಷದ ಬಲಗೈ ಮಧ್ಯಮ ವೇಗದ ಬೌಲರ್ ಆಗಿರುವ ಇವರು ದೇಶೀಯ ಕ್ರಿಕೆಟ್‌ನ ಪ್ರಥಮ ದರ್ಜೆ ಪಂದ್ಯಗಳಲ್ಲಿ ವಿದರ್ಭ ಪರ ಉತ್ತಮ ಪ್ರದರ್ಶನ ನೀಡಿದ್ದು, 10 ಪಂದ್ಯಗಳಿಂದ 27 ವಿಕೆಟ್‌ಗಳನ್ನು ಪಡೆದಿದ್ದಾರೆ.

ಆರಂಭದಲ್ಲಿ ಇವರು ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. ನಂತರ ತಂದೆಯ ಸಲಹೆಯಂತೆ ವೇಗದ ಬೌಲಿಂಗ್‌ಗೆ ಬದಲಾದರು. ಇವರು ಚೆನ್ನೈನ MRF ಪೇಸ್ ಫೌಂಡೇಶನ್‌ನಲ್ಲಿ ಮತ್ತು ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ತರಬೇತಿ ಪಡೆದಿದ್ದಾರೆ. ಮೆಗ್ರಾತ್ ಅವರಿಂದಲೂ ಬೌಲಿಂಗ್‌ ಪಾಠ ಕಲಿತಿರುವ ಇವರಿಗೆ ಭಾರತದ ಅನುಭವಿ ವೇಗಿ ಉಮೇಶ್ ಯಾದವ್ ಅವರು ಪ್ರಫುಲ್ ಅವರಿಗೆ ಮೆಂಟರ್ ಆಗಿ ಮಾರ್ಗದರ್ಶನ ನೀಡುತ್ತಿದ್ದಾರೆ.  ಇದನ್ನೂ ಓದಿ: ಯಾವುದೂ ವರ್ಕೌಟ್ ಆಗ್ತಿಲ್ಲ – ಹ್ಯಾಟ್ರಿಕ್ ಸೋಲಿನ ಬಳಿಕ ಹೊಸ ಪ್ಲ್ಯಾನ್‌ ಬಗ್ಗೆ ಹಾರ್ದಿಕ್ ಮಾತು

ಮಧ್ಯಮ ವರ್ಗದ ಕುಟುಂಬದಿಂದ ಬಂದ ಇವರ ತಂದೆ ರಾಜ್ಯ ವಿದ್ಯುತ್ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿಂದಿನ ವರ್ಷದ ಹರಾಜಿನಲ್ಲಿ ಇವರು ಮಾರಾಟವಾಗಿರಲಿಲ್ಲ. ಈ ಬಾರಿಯ ಮಿನಿ ಹರಾಜಿನಲ್ಲಿ ಹೈದರಾಬಾದ್ ತಂಡವು 30 ಲಕ್ಷ ರೂ. ಮೂಲ ಬೆಲೆಗೆ ಹಿಂಗೆ ಅವರನ್ನು ಖರೀದಿಸಿತ್ತು.



[ad_2]

Source link publictv.in

Leave a Reply

Your email address will not be published. Required fields are marked *